

ಮುಂಬೈ: ಸೋಶಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್ ಚಿತ್ರವಿಚಿತ್ರ ಬಟ್ಟೆಗಳಿಂದ, ಅರೆಬರೆ ದೇಹ ಪ್ರದರ್ಶನ ಮಾಡೋದಕ್ಕೇ ಫೇಮಸ್. ಉರ್ಫಿ ಈ ಬಾರಿಯ ವೇಷ ಸಖತ್ ವೈರಲ್ ಆಗಿದೆ.
ಉರ್ಫಿ ಜಾವೇದ್ ಅವರು ನೀಲಿ ಬಣ್ಣದ ಡ್ರೆಸ್ ಧರಿಸಿರುವ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಇಂಟರೆಸ್ಟಿಂಗ್ ವಿಷ್ಯ ಏನಪ್ಪಾ ಅಂದ್ರೆ ಈ ಉಡುಪನ್ನು ದಿಂಬಿನೊಂದಿಗೆ ತೊಟ್ಟಿದ್ದಾಳೆ. ಇದರಿಂದ ಹಲವರು ಅಚ್ಚರಿಗೊಂಡಿದ್ದಾರೆ.
ಉರ್ಫಿ ಜಾವೇದ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಜನಪ್ರಿಯವಾಗುತ್ತಿದೆ. ಆದರೆ, ಈಗ ಜನರು ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಒಬ್ಬ ವ್ಯಕ್ತಿ ಹೇಳಿದರು: “ಇಂತಹ ಸೋಮಾರಿಗಳಿಗೆ ಇದು ಪರಿಪೂರ್ಣ ಉಡುಗೆ. ಇನ್ನೊಬ್ಬರು ತಮಾಷೆಯಾಗಿ ಹೇಳಿದರು, "ಉರ್ಫಿ ತನ್ನದೇ ಆದ ಚೀಲ ಮತ್ತು ಹಾಸಿಗೆಯನ್ನು ಹೊತ್ತಿದ್ದಾಳೆ." ಎಂದು ಹೇಳಿದರು.
ಈ ವಿಡಿಯೋಗೆ ಸಂಬಂಧಿಸಿದಂತೆ ಕೆಲವರು ನಟಿಯ ಸ್ಟೈಲ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ ಕೆಲವರು ಆಕೆಯ ಧೈರ್ಯವನ್ನು ಶ್ಲಾಘಿಸಿದ್ದಾರೆ. ವಿಲಕ್ಷಣ ಡ್ರೆಸಿಂಗ್ ಸೆನ್ಸೇ ಆಕೆಗೆ ಫಾಲೋವರ್‌ಗಳನ್ನು ತಂದುಕೊಟ್ಟಿದೆ. ಹಾಕುವ ಬಹುತೇಕ ಬಟ್ಟೆಗಳಿಗೆ ಟ್ರೋಲ್ ಆದರೂ, ನಗಿಸಿಕೊಂಡರೂ, ಉಗಿಸಿಕೊಂಡರೂ ಕ್ಯಾರೇ ಎನ್ನದೆ ಮರುದಿನವೇ ಹೊಸ ಅವತಾರದಲ್ಲಿ ಪ್ರತ್ಯಕ್ಷವಾಗುತ್ತಾಳೆ ಉರ್ಫಿ