

ಮುಂಬೈ: ಬಣ್ಣದ ಜಗತ್ತಿನಲ್ಲಿ ಖ್ಯಾತಿ ಪಡೆದಿರುವ ನಟ-ನಟಿಯರ ಖಾಸಗಿ ವಿಡಿಯೋ ಆಗಿಂದಾಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿರುತ್ತವೆ. ಇದೀಗ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರಿಗೆ ಸಂಬಂಧಿಸಿದೆ ಎನ್ನಲಾದ ವಿಡಿಯೋ ಒಂದು ವೈರಲ್ ಆಗಿದ್ದು, ಬಾಲಿವುಡ್ನಲ್ಲಿ ಹೊಸ ಚರ್ಚೆಯನ್ನೇ ಹುಟ್ಟುಹಾಕಿದೆ.
ಸದಾ ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡುವ ನಟಿ ಊರ್ವಶಿ ರೌಟೇಲಾ ಬಾತ್ರೂಮ್ನಲ್ಲಿ ಸ್ನಾನ ಮಾಡುತ್ತಿರುವ ಹರಿದಾಡುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ನಟಿ ಊರ್ವಶಿ ರೌಟೇಲಾ ವಿವಸ್ತ್ರರಾಗುತ್ತಿರುವುದನ್ನು ನೋಡಬಹುದಾಗಿದೆ. ಈ ವಿಡಿಯೋ ಹೊರಬರುತ್ತಿದ್ದಂತೆ ಹಲವರು ಕಿಡಿಕಾರಿದ್ದು, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಮಾಡೆಲ್ ಆಗಿ ವೃತ್ತಿಜಿವನ ಆರಂಭಿಸಿದ ಊರ್ವಶಿ ಸನ್ನಿ ಡಿಯೋಲ್ ನಟನೆಯ ಸಿಂಗ್ ಸಾಬ್ ದಿ ಗ್ರೇಟ್ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದರು. ಆ ಬಳಿಕ ಕನ್ನಡದ ಐರಾವತ ಸೇರಿದಂತೆ ಹಿಂದಿ ಚಿತ್ರಗಳಲ್ಲಿ ನಟಿಸಿ ಹೆಚ್ಚು ಖ್ಯಾತಿ ಗಳಿಸಿದ್ದಾರೆ. ಇದಲ್ಲದೆ ಕ್ರಿಕೆಟಿಗ ರಿಷಭ್ ಪಂತ್ ಅವರ ಜೊತೆಗಿನ ನಂಟಿನ ವಿಚಾರವಾಗಿಯೂ ನಟಿ ಸದ್ದು ಮಾಡಿದ್ದರು.
ಕೆಲವು ನಟ-ನಟಿಯರು, ಮಾಡೆಲ್ಗಳು ಪ್ರಚಾರಕ್ಕಾಗಿ ಯಾವ ಹಂತಕ್ಕೂ ಹೋಗಬಲ್ಲರು, ಬಾಲಿವುಡ್ನಲ್ಲಿ ಇಂಥಹವರು ತುಸು ಜಾಸ್ತಿ ಎಂದೇ ಹೇಳಬಹುದಾಗಿದೆ. ಚಿತ್ರ ವಿಚಿತ್ರ ಬಟ್ಟೆಗಳನ್ನು ಧರಿಸುವುದು, ಸತ್ತಂತೆ ನಾಟಕ ಆಡುವುದು, ಅರೆಬೆತ್ತಲೆಯಾಗಿ ಕ್ಯಾಮರಾಗಳಿಗೆ ಪೋಸ್ ನೀಡುವುದು. ಇಂತಹವರ ಸಾಲಿನಲ್ಲಿ ನಟಿ ಊರ್ವಶಿ ರೌಟೇಲಾ ಕೂಡ ಸೇರುತ್ತಾರೆ. ಈ ಹಿಂದೆ ಕ್ರಿಕೆಟಿಗ ರಿಷಬ್ ಪಂಥ್ ಬಗ್ಗೆ ಇಲ್ಲ ಸಲ್ಲದ್ದು ಮಾತನಾಡಿ ಸುದ್ದಿಯಾಗಿದ್ದ ನಟಿ ಊರ್ವಶಿ ರೌಟೆಲಾ ಈಗ ತಮ್ಮದೇ ಖಾಸಗಿ ವಿಡಿಯೋವನ್ನು ಪ್ರಚಾರಕ್ಕಾಗಿ ವೈರಲ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ವಿಡಿಯೋನಲ್ಲಿ ಕುರ್ತಾ ಧರಿಸಿರುವ ಊರ್ವಶಿ ರೌಟೆಲಾ, ಸ್ನಾನ ಮಾಡಲೆಂದು ಬಾತ್ರೂಂಗೆ ಬರುತ್ತಾರೆ. ಅವರ ಕೊರಳಿನಲ್ಲಿ ತಾಳಿ ರೀತಿ ಕಾಣುವ ಸರವೂ ಇದೆ. ಊರ್ವಶಿ ಟವೆಲ್ ಅನ್ನು ಹ್ಯಾಂಗರ್ಗೆ ನೇತುಹಾಕಿ ತಮ್ಮ ಬಟ್ಟೆ ಕಳೆಯಲು ಮುಂದಾಗುತ್ತಾರೆ ಅಲ್ಲಿಗೆ ವಿಡಿಯೋ ಎಂಡ್ ಆಗಿದೆ. ಇದು ಪಬ್ಲಿಸಿಟಿ ಸ್ಟಂಟ್ಗಾಗಿ ವೈರಲ್ ಮಾಡಿರುವ ವಿಡಿಯೋ ಎಂದು ಹಲವು ನೆಟ್ಟಿಗರು ಕಮೆಂಟ್ ಮಾಡಿ ಕಿಡಿಕಾರಿದ್ದಾರೆ. ಈ ಬಗ್ಗೆ ನಟಿ ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ.