

ಸುಂದರವಾದ, ಉದ್ದವಾದ, ದಪ್ಪ ಕೂದಲು ಬೇಕೆಂಬುದು ಎಲ್ಲರ ಇಷ್ಟವಾಗಿರುತ್ತದೆ. ವಿಟಮಿನ್ ಮತ್ತು ಖನಿಜಾಂಶವಿರುವ ಆಹಾರ ಸೇವೆನೆಯಿಂದ ಕೂದಲು ಉದ್ದವಾಗಿ ಹಾಗೂ ದಪ್ಪವಾಗಿ ಬೆಳೆಯುತ್ತದೆ ಎಂಬುದು ಈಗಾಗಲೇ ನಿಮಗೆ ತಿಳಿದಿದೆ. ಅದರ ಜತೆಗೆ ನಾವು ಉಪಯೋಗಿಸುವ ಹೇರ್ಆಯಿಲ್ ಅನ್ನು ಹೇಗೆ ಬಳಸಿದರೆ ಕೂದಲನ್ನು ಸೊಂಪಾಗಿ-ದಪ್ಪವಾಗಿ ಬೆಳೆಯುವಂತೆ ಮಾಡಬಹುದು. ಈ ನಿಮ್ಮ ಆಲೋಚನೆಗೆ ಸಹಾಯವಾಗಲೆಂದೆ ಇಲ್ಲಿ ನಿಮಗೆ ಉಪಯೋಗವಾಗುವಂತಹ ಮಾಹಿತಿ ನೀಡಲಾಗಿದೆ. ಹೌದು ನಾವು ದಿನ ಕೂದಲಿಗೆ ಉಪಯೋಗಿಸುವ ಹೇರ್ಆಯಿಲ್ ಜತೆಗೆ ಕೆಲವೊಂದು ಪದಾರ್ಥಗಳನ್ನು ಸೇರಿಸಿ ಬಳಸಿದರೆ ಏನೆಲ್ಲಾ ಪ್ರಯೋಜನೆ ಇದೆ ಗೊತ್ತಾ. ಅರ್ಡಿನರಿ ಹೇರ್ಆಯಿಲ್ ಅನ್ನು ಹೆಲ್ತಿ ಹೇರ್ಆಯಿಲ್ ಮಾಡುವ ಸಿಂಪಲ್ ಟಿಪ್ಸ್ ಇಲ್ಲಿದೆ.
ಇದನ್ನು ಓದಿ: ಸಿಯಾಟಿಕಾ ನೋವಿನಿಂದ ಬಳಲುತ್ತಿದ್ದೀರಾ; ಈ ಯೋಗಾಸನ ಮಾಡಿದ್ರೆ ಕ್ಷಣಾರ್ಧದಲ್ಲಿ ಸಿಗಲಿದೆ ರಿಲೀಫ್ ಹೆಲ್ತಿ ಹೇರ್ಆಯಿಲ್ ತಯಾರಿಸಲು ಬೇಕಾಗಿರುವ ಪದಾರ್ಥಗಳು:
ಬಳಸುವ ವಿಧಾನ: ಭೃಂಗರಾಜ್, ನೆಲ್ಲಿಕಾಯಿ, ದಾಸವಾಳದ ಹೂವು ಮತ್ತು ಎಲೆಯನ್ನು ಬಿಸಿಲಿನಲ್ಲಿ ಒಣಗಿಸಿ. (ಹಸಿರಿನ ಅಂಶ ಹೋಗುವವರೆಗೆ) ಮೆಂತ್ಯವನ್ನು ಪುಡಿ ಮಾಡಿಕೊಳ್ಳಿ. ಮೊದಲು 200 ಗ್ರಾಂ ತೆಂಗಿನ ಎಣ್ಣೆಗೆ ಕ್ಯಾಸ್ಟರ್ ಆಯಿಲ್ ಸೇರಿಸಿ. ಬಳಿಕ ಒಣಗಿದ ಭೃಂಗರಾಜ್, ನೆಲ್ಲಿಕಾಯಿ, ದಾಸವಾಳದ ಹೂವು ಮತ್ತು ಎಲೆ, ಮೆಂತ್ಯ ಪುಡಿ ಜತೆಗೆ ಆಲೋವೆರಾ ಜೆಲ್ ಸೇರಿಸಿ. ಆಲೋವೆರಾ ಜೆಲ್ ಎಣ್ಣೆಯೊಂದಿಗೆ ಚೆನ್ನಾಗಿ ಹೊಂದಿಕೊಳ್ಳುವವರೆಗೂ (ಮೀಡಿಯಂ ಫ್ಲೇಮ್ನಲ್ಲಿ) ಎಣ್ಣೆಯನ್ನು ಕುದಿಸಿ. ಬಳಿಕ ಸ್ವಲ್ಪ ಬೆಚ್ಚಾಗ ನಂತರ ಗಾಜಿನ ಸೀಸದಲ್ಲಿ ಸಂಗ್ರಹಿಸಿಡಿ. ಎಣ್ಣೆ ಬೆಚ್ಚಗಿರುವಾಗಲೇ ಕೂದಲಿನ ಬುಡಕ್ಕೆ ಹಚ್ಚಬೇಕು. ನೆತ್ತಿಗೆ ಮಸಾಜ್ ಮಾಡಿಕೊಳ್ಳಿ. ಉತ್ತಮ ರಿಸಲ್ಟ್ ಬೇಕಾದರೆ ರಾತ್ರಿ ಮಲಗುವ ಮುನ್ನ ಮಸಾಜ್ ಮಾಡಿಕೊಂಡು ಮರುದಿನ ಬೆಳಗ್ಗೆ ಸ್ನಾನಮಾಡಿ. ಇದರಿಂದ ತಲೆಹೊಟ್ಟು ಸಮಸ್ಯೆ, ಡ್ರೈಹೇರ್, ಹೇರ್ಡ್ಯಾಮೇಜ್ ಎಲ್ಲ ಸಮಸ್ಯೆ ಕಡಿಮೆ ಆಗುತ್ತದೆ.