More

    ಭಾರತದ ಬಗ್ಗೆ ಹೆಮ್ಮೆಯಿದೆ…; ಚೀನಾ ವಿರುದ್ಧ ಸೆಟೆದು ನಿಂತಿದ್ದಕ್ಕೆ ಮೋದಿಗೆ ಅಮೆರಿಕ ಶ್ಲಾಘನೆ

    ವಾಷಿಂಗ್ಟನ್​: ಚೀನಾದ ಅಕ್ರಮಣಶೀಲತೆ ಹಾಗೂ ವಿಸ್ತರಣಾ ವಾದದ ವಿರುದ್ಧ ಸೆಟೆದು ನಿಂತಿದ್ದಕ್ಕೆ ಪ್ರಧಾನಿ ಮೋದಿ ನಡೆಗೆ ಅಮೆರಿಕ ಶ್ಲಾಘಿಸಿದೆ. ಇತರ ದೇಶಗಳು ಕೂಡ ಭಾರತದ ನಡೆಯನ್ನು ಅನುಸರಿಸಬೇಕೆಂದು ಕರೆ ನೀಡಿದೆ.

    ಚೀನಾಗೆ ಎದುರಾಗಿ ನಿಂತ ಭಾರತದ ಪ್ರಧಾನಿ ಮೋದಿ ಬಗ್ಗೆ ಹೆಮ್ಮೆಯಿದೆ. ಜತೆಗೆ, ಕೆನಡಾ ಚೀನಾ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆಯೂ ಅಭಿಮಾನ ಹೊಂದಿದ್ದೇನೆ. ಚೀನಾ ವಿರುದ್ಧ ಎಲ್ಲ ದೇಶಗಳು ಹೆದರಿ ಅಡಗಿ ಕುಳಿತುಕೊಳ್ಳುವುದಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಅಮೆರಿಕದ ಸೆನೆಟರ್​ ಜಾನ್​ ಕೆನಡಿ ಹೇಳಿದ್ದಾರೆ.

    ಇದನ್ನೂ ಓದಿ; ಅಧ್ಯಕ್ಷರಾದರೂ ನ್ಯಾಯಾಲಯಕ್ಕಿಂತ ಮಿಗಿಲಲ್ಲ; ಹಣಕಾಸು ವಹಿವಾಟು ದಾಖಲೆ ಸಲ್ಲಿಸಿ; ಟ್ರಂಪ್​ಗೆ ಸುಪ್ರೀಂಕೋರ್ಟ್​ ಆದೇಶ

    ಹಾಂಗ್​ಕಾಂಗ್​ನೊಂದಿಗಿನ ಹಸ್ತಾಂತರ ಒಪ್ಪಂದವನ್ನು ಕೆನಡಾ ರದ್ದುಪಡಿಸಿತ್ತು. ಜತೆಗೆ, ಹಾಂಗ್​ಕಾಂಗ್​ಗೆ ರಕ್ಷಣಾ ವಲಯಯದ ಸೂಕ್ಷ್ಮ ಉಪಕರಣಗಳ ರಫ್ತನ್ನು ಸ್ಥಗಿತಗೊಳಿಸಿದ್ದಾಗಿ ಕೆನಡಾ ಪ್ರಧಾನಿ ಜಸ್ಟಿನ್​ ಟ್ರುಡೋ ಘೋಷಿಸಿದ್ದರು.

    ಈಗ ಚೀನಾವನ್ನ ಯಾವ ರಾಷ್ಟ್ರಗಳು ನಂಬುತ್ತಿಲ್ಲ. ಜಗತ್ತಿನ ಎರಡನೇ ಅತಿ ದೊಡ್ಡ ಆರ್ಥಿಕತೆ ಎಂದು ಬಿಂಬಿಸಿಕೊಳ್ಳುವ ಚೀನಾ ತನ್ನ ಆರ್ಥಿಕ ಬಲದಿಂದಲೇ ಇತರ ದೇಶಗಳನ್ನು ಹೆದರಿಸುತ್ತಿದೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ.

    ಇದನ್ನೂ ಓದಿ; ಭಾರತದ ಪರ ದನಿ ಎತ್ತಿದ ಸಂಸದೆಯ ಲೋಕಸಭಾ ಸದಸ್ಯತ್ವವನ್ನೇ ಕಸಿದ ನೇಪಾಳ…!

    ಚೀನಾ ಮಾಹಿತಿಯನ್ನು ಕದಿಯುತ್ತಿದೆ. ಬೌದ್ಧಿಕ ಆಸ್ತಿ ಹಕ್ಕುಗಳನ್ನು ಕಸಿಯುತ್ತಿದೆ. ಗಡಿಗಳನ್ನು ಅಕ್ರಮಿಸುತ್ತಿದೆ. ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಅತಿಕ್ರಮಣ ನಡೆಸುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಿದೆ ಎಂದು ಹೇಳಿದ್ದಾರೆ.

    ನಿಯಮಗಳ ಪ್ರಕಾರ ನಡೆದುಕೊಳ್ಳದಿದ್ದರೆ ಚೀನಾ ಜತೆ ಯಾವುದೇ ವಹಿವಾಟು ಮಾಡುವುದಿಲ್ಲ ಎಂದು ಚೀನಾಗೆ ಎಚ್ಚರಿಕೆ ನೀಡಬೇಕಿದೆ ಎಮದು ಜಾನ್​ ಕೆನಡಿ ಅಭಿಪ್ರಾಯಪಟ್ಟಿದ್ದಾರೆ.

    ಕರೊನಾ ಲಸಿಕೆ ಪಡೆದ ಜಗತ್ತಿನ ಮೊತ್ತ ಮೊದಲ ವ್ಯಕ್ತಿ ಈತ; ಮೈನವಿರೇಳಿಸುವ ಕ್ಲಿನಿಕಲ್​ ಟ್ರಯಲ್​ ಅನುಭವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts