ಯುಪಿಎಸ್​​ಸಿ : ನಾಗರಿಕ ಸೇವಾ ಪರೀಕ್ಷೆಯ ಅಂಕಪಟ್ಟಿ ಸೆಪ್ಟೆಂಬರ್ 7 ನಂತರ ಬಿಡುಗಡೆ

UPSC
Published on

ನವದೆಹಲಿ: ಯುಪಿಎಸ್​ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ವೈಯಕ್ತಿಕ ಅಂಕಪಟ್ಟಿಯನ್ನು ಸೆಪ್ಟೆಂಬರ್ 7ರ ನಂತರ ಬಿಡುಗಡೆ ಮಾಡಲಿದೆ.

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​​ಸಿ) ನಾಗರಿಕ ಸೇವಾ ಪರೀಕ್ಷೆ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ upc.gov.in ನಲ್ಲಿ ಇತ್ತೀಚೆಗಷ್ಟೇ ಬಿಡುಗಡೆ ಮಾಡಿತ್ತು. ಈ ವರ್ಷ 829 ಅಭ್ಯರ್ಥಿಗಳು ಐಎಎಸ್, ಐಪಿಎಸ್, ಐಆರ್​​ಎಸ್ ಮತ್ತು ಇತರ ಕೇಂದ್ರದ ಗ್ರೂಪ್ ಎ ಮತ್ತು ಬಿ ಹುದ್ದೆಗಳಿಗೆ ಅರ್ಹರಾಗಿದ್ದಾರೆ.

ಈಗ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆಯಾದ ಕಟ್ ಆಫ್ ಅಂಕಗಳನ್ನು ಪರಿಶೀಲಿಸಬಹುದು.  ಅಷ್ಟೇ ಅಲ್ಲದೆ ಸಿಎಸ್​​ಇ ಅರ್ಹ ಅಭ್ಯರ್ಥಿಗಳ ವೈಯಕ್ತಿಕ ಅಂಕಪಟ್ಟಿ ಸೆಪ್ಟೆಂಬರ್ 7ರ ನಂತರ ಲಭ್ಯವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net