‘ಫೌಜಿ’ಯಲ್ಲಿ ಪ್ರಭಾಸ್​ ಜತೆಗೆ ಮೃಣಾಲ್​ ರೊಮ್ಯಾನ್ಸ್​​!; ನಟಿ ಕೊಟ್ರು ಕ್ಲಾರಿಟಿ..

Untitled-design-2024-08-14T183338.762
Published on

ಮುಂಬೈ: ಬಾಲಿವುಡ್​ನಿಂದ ದಕ್ಷಿಣ ಚಿತ್ರರಂಗಕ್ಕೆ ಬಂದು 2022ರಲ್ಲಿ ತೆರೆಕಂಡ ಸೀತಾ ರಾಮಂ ಸಿನಿಮಾದಲ್ಲಿ ಸೀತಾಮಹಾಲಕ್ಷ್ಮಿ ಪಾತ್ರದಲ್ಲಿ ನಟಿಸಿ ಸೈ ಎನ್ನಿಸಿಕೊಂಡು ಎಲ್ಲರ ಮನದಲ್ಲಿ ಮನೆಮಾಡಿದ ನಟಿ ಮೃಣಾಲ್​ ಠಾಕೂರ್​. ಟಾಲಿವುಡ್​ ಡಾರ್ಲಿಂಗ್​ ಮುಂದಿನ ಸಿನಿಮಾ ‘ಫೌಜಿ’ಯಲ್ಲಿ ಪ್ರಭಾಸ್ ಜತೆ​​ ಮೃಣಾಲ್​ ಠಾಕೂರ್ ರೊಮ್ಯಾನ್ಸ್​​ ಮಾಡಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಲ್ಲಿ ಹರಿದಾಡುತಿತ್ತು.

ಫೌಜಿ ಸಿನಿಮಾವನ್ನ ಹನು ರಾಘವಪುಡಿ ನಿರ್ದೇಶಿಸಲಿದ್ದಾರೆ. ಅಕ್ಟೋಬರ್​ನಲ್ಲಿ ಈ ಚಿತ್ರದ ಶೂಟಿಂಗ್​​ ಆರಂಭವಾಗಲಿದ್ದು, ಸಿನಿಮಾವು 1940ರ ಬ್ರಿಟಿಷ್​ ಹಿನ್ನೆಲೆಯಲ್ಲಿ ಆಧರಿಸಿದ ಪಿರಿಯಾಡ್​​​ ಡ್ರಾಮಾ ಎನ್ನಲಾಗಿದೆ. ಈ ಚಿತ್ರದಲ್ಲಿ ಪ್ರಭಾಸ್​​ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಫೌಜಿಯಲ್ಲಿ ಪ್ರಭಾಸ್​ ಜತೆಗೆ ಮೃಣಾಲ್​ ಠಾಕೂರ್​ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಜಾಲತಾಣದಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ.

ಸದ್ಯ ಇದಕ್ಕೆಲ್ಲಾ ತೆರೆ ಎಳೆಯುವಂತೆ ನಟಿ ಮೃಣಾಲ್​​​ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ತಾನು ಫೌಜಿ ಚಿತ್ರದ ಭಾಗವಾಗಿಲ್ಲ ಎಂದು ಸ್ವತಃ ಮೃಣಾಲ್​ ಅವರೆ ಹೇಳಿದ್ದಾರೆ. ಮೃಣಾಲ್ ನೀಡಿದ ಸ್ಪಷ್ಟನೆಯಿಂದಾಗಿ ಫೌಜಿಯಲ್ಲಿ ಈ ಜೋಡಿಯನ್ನು ನೋಡಲು ಸಾಧ್ಯವಿಲ್ಲ ಎಂದು ಪ್ರಭಾಸ್​ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.

ನಟಿ ಮೃಣಾಲ್ ವಿಜಯ್​ದೇವರಕೊಂಡ ಜತೆಗೆ ಫ್ಯಾಮಿಲಿ ಸ್ಟಾರ್​ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಕಮಲ್​ಹಾಸನ್​, ಅಮಿತಾಭ್​​ ಬಚ್ಚನ್​, ಪ್ರಭಾಸ್​, ದೀಪಿಕಾ ಪಡುಕೋಣೆ ಅಭಿನಯಿಸಿದ್ದ ಪ್ಯಾನ್​ ಇಂಡಿಯಾ ಸಿನಿಮಾ ಕಲ್ಕಿ 2898 ಎಡಿ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಸದ್ಯ ನಟಿ ಮುಂದಿನ ಸಿನಿಮಾ ಪೂಜಾ ಮೇರಿ ಜಾನ್​​ ಚಿತ್ರದಲ್ಲಿ ಬಿಸಿಯಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net