ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸುತ್ತಿರುವವರು ತಪ್ಪದೇ ಇದನ್ನು ಪಾಲಿಸಿ; ಉಪಯುಕ್ತ ಮಾಹಿತಿ

ಕಾಲ ಬದಲಾದಂತೆ ಸೌದೆ ಒಲೆಗೆ ಗುಡ್​​ಬೈ ಹೇಳಿ ಇಂದು ಅಡುಗೆ ಮಾಡಲು ಗ್ಯಾಸ್ ಸಿಲಿಂಡರ್ ಮೇಲೆಯೇ ಹೆಚ್ಚು ಅವಲಂಭಿತರಾಗಿದ್ದೇವೆ. ನಗರದಲ್ಲಿ ಮಾತ್ರವಲ್ಲ ಗ್ರಾಮೀಣ ಪ್ರದೇಶದಲ್ಲೂ ಈಗ ಎಲ್ಲೇ ನೋಡಿದರೂ ಗ್ಯಾಸ್ ಸಿಲಿಂಡರ್ ಬಳಕೆ ಅಷ್ಟರಮಟ್ಟಿಗೆ ಸಾಮಾನ್ಯವಾಗಿಬಿಟ್ಟಿದೆ. ಗ್ಯಾಸ್ ಸಿಲಿಂಡರ್​ ಬಳಸುತ್ತಿರುವವರು ಕೆಲವೊಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಒಳಿತು. ಹಾಗಾದರೆ ಗ್ಯಾಸ್ ಸಿಲಿಂಡರ್ ಹೆಚ್ಚು ದಿನ ಬಾಳಿಕೆ ಬರಬೇಕು ಎಂದರೆ ಏನು ಮಾಡಬೇಕು ಎಂಬುದನ್ನು ಇಲ್ಲಿ ನೀಡಲಾಗಿದೆ.

ಇದನ್ನು ಓದಿ: ಶೀತ-ಕೆಮ್ಮು-ಕಫ ಕಟ್ಟಿದ್ಯಾ..; ಸಮಸ್ಯೆಗೆ ಮುಕ್ತಿ ನೀಡಲಿದೆ ಮನೆಯಲ್ಲಿರುವ ಈ ಪದಾರ್ಥ

ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆಯುವಾಗ ಸರಿಯಾದ ಡಿಲರ್ಸ್​​​ಗಳನ್ನು ಸಂಪರ್ಕಿಸುವುದು ಉತ್ತಮ. ನಿಮ್ಮ ಮನೆಗೆ ಸಿಲಿಂಡರ್ ಡಿಲವರಿ ಆದಾಗ ಕಂಪನಿ ಸೀಲ್ ಸರಿಯಾಗಿ ಇದೆಯೇ, ಇಲ್ಲವೇ ಅನ್ನೋದನ್ನು ದೃಢಪಡಿಸಿಕೊಳ್ಳಿ. ಒಂದುವೇಳೆ ಸೀಲ್ ಇಲ್ಲದಿದ್ದರೆ ಆ ಸಿಲಿಂಡರ್​​ ಅನ್ನು ಬಳಸಬೇಡಿ. ಅದರ ಜತೆಗೆ ಸಿಲಿಂಡರ್ ಮೇಲೆ ದಿನಾಂಕವನ್ನು ಖಚಿತಪಡಿಸಿಕೊಳ್ಳಿ. A ಎಂದರೆ ಜನವರಿಯಿಂದ ಮಾರ್ಚ್​​​​ವರೆಗೆ, B ಎಂದರೆ ಏಪ್ರಿಲ್​​ನಿಂದ ಜೂನ್​ವರೆಗೆ, C ಎಂದರೆ ಜುಲೈನಿಂದ ಸೆಪ್ಟೆಂಬರ್​ವರೆಗೆ ಮತ್ತು D ಅಂದರೆ ಅಕ್ಟೋಬರ್​ನಿಂದ ಡಿಸೆಂಬರ್ವರೆಗೆ ಎಂದರ್ಥ.

ಅಡುಗೆ ಮಾಡುವಾಗ ಈ ಟಿಪ್ಸ್​ ಫಾಲೋ ಮಾಡಿ:

  • ಅಡುಗೆ ಮನೆಯಲ್ಲಿ ಒಳ್ಳೆಯ ಗಾಳಿಯ ಸೌಲಭ್ಯ ಇರಬೇಕು
  • ಅಡುಗೆ ಮಾಡುವಾಗ ಬಾಗಿಲು, ಕಿಟಕಿಗಳು ತೆಗೆದಿರಲಿ
  • ಬೆಂಕಿ ಪಟ್ಟಣದಂತಹ ವಸ್ತುಗಳನ್ನು ದೂರವಿಡಿ
  • ಅಡುಗೆ ಮಾಡುವ ಸಮಯದಲ್ಲಿ ಸ್ಟವ್ ಬಳಿ ಬಟ್ಟೆಗಳನ್ನು ಇಡಬೇಡಿ
  • ಸಿಲಿಂಡರ್ ಬಳಸದಿದ್ದಾಗ ರೆಗ್ಯೂಲೆಟರ್ ಆಫ್ ಮಾಡಿ
  • ಗಾಳಿ ಆಡುವ ಪ್ರದೇಶದಲ್ಲಿ ಸಿಲಿಂಡರ್​​ ಅನ್ನು ಇಡಿ
  • ವರ್ಷಕ್ಕೊಮ್ಮೆ ರೆಗ್ಯೂಲೆಟರ್, ಟ್ಯೂಬ್ ಬದಲಾಯಿಸಿ
  • ISI ಸರ್ಟಿಫೈಡ್ ಸಿಲಿಂಡರ್ ಅನ್ನು ಮಾತ್ರ ಬಳಸಿ
  • ಗ್ಯಾಸ್ ಸಿಲಿಂಡರ್ ಅನ್ನು ಮಲಗಿಸಿ ಇಡಬೇಡಿ
  • ಸಿಲಿಂಡರ್​​ಗೆ ಹಾನಿಯಾಗುವಂತಹ ಕೆಲಸವನ್ನು ಮಾಡಬೇಡಿ

ನೀವು ಸಿಲಿಂಡರ್ ಬಳಸುವಾಗ ಒಂದುವೇಳೆ ಅವಘಡ ಸಂಭವಿಸಿದರೆ ಕೂಡಲೇ ರೆಗ್ಯೂಲೆಟರ್ ಅನ್ನು ಆಫ್ ಮಾಡಿ. ಬಾಗಿಲು ಹಾಗೂ ಕಿಟಕಿಗಳನ್ನು ಪೂರ್ತಿಯಾಗಿ ತೆಗೆಯಿರಿ. ಅಗ್ನಿ ಅವಘಕ್ಕೆ ಕಾರಣವಾಗುವ ವಸ್ತುಗಳನ್ನ ಬಳಸಬೇಡಿ. ಉದಾಹರಣೆಗೆ ಬೆಂಕಿ ಕಡ್ಡಿ ಹಚ್ಚಬೇಡಿ ಮತ್ತು ಮನೆಯಲ್ಲಿರುವ ಎಲ್ಲಾ ಕರೆಂಟ್ ಸ್ವಿಚ್​​ಗಳನ್ನು ಆಫ್ ಮಾಡಿ. ಈ ಟಿಪ್ಸ್​​ಗಳನ್ನು ಪಾಲಿಸುವುದರಿಂದ ಬೆಂಕಿ ಅನಾಹುತ ಸಂಭವಿಸಿದ ಸಮಯದಲ್ಲಿ ಪ್ರಾಣ ಹಾನಿಯನ್ನು ತಪ್ಪಿಸಬಹುದು.

ಅಬ್ಬಬ್ಬಾ.. ಏನ್ ಧೈರ್ಯ.! ಕದಿಯಲು ಬಂದ ಖದೀಮರನ್ನೆ ಅಟ್ಟಾಡಿಸಿದ ಅಂಗಡಿ ಮಾಲೀಕ

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…