'ಬಿಜೆಪಿಯನ್ನು ಮೆಚ್ಚಿಸಲು ಹೊರಟಿದ್ದಕ್ಕೆ 25-30 ಕೇಸಾಯಿತು, ಊರ್ಮಿಳಾ ಕಾಂಗ್ರೆಸ್​ನ್ನು ಮೆಚ್ಚಿಸಿ ಹೊಸ ಆಫೀಸು ಖರೀದಿಸಿದರು, ನಾನೆಷ್ಟು ಪೆದ್ದಿ'

kan
Published on

ಮುಂಬೈ: ಬಾಲಿವುಡ್​ ನಟಿ ಕಂಗನಾ ರಣಾವತ್​ ಅವರ ಮುಂಬೈ ಕಚೇರಿಯನ್ನು ಬೃಹನ್ಮುಂಬೈ ಪಾಲಿಕೆ ಒಡೆದುಹಾಕಿರುವ ವಿಚಾರ ನಿಮಗೆಲ್ಲರಿಗೂ ಗೊತ್ತಿರುವುದೇ. ಇದೀಗ ಯಾವ ಕಾರಣಕ್ಕಾಗಿ ತನ್ನ ಕಚೇರಿಯನ್ನು ಒಡೆಯಲಾಗಿದೆ ಮತ್ತು ಏನು ಮಾಡಿದ್ದರೆ ಕಟ್ಟಡಕ್ಕೆ ಏನೂ ತೊಂದರೆಯಾಗುತ್ತಿರಲಿಲ್ಲ ಎನ್ನುವುದರ ಬಗ್ಗೆ ಕಂಗನಾ ರಣಾವತ್​ ಮಾತನಾಡಿದ್ದಾರೆ.

ನಟಿ ಉರ್ಮಿಳಾ ಮಾತೋಂಡ್ಕರ್ ಅವರು ಇತ್ತೀಚೆಗೆ ಶಿವಸೇನೆ ಪಕ್ಷ ಸೇರಿದ್ದಾರೆ. ಪಕ್ಷ ಸೇರಿದ ಬೆನ್ನಲ್ಲೇ ಅವರು 3 ಕೋಟಿ ರೂಪಾಯಿ ಮೌಲ್ಯದ ಕಚೇರಿಯನ್ನು ಮುಂಬೈನಲ್ಲಿ ಖರೀದಿಸಿದ್ದಾರೆ. ಇದಕ್ಕೆ ಟಾಂಟ್​ ನೀಡಿರುವ ಕಂಗನಾ, "ಉರ್ಮಿಳಾ ಜೀ, ನಾನು ಕಷ್ಟ ಪಟ್ಟು ದುಡಿದ ಹಣದಲ್ಲಿ ಖರೀದಿಸಿದ್ದ ಕಚೇರಿಯನ್ನು ಕಾಂಗ್ರೆಸ್​ ನಾಶ ಮಾಡಿತು. ಬಿಜೆಪಿ ಮನವೊಲಿಸಲು ಹೋಗಿದ್ದಕ್ಕೆ ನನಗೆ ಸಿಕ್ಕಿದ್ದು, 25-30 ಕೇಸುಗಳು. ನಾನು ಮೂರ್ಖಳಾಗದೆ ನಿಮ್ಮಷ್ಟೇ ಜಾಣೆಯಾಗಿದ್ದರೆ ಕಾಂಗ್ರೆಸ್​ಗೆ ಖುಷಿ ಪಡಿಸುತ್ತಿದ್ದೆ. ನಾನದೆಷ್ಟು ಮೂರ್ಖಳು? " ಎಂದು ಹೇಳಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಉರ್ಮಿಳಾ, ತಾನು ಆ ಫ್ಲಾಟ್​ನ್ನು 2011ರಲ್ಲಿಯೇ ಖರೀದಿಸಿರುವುದಾಗಿ ಹೇಳಿಕೊಂಡಿದ್ದಾರೆ. ತಾನು ರಾಜಕೀಯಕ್ಕೆ ಬರುವ ಮುನ್ನವೇ ನಟನೆಯಿಂದ ಸಂಪಾದಿಸಿದ ಹಣದಲ್ಲಿ ಫ್ಲಾಟ್​ ಖರೀದಿಸಿದ್ದಾಗಿ ಆಕೆ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net