ಒಟಿಟಿಗೆ ಲಗ್ಗೆಯಿಟ್ಟ ಸಿಂಹ ಕೊಡೂರಿ ನಟನೆಯ 'ಉಸ್ತಾದ್'

Untitled design - 2023-09-01T151350.448
Published on

ಆಂಧ್ರಪ್ರದೇಶ: ಆಗಸ್ಟ್​ 12 ರಂದು ಫಣಿದೀಪ್ ನಿರ್ದೇಶನದಲ್ಲಿ ತೆರೆ ಮೇಲೆ ಮೂಡಿಬಂದ ತೆಲುಗು ಸಿನಿಮಾ 'ಉಸ್ತಾದ್'​ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ನಟ ಸಿಂಹ ಕೊಡೂರಿ ಮತ್ತು ಕಾವ್ಯ ಕಲ್ಯಾಣ್ ರಾಮ್​ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಈ ಚಿತ್ರ ಇದೀಗ ಒಟಿಟಿಗೆ ಎಂಟ್ರಿ ಕೊಟ್ಟಿದೆ.

ಫಣಿದೀಪ್ ಬರೆದು, ನಿರ್ದೇಶಿಸಿದ ಚಿತ್ರದಲ್ಲಿ ನಟ ಸಿಂಹ ಕೊಡೂರಿ ಪೈಲೆಟ್​ ಪಾತ್ರವನ್ನು ನಿರ್ವಹಿಸಿದ್ದಾರೆ. ರಜನಿ ಕೊರ್ರಪಾಟಿ, ರಾಕೇಶ್ ರೆಡ್ಡಿ ಗದ್ದಂ ಮತ್ತು ಹಿಮಾಂಕ್ ರೆಡ್ಡಿ ದುವ್ವೂರು ನಿರ್ಮಾಣದ ಉಸ್ತಾದ್​ ಇದೀಗ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಅಧಿಕೃತವಾಗಿ ಬಿಡುಗಡೆಗೊಂಡಿದೆ. ಸಿನಿಪ್ರೇಕ್ಷಕರಿಗೆ ಚಿತ್ರವು ಈಗ ಸ್ಟ್ರೀಮಿಂಗ್​ಗೆ ಲಭ್ಯವಿದೆ.

ಚಿತ್ರಕ್ಕೆ ಅಕೀವ ಅವರು ಸಂಗೀತ ಸಂಯೋಜಿಸಿದ್ದು, ಪವನ್ ಕುಮಾರ್ ಪುಪ್ಪಳ ಛಾಯಾಗ್ರಹಣವಿದೆ. ಕಾರ್ತಿಕ್ ಕಟ್ಸ್ ಸಂಕಲನ ಸಿನಿಮಾಗೆ ಮತ್ತಷ್ಟು ವಿಶೇಷತೆಯನ್ನು ತಂದುಕೊಟ್ಟಿದ್ದು, ಇದೀಗ ಸಿನಿಮಾ ಅಮೇಜಾನ್​ ಪ್ರೈಮ್ ವೀಡಿಯೊದಲ್ಲಿ ವೀಕ್ಷಣೆಗೆ ಲಭ್ಯವಿರುವುದು ಚಿತ್ರರಸಿಕರಿಗೆ ಸಂತಸ ನೀಡಿದೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net