ಮದುವೆ ಮುನ್ನವೇ ವರದಕ್ಷಿಣೆ ಕಿರುಕುಳ: ವಿಡಿಯೋ ಮಾಡಿ ಪ್ರಾಣ ಬಿಟ್ಟ ಯುವತಿ..

badoun woman
Published on

ಬದೌನ್​: ವರದಕ್ಷಿಣೆಯನ್ನು ನಿಷೇಧಿಸಿದ್ದರೂ ಈ ಪಿಡುಗು ಸಮಾಜದಲ್ಲಿ ಕಂಡು ಬರುತ್ತಿದೆ. ಈ ಪಿಡುಗಿಗೆ ಮುದುವೆ ಮುನ್ನವೇ ಯುವತಿಯೊಬ್ಬಳು ಬಲಿಯಾಗಿರುವ ಘಟನೆ ಉತ್ತರ ಪ್ರದೇಶದ ಬದೌನ್​ದಲ್ಲಿ ನಡೆದಿದೆ.

ಇದನ್ನೂ ಓದಿ: 70 ಅಡಿಯ ಕಂದಕದಲ್ಲಿ ಸಿಲುಕಿದ ಕಾರ್ಮಿಕ: 45 ಗಂಟೆಗಳ ಕಾರ್ಯಾಚರಣೆ ನಡೆಸಿದ ರಕ್ಷಣಾ ಸಿಬ್ಬಂದಿ..

ಮೃತ ಯುವತಿಯನ್ನು ಸಪ್ನಾ ಎಂದು ಗುರುತಿಸಲಾಗಿದ್ದು, ಸರ್ಕಾರಿ ನೌಕರಿಯಲ್ಲಿರುವ ಯುವಕ ವರದಕ್ಷಿಣೆ ಸಲುವಾಗಿ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಆರೋಪಿಸಿ ಭಾನುವಾರ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡುವ ಮೂಲಕ ಬಾಲಕಿ ತನ್ನ ನೋವನ್ನು ವ್ಯಕ್ತಪಡಿಸಿದ್ದಾಳೆ. ಮಾಹಿತಿ ತಿಳಿದ ಪೊಲೀಸರು ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸದ್ಯ ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನೆ ಹಿನ್ನೆಲೆ:
ಬದೌನ್‌ನ ಉಫೈಟಿ ಪೊಲೀಸ್ ಠಾಣೆ ವ್ಯಾಪ್ತಿಯ ಕರಿಯಾಮಾಯಿ ಗ್ರಾಮದ ಈ ಹುಡುಗಿಯ ಸಂಬಂಧವನ್ನು ಸುಮಾರು ಎರಡು ವರ್ಷಗಳ ಹಿಂದೆ ವಜಿರ್‌ಗಂಜ್ ಗ್ರಾಮದ ವಿಕಾಸ್​ ಎಂಬಾತನ ಜತೆಗೆ ನಿಗದಿಪಡಿಸಲಾಗಿತ್ತು. ಕಳೆದ ಎರಡು ವರ್ಷಗಳಿಂದ ಎರಡು ಕುಟುಂಬಗಳ ನಡುವೆ ಮಾತುಕತೆ ನಡೆಯುತ್ತಿದ್ದು, ಮದುವೆ ನಡೆಯುವುದು ಹುಡುಗಿಯ ಮನೆಯವರಿಗೆ ಖಚಿತವಾಗಿತ್ತು.

ಈ ನಂಬಿಕೆಯೊಂದಿಗೆ ಹುಡುಗಿ ಮತ್ತು ಹುಡುಗನ ನಿಶ್ಚಿತಾರ್ಥವನ್ನು ಸಹ ಸಮಾಜದ ಮುಂದೆ ಅದ್ದೂರಿಯಾಗಿ ಮಾಡಿದ ನಂತರ, ವರದಕ್ಷಿಣೆ ವಿಷಯ ಬಂದಾಗ, ಹುಡುಗರು ತಮ್ಮ ನಿಜಬಣ್ಣವನ್ನು ತೋರಿಸಲು ಪ್ರಾರಂಭಿಸಿದ್ದಾರೆ. ಯವತಿಯ ಮನೆಯವರು ಗಂಡಿನ ಕಡೆಯವರು ಕೇಳಿದಷ್ಟು ವರದಕ್ಷಿಣೆ ಬೇಡಿಕೆ ಈಡೇರಿಸಲು ಸಾಧ್ಯವಾಗಿರಲಿಲ್ಲ. ಈ ಕಾರಣದಿಂದಾಗಿ ಮದುವೆಗೆ ಇನ್ನು 20 ದಿನ ಇರುವಾಗಲೇ ಕ್ಯಾನ್ಸಲ್​ ಮಾಡಲಾಗಿತ್ತು. ಆದರೆ ಅದಾಗಲೇ ಮದುವೆ ಕಾರ್ಡ್​ಗಳನ್ನು ಹಂಚಿಯಾಗಿತ್ತು.

ಇದನ್ನೂ ಓದಿ: ತಂದೆಯ ಮೃತದೇಹದ ಮೇಲೆ ಅಳುತ್ತಲೇ ಕೊನೆಯುಸಿರೆಳೆದ ಮಗಳು

ಇದರಿಂದ ತೀವ್ರವಾಗಿ ಮನನೊಂದಿದ್ದ ಯುವತಿ ಆತ್ಮಹತ್ಯೆಗೂ ಮುನ್ನ ಅಳುತ್ತಾ ವಿಡಿಯೋ ಮಾಡಿದ್ದು, ತನಗೆ ಏಪ್ರಿಲ್ 22ರಂದು ಮದುವೆಯಾಗಬೇಕಿತ್ತು. ಮದುವೆ ಕಾರ್ಡ್‌ಗಳನ್ನೂ ಮುದ್ರಿಸಿ ವಿತರಿಸಲಾಯಿತು. ಮನೆಯಲ್ಲಿ ಮದುವೆ ತಯಾರಿ ನಡೆಯುತ್ತಿತ್ತು. ಈ ನಡುವೆ ಏಪ್ರಿಲ್ 2ರಂದು ವಿಕಾಸ್ ಕರೆ ಮಾಡಿ ಹೆಚ್ಚುವರಿ ವರದಕ್ಷಿಣೆ ನೀಡುವಂತೆ ಒತ್ತಾಯಿಸಿದ್ದ. ತನ್ನ ಕುಟುಂಬವು ವರದಕ್ಷಿಣೆ ಕೊಡಲು ವಿಫಲವಾಗಿತ್ತು. ಇದನ್ನು ವಿಕಾಸ್​ಗೆ ವಿವರಿಸಿದರೂ ಆತ ಒಪ್ಪಲಿಲ್ಲ. ಅಲ್ಲದೇ, ಆತ ಫೋನ್ ಮೂಲಕ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದ, ಕೊನೆಗೆ ಮುದುವೆ ಮುರಿದು ಬಿತ್ತು ಎಂದು ಹೇಳಿದ್ದಾಳೆ.

ಅಲ್ಲದೇ ಮತ್ತೊಂದು ವಿಡಿಯೋ ಮಾಡಿರುವ ಯುವತಿಯು, ಅಪ್ಪ-ಅಪ್ಪ ನನ್ನನ್ನು ಕ್ಷಮಿಸಿ. ಮದುವೆಯಾಗದ ನನಗೆ ಇಡೀ ಸಮಾಜ ಮಾನಹಾನಿ ಮಾಡುತ್ತಿದೆ. ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಈ ಕಳಂಕದಿಂದ ನನ್ನ ಇಡೀ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಹೇಳಿ ಸೋಮವಾರದಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net