ತಂದೆಯ ಮೃತದೇಹದ ಮೇಲೆ ಅಳುತ್ತಲೇ ಕೊನೆಯುಸಿರೆಳೆದ ಮಗಳು

heart broken
Published on

ಹೈದರಾಬಾದ್​​: ಕೆಲವು ಸಂಬಂಧಗಳನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಮತ್ತೊಂದೆಡೆ.. ಕೆಲವು ದುರಂತಗಳಲ್ಲಿ ನೋವನ್ನು ವಿವರಿಸಲಾಗದೆ ಪದಗಳೂ ಮೂಕವಾಗುತ್ತವೆ. ತನ್ನ ತಂದೆ ಇನ್ನಿಲ್ಲ ಎಂಬ ಸುದ್ದಿಯನ್ನ ಬೆನ್ನೆಲ್ಲೆ ಅಂತ್ಯ ಸಂಸ್ಕಾರಕ್ಕೆ ತೆರಳಿದ್ದ ಮಗಳು ಆತನ ಹೃದಯದ ಮೇಲೆ ಕೊನೆಯುಸಿರೆಳೆದಿರುವ ಘಟನೆ ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ತಿರುಮಲಗಿರಿಯಲ್ಲಿ ಇಂತಹದ್ದೇ ಘಟನೆ ನಡೆದಿದೆ.

ತಿರುಮಲಗಿರಿಯ ನಿವಾಸಿಯಾಗಿರುವ ವೀರಯ್ಯ ಎಂಬಾತ ಭಾನುವಾರ ರಾತ್ರಿ ನಿಧನರಾಗಿದ್ದು, ಆತನ ಮಗಳು ವಜ್ರಮ್ಮ ಬಾಲ್ಯದಿಂದಲೂ ಪ್ರೀತಿಯಿಂದ ಬೆಳೆಸಿದ ತಂದೆ ಇನ್ನಿಲ್ಲದ ಸಂಗತಿಯನ್ನು ಸಹಿಸಲಾಗಲಿಲ್ಲ. ಅಂತ್ಯ ಸಂಸ್ಕಾರದ ವೇಳೆ ತಂದೆಯ ಮೃತದೇಹದ ಮೇಲೆಯೇ ಬಿದ್ದು ಅಳುತ್ತಿದ್ದ ವೇಳೆ ಏಕಾಏಕಿ ಶಾಂತವಾಗಿದ್ದಾಳೆ. ಆದರೆ ಎಷ್ಟೊತ್ತು ಆದರೂ ಕೂಡ ಆಕೆ ಎದ್ದೇಳದಿರುವುದನ್ನು ಕಂಡ ಜನ ಆಕೆಯೆಡೆಗೆ ಸಂಬಂಧಿಕರು ತೆರಳಿದ್ದು, ಅಷ್ಟರಲ್ಲಿ ಆಕೆ  ಹೃದಯಾಘಾತವಾಗಿ ಮೃತಪಟ್ಟಿದ್ದಳು.

ಈ ಘಟನೆ ಅಲ್ಲಿದ್ದವರನ್ನೆಲ್ಲ ಬೆಚ್ಚಿ ಬೀಳಿಸಿದ್ದು, ತನ್ನನ್ನು ಸಾಕಿ ಬೆಳೆಸಿದ ತಂದೆ ಇನ್ನಿಲ್ಲ ಎಂದು ತಿಳಿದ ಮಗಳು ತಂದೆಯ ಹೃದಯದ ಮೇಲೆ ಕೊನೆಯುಸಿರೆಳೆದಿದ್ದ ನೋಡಿ ಕುಟುಂಬಸ್ಥರಿಗೆ ಶಾಕ್​ ಆಗಿದೆ. ಸಾವಿನಲ್ಲೂ ಬೇರ್ಪಡದ ತಂದೆ ಮಗಳ ಬಾಂಧವ್ಯ ಕಂಡು ಸಂಬಂಧಿಕರು, ಗ್ರಾಮಸ್ಥರು ಕಣ್ಣೀರು ಹಾಕಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net