More

    15 ರೂ. ಸೀರೆ ಉಟ್ಟ ಅದಾ ಶರ್ಮಾ; ಇಷ್ಟು ಕಡಿಮೆಗೆ ಸೀರೆ ಎಲ್ಲಿ ಸಿಗುತ್ತದೆ ನಮಗೂ ಹೇಳಿ ಎಂದ ನೆಟ್ಟಿಗರು!

    ಮುಂಬೈ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ರಣವಿಕ್ರಮ ಚಿತ್ರದ ಮೂಲಕವಾಗಿ ಅದಾ ಶರ್ಮಾ ಸ್ಯಾಂಡಲ್​ವುಡ್​ ಅಭಿಮಾನಿಗಳಿಗೆ ಪರಿಚಿತರು. ದುಬಾರಿ ಬೆಲೆ ಬಾಳುವ ಮನೆಯನ್ನು ಖರೀದಿ ಮಾಡಿ ಸುದ್ದಿಯಾಗಿದ್ದ ಕೋಟಿ..ಕೋಟಿ ಒಡತಿ ಇದೀಗ 15 ರೂಪಾಯಿ ಬೆಲೆ ಬಾಳುವ ಸೀರೆ ಧರಿಸಿ ಸುದ್ದಿಯಾಗಿದ್ದಾರೆ.

    ಮುಂಬೈನಲ್ಲಿ ನಟಿ ಕಿತ್ತಳೆ ಮತ್ತು ಬಿಳಿ ಸೀರೆಯಲ್ಲಿ ಪೋಸ್ ನೀಡುತ್ತಿದ್ದರು. ಕೆಲವರು ನಟಿಯ ಸೀರೆಯನ್ನು ಹೊಗಳಿದಾಗ ಅದಾ ಶರ್ಮಾ ಆ ಸೀರೆ ತನ್ನ ಅಜ್ಜಿಯದ್ದು ಎಂದು ಹೇಳಿದರು. ಅವರು ಅದನ್ನು ಕೇವಲ 15 ರೂಪಾಯಿಗೆ ಖರೀದಿಸಿದ್ದಾರೆ ಎಂದಿದ್ದಾರೆ.

    ಇದು ಅಜ್ಜಿಯ ಸೀರೆಯಾಗಿರುವುದರಿಂದ ಇದಕ್ಕೆ ಬೆಲೆ ಕಟ್ಟಲಾಗದು. ಇದು ಕೋಟಿಗಟ್ಟಲೆ ಬೆಲೆಬಾಳುತ್ತದೆ ಎಂದು ಬಹಿರಂಗಪಡಿಸುವ ಮೂಲಕ ಎಲ್ಲರಿಗೂ ಆಘಾತ ನೀಡಿದರು.   ಸೀರೆ ಬೆಲೆ 15 ರೂಪಾಯಿ ಎಂದು ಅದಾ ಹೇಳಿದಾಗ ಅಲ್ಲಿದ್ದವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.  ಈ ವಿಡಿಯೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ.

    ನಟ ಸುಶಾಂತ್ ಸಿಂಗ್ ಮುಂಬೈನ ಮೋಂಟ್ ಬ್ಲ್ಯಾಂಕ್ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದರು. 2020 ಜೂನ್ 14ರಂದು ಅದೇ ಅಪಾರ್ಟ್ ಮೆಂಟ್  ರೂಮ್​​ನಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಅಲ್ಲಿಂದ ಆ ಫ್ಲ್ಯಾಟ್ ಖಾಲಿಯೇ ಉಳಿದಿತ್ತು.  ಬಾಲಿವುಡ್ ನ ಖ್ಯಾತ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯನ್ನೇ ಖರೀದಿಸಿದ್ದಾರೆ ನಟಿ ಅದಾ ಶರ್ಮಾ.

    ಸ್ಟಾರ್​ ನಟ ಆ*ತ್ಮಹತ್ಯೆ ಮಾಡಿಕೊಂಡಿದ್ದ ಮನೆಯನ್ನೇ ಖರೀದಿಸಿದ “ರಣವಿಕ್ರಮ” ನಟಿ ಅದಾ ಶರ್ಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts