More

    ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿದ ಶ್ರೀಲಂಕಾದ ಮೊದಲ ಬ್ಯಾಟರ್​ ಪಥುಮ್​ ನಿಸ್ಸಂಕ; ಜಯಸೂರ್ಯರ 24 ವರ್ಷಗಳ ದಾಖಲೆ ಪತನ!

    ಪಲ್ಲೆಕಿಲೆ: ಆರಂಭಿಕ ಪಥುಮ್​ ನಿಸ್ಸಂಕ (210*ರನ್​, 139 ಎಸೆತ, 20 ಬೌಂಡರಿ, 8 ಸಿಕ್ಸರ್​) ಏಕದಿನ ಕ್ರಿಕೆಟ್​ನಲ್ಲಿ ಶ್ರೀಲಂಕಾ ಪರ ದ್ವಿಶತಕ ಸಿಡಿಸಿದ ಮೊಟ್ಟಮೊದಲ ಬ್ಯಾಟರ್​ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 25 ವರ್ಷದ ನಿಸ್ಸಂಕ ಈ ಸಾಧನೆ ಮಾಡುವ ಮೂಲಕ ಶ್ರೀಲಂಕಾಕ್ಕೆ 42 ರನ್​ಗಳಿಂದ ಗೆಲುವು ತಂದುಕೊಟ್ಟರು.

    ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಲಂಕಾ, ನಿಸ್ಸಂಕ ಸಾಹಸದಿಂದ 3 ವಿಕೆಟ್​ಗೆ 381 ರನ್​ ಪೇರಿಸಿತು. ಪ್ರತಿಯಾಗಿ ಅಜ್ಮತ್​ಉಲ್ಲಾ ಒಮರ್ಜಾಯಿ (149*) ಮತ್ತು ಮೊಹಮದ್​ ನಬಿ (136) ಶತಕದ ಹೋರಾಟದ ನಡುವೆಯೂ ಆಫ್ಘನ್​ 6 ವಿಕೆಟ್​ಗೆ 339 ರನ್​ ಗಳಿಸಲಷ್ಟೇ ಶಕ್ತವಾಯಿತು.

    ಸನತ್​ ಜಯಸೂರ್ಯ 24 ವರ್ಷಗಳ ದಾಖಲೆ ಪತನ
    ಪಥುಮ್​ ನಿಸ್ಸಂಕ ಏಕದಿನ ಕ್ರಿಕೆಟ್​ನಲ್ಲಿ ಶ್ರೀಲಂಕಾ ಪರ ಗರಿಷ್ಠ ರನ್​ ಬಾರಿಸಿದ ಬ್ಯಾಟರ್​ ಎಂಬ ಸನತ್​ ಜಯಸೂರ್ಯ ಅವರ 24 ವರ್ಷ ಹಳೆಯ ದಾಖಲೆಯನ್ನೂ ಮುರಿದಿದ್ದಾರೆ. 2000ದಲ್ಲಿ ಶಾರ್ಜಾದಲ್ಲಿ ಭಾರತ ವಿರುದ್ಧದ ಚಾಂಪಿಯನ್ಸ್​ ಟ್ರೋಫಿ ಪಂದ್ಯದಲ್ಲಿ ರ್ಜಯಸೂರ್ಯ 189 ರನ್​ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ದೇಶೀಯ ಏಕದಿನ ಕ್ರಿಕೆಟ್​ನಲ್ಲೂ ಲಂಕಾ ಪರ ಇದುವರೆಗೆ ದ್ವಿಶತಕ ದಾಖಲಾಗಿರಲಿಲ್ಲ.

    ಪಥುಮ್​ ನಿಸ್ಸಂಕ ಏಕದಿನ ಕ್ರಿಕೆಟ್​ನಲ್ಲಿ ವಿಶ್ವದ 10ನೇ ದ್ವಿಶತಕವೀರರಾಗಿದ್ದಾರೆ. ರೋಹಿತ್​ ಗರಿಷ್ಠ 3 ಬಾರಿ ದ್ವಿಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. ಸಚಿನ್​ ತೆಂಡುಲ್ಕರ್​, ವೀರೇಂದ್ರ ಸೆಹ್ವಾಗ್​, ಶುಭಮಾನ್​ ಗಿಲ್​, ಇಶಾನ್​ ಕಿಶನ್​, ಮಾರ್ಟಿನ್​ ಗುಪ್ಟಿಲ್​, ಕ್ರಿಸ್​ ಗೇಲ್​, ಖರ್​ ಜಮಾನ್​, ಗ್ಲೆನ್​ ಮ್ಯಾಕ್ಸ್​ವೆಲ್​ ಇತರ ದ್ವಿಶತಕವೀರರು.

    ಪಥುಮ್​ ನಿಸ್ಸಂಕ 136 ಎಸೆತಗಳಲ್ಲಿ ದ್ವಿಶತಕ ಪೂರೈಸುವ ಮೂಲಕ 3ನೇ ಅತಿವೇಗದ ಸಾಧಕ ಎನಿಸಿದರು. ಇಶಾನ್​ ಕಿಶನ್​ (126) ಮತ್ತು ಗ್ಲೆನ್​ ಮ್ಯಾಕ್ಸ್​ವೆಲ್​ (128) ಮೊದಲೆರಡು ಸ್ಥಾನದಲ್ಲಿದ್ದಾರೆ. 25 ವರ್ಷ, 267 ದಿನ ವಯಸ್ಸಿನ ಪಥುಮ್​ ನಿಸ್ಸಂಕ ಏಕದಿನದಲ್ಲಿ ದ್ವಿಶತಕ ಸಿಡಿಸಿದ 3ನೇ ಕಿರಿಯ ಬ್ಯಾಟರ್​. ಶುಭಮಾನ್​ ಗಿಲ್​ (23 ವರ್ಷ, 132 ದಿನ) ಮತ್ತು ಇಶಾನ್​ ಕಿಶನ್​ (24 ವರ್ಷ, 145 ದಿನ) ಮೊದಲೆರಡು ಸ್ಥಾನದಲ್ಲಿದ್ದಾರೆ.

    ಶ್ರೀಲಂಕಾ: 3 ವಿಕೆಟ್​ಗೆ 381 (ಪಥುಮ್​ ನಿಸ್ಸಂಕ 210*, ಅವಿಷ್ಕಾ ೆರ್ನಾಂಡೊ 88, ಕುಸಲ್​ ಮೆಂಡಿಸ್​ 16, ಸಮರವಿಕ್ರಮ 45, ರೀದ್​ ಅಹ್ಮದ್​ 79ಕ್ಕೆ 2, ನಬಿ 44ಕ್ಕೆ 1). ಅಫ್ಘಾನಿಸ್ತಾನ: 6 ವಿಕೆಟ್​ಗೆ 339 (ರಹಮತ್​ ಷಾ 7, ಒಮರ್ಜಾಯಿ 149*, ನಬಿ 136, ಮಧುಶಾನ್​ 75ಕ್ಕೆ 4).

    ಪ್ಯಾರಿಸ್​ ಒಲಿಂಪಿಕ್ಸ್​ ಪದಕಗಳಲ್ಲಿ ಕಬ್ಬಿಣ! ಇವು ಐಫೆಲ್​ ಟವರ್​ ಲೋಹದ ತುಂಡುಗಳು​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts