More

  ಮದ್ಯದ ನಶೆಯಲ್ಲಿ ಹಾವಿಗೆ ಚುಂಬಿಸಲು ಹೋಗಿ ಪ್ರಾಣ ಬಿಟ್ಟ

  ಉತ್ತರಪ್ರದೇಶ: ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಹಾವಿಗೆ ಮುತ್ತು ಕೊಡಲು ಹೋಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ.

  ರೋಹಿತ್ ಜೈಸ್ವಾಲ್(22) ಮೃತ ಯುವಕ. ಈತ ಅಹಿರೌಲಿ ಗ್ರಾಮದ ನಿವಾಸಿಯಾಗಿದ್ದಾನೆ. ಆರು ಮಂದಿ ಒಡಹುಟ್ಟಿದವರಲ್ಲಿ ಕಿರಿಯವನಾದ ಜೈಸ್ವಾಲ್ ಅವಿವಾಹಿತನಾಗಿದ್ದ. ಮದ್ಯದ ಅಮಲಿನಲ್ಲಿ ಹಾವಿನೊಂದಿಗೆ ವಿಡಿಯೋ ಚಿತ್ರೀಕರಣ ಮಾಡುವಾಗ ಸಾವನ್ನಪ್ಪಿದ್ದಾನೆ.

   ಇದನ್ನೂ ಓದಿ:  ಪ್ರತಿದಿನ ಈ 5-6 ಕರಿಬೇವಿನ ಎಲೆ ತಿನ್ನಿ.. ಅನಾರೋಗ್ಯದಿಂದ ದೂರ ಇರಿ…

  ಜೈಸ್ವಾಲ್ ಶಿವನ ರೂಪವಾದ ಮಹಾಕಾಲ್ ಆಗಿ ನಟಿಸುತಿದ್ದನು. ಹಾವಿಗೆ ತನ್ನನ್ನು ಕಚ್ಚುವಂತೆ ಸವಾಲು ಹಾಕಿದ್ದಾನೆ. ಹಾವನ್ನು ಕೈಗೆ ಸುತ್ತಿಕೊಂಡಿದ್ದಾನೆ, ಬಳಿಕ ನಾಲಿಕೆ ತೆರೆದು ನಾಲಿಗೆಗೆ ಕಚ್ಚುವಂತೆ ಹಾವಿಗೆ ಹೇಳಿದ್ದಾನೆ. ಸಿಗರೇಟ್​ ಸೇದುವುದು ಹಾಗೂ ಹಾವಿಗೆ ಹೊಡೆಯುವುದು ಹೀಗೆ ಮಾನಸಿಕ ಅಸ್ವಸ್ಥನಂತೆ ಆಡಿದ್ದಾನೆ. ಹಾವು ಜೈಸ್ವಾಲ್​ಗೆ ಕಚ್ಚಿದೆ, ಕೂಡಲೇ ಆತ ಮೃತಪಟ್ಟಿದ್ದಾನೆ.

   ಇದನ್ನೂ ಓದಿ:  VIDEO | ನಿರ್ಮಾಣ ಹಂತದ ರಸ್ತೆಯಲ್ಲಿರುವ ಸಿಮೆಂಟ್, ಮರಳು ಮಿಶ್ರಣ ಕದ್ದ ಗ್ರಾಮಸ್ಥರು

  ಸಾವಿನ ನಂತರ, ಪೊಲೀಸರು ಭಾನುವಾರ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಹಾವು ಕಡಿತದಿಂದ ಸಾವು ಸಂಭವಿಸಿದೆ ಎಂಬ ಮಾಹಿತಿ ಮೇರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

  ರಾಮ್ ಚರಣ್ ಅಭಿನಯದ ಸಿನಿಮಾ ಹಾಡು ಲೀಕ್; ಇಬ್ಬರನ್ನು ಬಂಧಿಸಿದ ಸೈಬರ್ ಪೊಲೀಸರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts