ಪಾಕಿಸ್ತಾನದ ಪೈಲಟ್​ಗಳ ಮೇಲೂ ಅಮೆರಿಕಕ್ಕೆ ಇಲ್ಲ ನಂಬಿಕೆ; ವಿಮಾನ ಸಂಚಾರಕ್ಕಿದ್ದ ಪರವಾನಗಿ ರದ್ದು

Pak
Published on

ವಾಷಿಂಗ್ಟನ್​: ಅಮೆರಿಕಕ್ಕೆ ವಿಶೇಷ ಅಥವಾ ಇನ್ನಾವುದೇ ವಿಮಾನಗಳನ್ನು ಚಲಾಯಿಸಿಕೊಂಡು ಬರಬೇಡಿ ಎಂದು ಪಾಕಿಸ್ತಾನದ ಪೈಲಟ್​ಗಳಿಗೆ ನಿಷೇಧ ವಿಧಿಸಲಾಗಿದೆ.

ಪಾಕಿಸ್ತಾನದ ಪೈಲಟ್​ಗಳಲ್ಲಿ ಶೇ.30ಕ್ಕೂ ಹೆಚ್ಚು ಜನರು ನಕಲಿ ಪ್ರಮಾಣಪತ್ರಗಳ ಆಧಾರದಲ್ಲಿ ಪೈಲಟ್​ಗಳಾಗಿದ್ದಾರೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಅಮೆರಿಕ ಈ ನಿಷೇಧ ಜಾರಿಗೆ ತಂದಿದೆ.

ಅಮೆರಿಕದ ವಿಮಾನ ಯಾನ ಸಚಿವಾಲಯ ಪಾಖ್​ ಪೈಲಟ್​ಗಳ ಪ್ರಮಾಣ ಪತ್ರಗಳ ಬಗ್ಗೆ ಶಂಕೆ ವ್ಯಕ್ತಪಡಿಸಿರುವುದರಿಂದ ಪಾಕಿಸ್ತಾನ ಇಂಟರ್​ನ್ಯಾಷನಲ್​ ಏರ್​ಲೈನ್ಸ್​ ವಿಮಾನಗಳು ಅಮೆರಿಕಕ್ಕೆ ಸಂಚಾರ ನಡೆಸಲು ಇದ್ದ ಅನುಮತಿಯನ್ನು ಅಮೆರಿಕ ಸಾರಿಗೆ ಇಲಾಖೆ ಹಿಂಪಡೆದಿದೆ.

ಇದಲ್ಲದೇ, ನಕಲಿ ವಿದ್ಯಾರ್ಹತೆಗಳ ಪ್ರಮಾಣ ಪತ್ರಗಳನ್ನು ಸಲ್ಲಿಸಿದ್ದು ಬಯಲಾದ ಬಳಿಕ ಕಳೆದ ತಿಂಗಳು ಪಾಕಿಸ್ತಾನ ಶೇ.30ಕ್ಕೂ ಅಧಿಕ ಪೈಲಟ್​ಗಳ ಸೇವೆಯನ್ನು ರದ್ದುಗೊಳಿಸಿತ್ತು.

ಕರಾಚಿಯಲ್ಲಿ ವಿಮಾನ ದುರಂತಕ್ಕೆ ಪೈಲಟ್​ಗಳ ನಿರ್ಲಕ್ಷ್ಯವೇ ಕಾರಣ ಎಂಬುದು ತನಿಖೆಯಲ್ಲಿ ಗೊತ್ತಾಗಿತ್ತು. ಪೈಲಟ್​ಗಳಲ್ಲಿ ಹಲವರು ವಿದ್ಯಾರ್ಹತೆ ಹಾಗೂ ವಿವಿಧ ಪ್ರಮಾಣಪತ್ರಗಳನ್ನು ನಕಲಿಯಾಗಿ ಸಲ್ಲಿಸಿದ್ದಾರೆ ಎಂದು ಎಂಬುದು ತಿಳಿದುಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net