ಎದೆಯ ಮೇಲೆ ಫ್ಯಾನ್​ ಅಳವಡಿಸಿಕೊಂಡ ಬಂದ ಊರ್ಫಿ ಜಾವೇದ್; ಹೌದು..ಮೇಡಂ ಸಿಕ್ಕಾಪಟ್ಟೆ ಶಕೆ ಎಂದ್ರು ಫ್ಯಾನ್ಸ್​

urfi
Published on

ಮುಂಬೈ:  ಹಿಂದಿ ಕಿರುತೆರೆ ನಟಿ, ಹಿಂದಿ ಬಿಗ್​ಬಾಸ್ ಒಟಿಟಿಯ ಸ್ಪರ್ಧಿ ಉರ್ಫಿ ಜಾವೇದ್ ತನ್ನ ಡ್ರೆಸ್ಸಿಂಗ್​ನಿಂದಲೇ ಫೇಮಸ್. ಉರ್ಫಿ ಜಾವೇದ್ ಧರಿಸುವ ಬಟ್ಟೆ ಚಿತ್ರ ವಿಚಿತ್ರವಾಗಿರುತ್ತದೆ.  ಆದರೆ ಇದೀಗ ಊರ್ಫಿ ಬೇಸಿಗೆ ವಾತಾವರಣಕ್ಕೆ ತಕ್ಕಂತ ಡ್ರೆಸ್​ ತೊಟ್ಟು ಬಂದಿದ್ದಾರೆ.

ಬೇಸಿಗೆ ಬಿಸಿಲಿಗೆ ಜನ ಹೈರಾಣಾಗಿದ್ದಾರೆ. ತಂಪು ಪಾನಿಯಾ, ಐಸ್​​ಕ್ರೀಮ್​, ಜ್ಯೂಸ್​​ , ಕೂಲರ್, ಫ್ಯಾನ್​​​ ಮೊರೆ ಹೋಗಿದ್ದಾರೆ. ಆದರೆ  ಊರ್ಫಿ ಮಾತ್ರ ಕೊಂಚ ವಿಭಿನ್ನವಾಗಿ ಯೋಚಿಸಿ ಫ್ಯಾನ್​ನನ್ನೇ ಡ್ರೆಸ್​​ ಮಾಡಿಕೊಂಡು ಸಖತ್​ ಕೂಲ್​ ಆಗುವ ಮೂಲಕವಾಗಿ ಸುದ್ದಿಯಾಗಿದ್ದಾಳೆ.

ಕಪ್ಪು ಬಣ್ಣದ ಡ್ರೆಸ್​ ಧರಿಸಿರುವ ಊರ್ಫಿ ಜಾವೇದ್​ ಎದೆಯ ಭಾಗದಲ್ಲಿ ಫ್ಯಾನ್​ಗಳನ್ನು ಅಳವಡಿಸಿಕೊಂಡಿದ್ದಾರೆ. ಈ ಫ್ಯಾನ್​ಗಳಿಗೆ ಬ್ಯಾಟರಿ ಕನೆಕ್ಷನ್ ನೀಡಲಾಗಿದ್ದು, ಆನ್​ ಮಾಡಿದ ತಿರುಗುತ್ತವೆ. ಒಟ್ಟಿನಲ್ಲಿ ಈ ಡ್ರೆಸ್​ನಲ್ಲಿ ಕ್ರೇಜಿಯಾಗಿ ಕಾಣುತ್ತಿದ್ದಾರೆ. ಸದ್ಯ ಊರ್ಫಿ ಜಾವೇದ್ ಅವರ ಈ ವಿಚಿತ್ರ ಡ್ರೆಸ್​ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ. ನೆಟ್ಟಿಗರು ಬೇಸಿಗೆ ಕಾಲಕ್ಕೆ ಉತ್ತಮ ಡ್ರೆಸ್​ ಎಂದು ಹೇಳಿದ್ದಾರೆ.

ಡ್ರೆಸ್ಸಿಂಗ್ ಸೆನ್ಸ್ ಮತ್ತು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಕ್ಕೆ ಕೆಲವರು ಟ್ರೋಲ್ ಮಾಡಿದರೆ, ಕೆಲವರು ಅವರು ಡ್ರೆಸ್​ಗಳಲ್ಲಿ ಮಾಡುವ ಹೊಸ ಪ್ರಯೋಗವನ್ನು ಮೆಚ್ಚಿದ್ದಾರೆ.

ನಟಿ ಟ್ರೋಲ್ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ನಟಿ ಪ್ರತಿಬಾರಿ ಹೊಸ ಕ್ರಿಯೇಟಿವ್ ಡ್ರೆಸ್ ಧರಿಸಿದಾಗಲೂ ಟ್ರೋಲ್ ಆಗುತ್ತಾರೆ. ಎಲ್ಲರೂ ನಟಿಯನ್ನು ಇನ್​​ಸ್ಟಾಗ್ರಾಮ್​ನಲ್ಲಿಯೂ ಟ್ರೋಲ್ ಮಾಡುತ್ತಾರೆ. ಆದರೆ ನಟಿ ಇದಕ್ಕೆಲ್ಲಾ ಕೇರ್ ಮಾಡುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net