

ಮಳೆಗಾಲ ಬಂತೆಂದರೆ ಸಾಕು ಶೀತ ಮತ್ತು ಕೆಮ್ಮು ಬಹಳ ಸಾಮಾನ್ಯವಾಗಿ ಬರುತ್ತದೆ. ಗಂಟಿಲಿನಲ್ಲಿ ಕಫದ ಕಿರಿಕಿರಿ ಹೇಳಲಾಗದು. ಕಫದಿಂದ ಕೆಮ್ಮು, ಉಸಿರಾಟದ ತೊಂದರೆ, ತಲೆನೋವು ಹೀಗೆ ಒಂದರ ನಂತರ ಒಂದು ಕಾಯಿಲೆಗೆ ಕಾರಣವಾಗುತ್ತದೆ. ಇನ್ನು ಶ್ವಾಸಕೋಸದಲ್ಲಿ ಇದೇ ಕಫದ ಲೋಳೆ ಸೇರಿಕೊಂಡರೆ ಅಷ್ಟೆ. ಈ ಸಮಸ್ಯೆಗೆ ಮನೆಯಲ್ಲೆ ಸುಲಭದ ಮದ್ದು ಮಾಡುಬಹುದು. ಶಿಶುವಿನಿಂದ ವೃದ್ಧರವರೆಗೆ ಈ ಮದ್ದು ಕೆಲಸ ಮಾಡುತ್ತದೆ. ಎಲ್ಲರಿಗೂ ಉಪಯುಕ್ತವಾಗುವ ಟಿಪ್ಸ್ ಇಲ್ಲಿದೆ.
ಕಪ್ಪು ಏಲಕ್ಕಿ ಶೀತ, ಕೆಮ್ಮು, ಜ್ವರಕ್ಕೆ ರಾಮಬಾಣವಾಗಿದೆ. ಕಫವನ್ನು ಸಂಪೂರ್ಣವಾಗಿ ತೆಗೆದು ಹಾಕುತ್ತದೆ. ಕಪ್ಪು ಏಲಕ್ಕಿಯನ್ನು ಔಷಧಿಯಾಗಿ ಬಳಸುವ ವಿಧಾನ ಹೇಗೆ ಎಂಬುದನ್ನು ಇಲ್ಲಿ ನೀಡಲಾಗಿದೆ. 10 ರಿಂದ 12 ಕಪ್ಪು ಏಲಕ್ಕಿಯನ್ನು ಬಾಣಲೆಯಲ್ಲಿ ಹುರಿಯಿರಿ. ತಣ್ಣಗಾದ ಬಳಿಕ ಅದನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ. ನಂತರ ಸಿಪ್ಪೆಯಿಂದ ಪುಡಿಯನ್ನು ಬೇರ್ಪಡಿಸಲು ಶೋಧಿಸಿ. ಈ ಪುಡಿಯನ್ನು ಗಾಜಿನ ಸೀಸದಲ್ಲಿ ಸಂಗ್ರಹಿಸಿಟ್ಟುಕೊಂಡು 1 ರಿಂದ 2 ತಿಂಗಳು ಬಳಸಬಹುದು.
6 ರಿಂದ 1 ವರ್ಷದ ಮಗುವಿಗೆ ಬೆಳಗ್ಗೆ ಮತ್ತು ರಾತ್ರಿ ಮೂರರಿಂದ ನಾಲ್ಕು ಚಿಟಿಕೆ ಪುಡಿಯನ್ನು ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ ತಿನ್ನಿಸಿ. 1 ವರ್ಷದಿಂದ 5 ವರ್ಷದೊಳಗಿನ ಮಕ್ಕಳಿಗೆ ಬೆಳಗ್ಗೆ ಮತ್ತು ಸಂಜೆ ನಾಲ್ಕನೇ ಒಂದು ಚಮಚ ಪುಡಿಗೆ ಜೇನುತುಪ್ಪ ಮಿಶ್ರಣ ಮಾಡಿ ತಿನ್ನಲು ನೀಡಿ. 5 ವರ್ಷದ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ 1 ಚಮಚ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಬೆಳಗ್ಗೆ ಮತ್ತು ಸಂಜೆ ನೀಡಿ. ಫಿಲ್ಟರ್ ಮಾಡಿದ ಬಳಿಕ ಸಿಗುವ ಸಿಪ್ಪೆಯನ್ನು ಹೆಲ್ತಿ ಚಹಾ ತಯಾರಿಸಬಹುದು. ಅದನ್ನು ಕುಡಿಯುವುದರಿಂದ ಸೋಂಕು ಕಡಿಮೆಯಾಗುತ್ತದೆ. (ಏಜೆನ್ಸೀಸ್)