

WhatsApp email verification feature: ವಾಟ್ಸ್ಆ್ಯಪ್ ಪ್ರಸ್ತುತ ಇ-ಮೇಲ್ ವಿಳಾಸವನ್ನು ಬಳಸಿಕೊಂಡು ನಿಮ್ಮ ಖಾತೆಯನ್ನು ರಕ್ಷಿಸಲು ಹೊಸ ಭದ್ರತಾ ವೈಶಿಷ್ಟ್ಯದ ರೂಪದಲ್ಲಿ ಈ ಆಯ್ಕೆಯನ್ನು ನೀಡಲು ಮುಂದಾಗಿದೆ. ಇದರಿಂದ ನಿಮ್ಮ ಖಾತೆ ಮತ್ತಷ್ಟು ಭದ್ರತೆಯಿಂದ ಕೂಡಿರುತ್ತದೆ. ಈ ವೈಶಿಷ್ಟ್ಯವು ಪರೀಕ್ಷಾ ಹಂತದಲ್ಲಿದೆ ಮತ್ತು ಇದು ಆಂಡ್ರಾಯ್ಡ್ನ ಬೀಟಾ ಪರೀಕ್ಷಕರಿಗೆ ಲಭ್ಯವಿದೆ.
ಈಗಾಗಲೇ ವಾಟ್ಸ್ಆ್ಯಪ್ ಬೀಟಾ ವರ್ಷನ್ನಲ್ಲಿ ಸಾಲು-ಸಾಲು ಫೀಚರ್ಗಳು ಪರೀಕ್ಷಾ ಹಂತದಲ್ಲಿದ್ದು, ಸದ್ಯದಲ್ಲೇ ಒಂದೊಂದು ಆಯ್ಕೆ ಪರಿಚಯಿಸಲಿದೆ. ಇದರ ನಡುವೆ ನಂಬರ್ ಒನ್ ಮೆಸೇಜಿಂಗ್ ಅಪ್ಲಿಕೇಷನ್ ಮತ್ತೊಂದು ನೂತನ ಅಪ್ಡೇಟ್ ನೀಡುವ ಬಗ್ಗೆ ಘೋಷಣೆ ಮಾಡಿದೆ. ಸದ್ಯದಲ್ಲೇ ಬಳಕೆದಾರರು ವಾಟ್ಸ್ಆ್ಯಪ್ನಲ್ಲಿ ಹೊಸ ಇ-ಮೇಲ್ ವೆರಿಫಿಕೇಷನ್ ಫೀಚರ್ನ ಪ್ರಯೋಜನ ಪಡೆಯಲಿದ್ದಾರೆ.
WABetaInfo ವರದಿ ಮಾಡಿದಂತೆ, ವಾಟ್ಸ್ಆ್ಯಪ್ ಪ್ರಸ್ತುತ ಇ-ಮೇಲ್ ವಿಳಾಸವನ್ನು ಬಳಸಿಕೊಂಡು ನಿಮ್ಮ ಖಾತೆಯನ್ನು ರಕ್ಷಿಸಲು ಹೊಸ ಭದ್ರತಾ ವೈಶಿಷ್ಟ್ಯದ ರೂಪದಲ್ಲಿ ಈ ಆಯ್ಕೆಯನ್ನು ನೀಡಲು ಮುಂದಾಗಿದೆ.
ಈ ವೈಶಿಷ್ಟ್ಯವು ಪರೀಕ್ಷಾ ಹಂತದಲ್ಲಿದೆ ಮತ್ತು ಇದು ಆಂಡ್ರಾಯ್ಡ್ನ ಬೀಟಾ ಪರೀಕ್ಷಕರಿಗೆ ಲಭ್ಯವಿದೆ. ಈ ಫೀಚರ್ ಅನ್ನು ವಾಟ್ಸ್ಆ್ಯಪ್ ಬೀಟಾ ಆವೃತ್ತಿ ಸಂಖ್ಯೆ 2.23.18.19 ರ ಮೂಲಕ ಪ್ರವೇಶಿಸಬಹುದು. ಗೌಪ್ಯತೆ ಕಾರಣದಿಂದ ಈ ಇಮೇಲ್ ವಿಳಾಸವು ನಿಮ್ಮ ಕಾಂಟೆಕ್ಟ್ ಲಿಸ್ಟ್ನಲ್ಲಿರುವ ಯಾರಿಗೂ ಗೋಚರಿಸುವುದಿಲ್ಲ ಎಂಬುದನ್ನು ಗಮನಿಸಬೇಕಾದ ವಿಷಯ.
ಕಳೆದ ಕೆಲ ದನಗಳ ಹಿಂದಷ್ಟೇ ಹೈ-ರೆಸಲ್ಯೂಷನ್‌ನಲ್ಲಿ ವಿಡಿಯೋವನ್ನು ಕಳುಹಿಸುವ ಫೀಚರ್ ಪರಿಚಯಿಸಿದೆ. ಈ ಹಿಂದೆ ಯಾರಿಗಾದರು ವಿಡಿಯೋ ಕಳುಹಿಸಿದಾಗ ಅದು ಕಂಪ್ರೆಸ್ ಆಗಿ ತನ್ನ ಕ್ವಾಲಿಟಿಯನ್ನು ಕಳೆದುಕೊಳ್ಳುತ್ತಿತ್ತು. ಆದರೀಗ ಹೆಚ್ಡಿ ಕ್ವಾಲಿಟಿಯಲ್ಲಿ ವಿಡಿಯೋ ಕಳುಹಿಸಬಹುದು.