ಪುಣೆ: ಆಭರಣ ಮಳಿಗೆಯೊಂದರಲ್ಲಿ ಕಳ್ಳತನಕ್ಕೆ ಯತ್ನಿಸಿದ ನಾಲ್ವರು ದರೋಡೆಕೋರರನ್ನು ಅಂಗಡಿ ಮಾಲೀಕನೊಬ್ಬನೇ ಧೈರ್ಯವಾಗಿ ಹಿಮ್ಮೆಟ್ಟಿಸಿರುವ ಘಟನೆ ಥಾಣೆಯಲ್ಲಿ ಬುಧವಾರ(ಆಗಸ್ಟ್ 14) ನಡೆದಿದೆ.
ಇದನ್ನು ಓದಿ: ಒಂದಲ್ಲ.. ಎರಡಲ್ಲ.. ಬರೋಬ್ಬರಿ 542 ಕೆ.ಜಿ ತೂಕ ಇಳಿಸಿಕೊಂಡ ವ್ಯಕ್ತಿ..! ಅನ್ಬಿಲಿವಬಲ್ ಇಂಟ್ರೆಸ್ಟಿಂಗ್ ಕಹಾನಿ
ಥಾಣೆಯ ಬಾಲ್ಕಮ್ ಪ್ರದೇಶದಲ್ಲಿರುವ ಆಭರಣ ಮಳಿಗೆಯೊಂದಕ್ಕೆ ರಿವಾಲ್ವರ್ ಹಿಡಿದು ಬೆಳಗ್ಗೆ 11.26ರ ಸುಮಾರಿಗೆ ನಾಲ್ವರು ಆಘಂತಕರು ಏಕಾಏಕಿ ನುಗ್ಗಿದ್ದಾರೆ. ಚಿನ್ನಾಭರಣಗಳನ್ನು ನೀಡುವಂತೆ ಬೆದರಿಕೆ ಹಾಕಿದ ದರೋಡೆಕೋರರು ಅಂಗಡಿ ಮಾಲೀಕನಿಗೆ ರಿವಾಲ್ವರ್ ನಿಂದ ಹಲ್ಲೆ ಮಾಡಿದ್ದಾರೆ.
ದರೋಡೆಕೋರರು ಅಂಗಡಿಯಲ್ಲಿದ್ದ ಚಿನ್ನಾಭರಣಗಳನ್ನು ಕದಿಯಲು ಪ್ರಯತ್ನಿಸುತ್ತಿರುವಾಗ ಅಂಗಡಿ ಮಾಲೀಕ ಮರದ ಕೋಲಿನಿಂದ ದರೋಡೆಕೋರರ ಮೇಲೆ ದಾಳಿ ಮಾಡಿದ್ದಾನೆ.
ಹೆಲ್ಮೆಟ್ ಹಾಗೂ ಕ್ಯಾಪ್ ಹಾಕಿದ್ದ ನಾಲ್ವರು ದರೋಡೆಕೋರರನ್ನು ಅಟ್ಟಾಡಿಸಿಕೊಂಡು ಹೋಗುವ ದೃಶ್ಯ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಂಗಡಿ ಮಾಲೀಕ ಕೋಪಗೊಂಡು ಹೊಡೆಯಲು ಯತ್ನಿಸುತ್ತಿದ್ದಂತೆ ಕ್ಯಾಶ್ ಕೌಂಟರ್ನಲ್ಲಿದ್ದ ಎರಡು ಮೊಬೈಲ್ ಫೋನ್ಗಳನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ.
ಅಂಗಡಿ ಮಾಲೀಕ ಜೋರಾಗಿ ಕಿರುಚಿಕೊಳ್ಳುತ್ತಿದ್ದಂತೆ ಸ್ಥಳೀಯರು ಬೆನ್ನಟ್ಟಿ ಓರ್ವ ದರೋಡೆಕೋರರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಉಪಪೊಲೀಸ್ ಆಯುಕ್ತ ಅಮರ್ ಸಿಂಗ್ ಜಾಧವ್ ಪರಿಶೀಲನೆ ನಡೆಸಿ, ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ. ಇನ್ನು, ಕಪುರಬಾವಡಿ ಠಾಣೆ ಪೊಲೀಸರು ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದು, ದರೋಡೆಕೋರ ಗ್ಯಾಂಗ್ನ ಉಳಿದ ಮೂವರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂಗಡಿ ಮಾಲೀಕನ ಧೈರ್ಯ, ಸಾಹಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.(ಏಜೆನ್ಸೀಸ್)
‘ಫೌಜಿ’ಯಲ್ಲಿ ಪ್ರಭಾಸ್ ಜತೆಗೆ ಮೃಣಾಲ್ ರೊಮ್ಯಾನ್ಸ್!; ನಟಿ ಕೊಟ್ರು ಕ್ಲಾರಿಟಿ..