More

    UPSC ಪಾಸ್​, ಪೊಲೀಸ್​ ಹೆಂಡ್ತಿ, ಅದ್ಧೂರಿ ಲೈಫ್​: ಆದ್ರೆ ಯಾರನ್ನೂ ಬಿಡಲ್ಲ ಕರ್ಮದ ಫಲ, ಯುವಕ ಜೈಲುಪಾಲು!

    ಲಖನೌ: ನಕಲಿ ಯುಪಿಎಸ್​ಸಿ ಪ್ರಮಾಣ ಪತ್ರಗಳ ಮೂಲಕ ಮಹಿಳಾ ಪೊಲೀಸ್​ ಅಧಿಕಾರಿಯನ್ನು ನಂಬಿಸಿ ಮದುವೆಯಾಗಿದ್ದ ವ್ಯಕ್ತಿಯನ್ನು ಉತ್ತರ ಪ್ರದೇಶದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

    ಬಂಧಿತನನ್ನು ವಿಜಯ್​ ಸಿಂಗ್​​ (22) ಎಂದು ಗುರುತಿಸಲಾಗಿದೆ. ಈತ ಉತ್ತರ ಪ್ರದೇಶದ ಗೊಂಡಾ ಮೂಲದವನು. ಪ್ರತಿನಿತ್ಯ ಥಳಿಸುವ ಮೂಲಕ ಗಂಡ ಕಿರುಕುಳ ನೀಡುತ್ತಿದ್ದಾನೆ ಎಂದು ಮಹಿಳಾಧಿಕಾರಿ ದೂರು ದಾಖಲಿಸಿದ ಬಳಿಕ ವಿಚಾರಣೆ ನಡೆಸಿದಾಗ ಆರೋಪಿಯ ಅಸಲಿ ಮುಖವಾಡ ಕಳಚಿ ಬಿದ್ದಿದೆ.

    ಆರೋಪಿ ವಿಜಯ್​ 2023ರಲ್ಲಿ ಮಹಿಳಾ ಪೊಲೀಸ್​ ಅಧಿಕಾರಿಯನ್ನು ಮದುವೆಯಾಗಿದ್ದ. ತಾನು ಯುಪಿಎಸ್​ಸಿ ಪರೀಕ್ಷೆಯನ್ನು ಪಾಸ್​ ಮಾಡಿದ್ದು, ಮುಂದಿನ ಪ್ರಕ್ರಿಯೆಗಾಗಿ ಕಾಯುತ್ತಿದ್ದೇನೆ ಎಂದು ನಕಲಿ ಪ್ರಮಾಣ ಪತ್ರಗಳ ಮೂಲಕ ಮಹಿಳೆಯನ್ನು ನಂಬುವಂತೆ ಮಾಡಿದ್ದ. ವಿಜಯ್​ ಆಡಿದ ಬೆಣ್ಣೆಯಂತಹ ಮಾತುಗಳು ಆತನ ಮೇಲೆ ನಂಬಿಕೆ ಹೆಚ್ಚಾಗುವಂತೆ ಮಾಡಿತು. ಅಲ್ಲದೆ, ಒಳ್ಳೆಯ ಸಂಪಾದನೆ ಇರುವ ಸ್ಥಾನವನ್ನು ಅಲಂಕರಿಸುತ್ತಿದ್ದಾನೆ ಎಂಬ ದುರಾಸೆಯಲ್ಲಿ ಸರಿಯಾಗಿ ಆತನ ಬಗ್ಗೆ ವಿಚಾರಿಸದೆ ಮಹಿಳಾಧಿಕಾರಿ ವಂಚನೆಗೆ ಒಳಗಾಗಿದ್ದಾರೆ.

    ಇತ್ತೀಚೆಗೆ ಮಹಿಳಾಧಿಕಾರಿ, ಗಂಡ ವಿಜಯ್ ಯುಪಿಎಸ್​ಸಿ ಸ್ಥಾನಮಾನದ ಬಗ್ಗೆ ಸಂಶಯ ವ್ಯಕ್ತಪಡಿಸಿ, ದಾಖಲೆಗಳನ್ನು ನೀಡುವಂತೆ ಕೇಳಿದಳು. ಆದರೆ, ಅವುಗಳನ್ನು ಕೊಡಲು ವಿಜಯ್​ ವಿಫಲವಾಗಿದ್ದು, ತನ್ನ ರಾಕ್ಷಸಿ ಗುಣವನ್ನು ಹೊರಹಾಕಿದ ವಿಜಯ್​, ವಂಚನೆ ಮಾಡಿದ ಸುದ್ದಿಯನ್ನು ಹೊರಗಡೆ ಹರಡಿದರೆ ಸಾಯಿಸುವುದಾಗಿ ಕೊಲೆ ಬೆದರಿಕೆ ಹಾಕಿದ್ದಾನೆ.

    ಗಂಡನ ಗೊಡ್ಡು ಬೆದರಿಕೆಗೆ ಜಗ್ಗದ ಮಹಿಳೆ, ಧೈರ್ಯ ಮಾಡಿ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರ ಪ್ರಕಾರ, ಅಪರಾಧಿ ಈ ಹಿಂದೆ ತನ್ನ ಪತ್ನಿಗೆ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದಾನೆಂದು ತಿಳಿದುಬಂದಿದೆ. ವಿಜಯ್ ವಿರುದ್ಧ ವಂಚನೆ, ಫೋರ್ಜರಿ ಮತ್ತು ಕೌಟುಂಬಿಕ ದೌರ್ಜನ್ಯದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ. (ಏಜೆನ್ಸೀಸ್​)

    ಕಾಂಗ್ರೆಸ್​ಗೆ ರಾಜ್ಯಸಭೆ ಅಭ್ಯರ್ಥಿ ಆಯ್ಕೆ ಸವಾಲು; ಮೂರು ಸ್ಥಾನ ಭರ್ತಿಗೆ ಅವಕಾಶ

    ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿದ ಶ್ರೀಲಂಕಾದ ಮೊದಲ ಬ್ಯಾಟರ್​ ಪಥುಮ್​ ನಿಸ್ಸಂಕ; ಜಯಸೂರ್ಯರ 24 ವರ್ಷಗಳ ದಾಖಲೆ ಪತನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts