More

    ಮನೋರೋಗಿ ಗಂಡನ ಬಳಲಿಕೆ ಸಹಿಸದೆ ಗಂಡ ಮಕ್ಕಳನ್ನು ಕೊಲೆಗೈದು ಆತ್ಮಹತ್ಯೆಗೀಡಾದ ವೈದ್ಯೆ

    ನಾಗ್ಪುರ: ತೀವ್ರ ಖಿನ್ನತೆಯಿಂದ ಬಳಲುತ್ತಿದ್ದ ಗಂಡ ದಿನವೂ ಸಾಯುವುದನ್ನು ನೋಡಲಾಗದ ವೈದ್ಯೆಯೊಬ್ಬಳು ಗಂಡ, ಮಕ್ಕಳಿಗೆ ಅರಿವಳಿಕೆ ಔಷಧಿ ನೀಡಿ ಕೊಲೆಗೈದು, ತಾನು ನೇಣಿಗೆ ಕೊರಳೊಡ್ಡಿದ ಘಟನೆ ಮಂಗಳವಾರ ಕೋರಾಡಿ ಪ್ರದೇಶದಲ್ಲಿ ನಡೆದಿದೆ.
    ಡಾ. ಸುಷ್ಮಾ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೀಡಾಗಿದ್ದಾಳೆ. ಆಕೆಯ ಗಂಡ ಇಂಜಿನಿಯರಿಂಗ್ ಕಾಲೇಜು ಪ್ರಾದ್ಯಾಪಕ ಧೀರಜ್ (42), ಹಾಗೂ 11 ಮತ್ತು 5 ವರ್ಷದ ಮಕ್ಕಳಿಬ್ಬರು ಸಾವಿಗೀಡಾಗಿರುವುದು ಕಂಡುಬಂದಿದೆ.
    ಡಾ.ರಾಣೆ ಇಲ್ಲಿಯ ಅವಂತಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಸ್ಕೂಟರ್‌ನಲ್ಲಿ ಮಗಳ ಜೊತೆ ಆಸ್ಪತ್ರೆಗೆ ತೆರಳಿ ಅರಿವಳಿಕೆ ಔಷಧಿಯ ಬಾಟಲಿಯನ್ನು ತಂದಿದ್ದಾಳೆ.

    ಇದನ್ನೂ ಓದಿ:  ಮೇಲ್ವರ್ಗದವನ ಹಿತ್ತಿಲಲ್ಲಿದ್ದ ಹೂ ಕಿತ್ತಿದ್ದಕ್ಕೆ ನಾಯ್ಕ್​ ಸಮುದಾಯದ 40 ಕುಟುಂಬಗಳಿಗೆ ಬಹಿಷ್ಕಾರ…!

    ಮನೆಗೆ ಮರಳಿದ ನಂತರ, ಆಕೆ ತನ್ನ ಪತಿ ಮತ್ತು ಇಬ್ಬರು ಮಕ್ಕಳಿಗೆ ಹೆಚ್ಚಿನ ಪ್ರಮಾಣದ ಅರಿವಳಿಕೆ ಚುಚ್ಚುಮದ್ದು ನೀಡಿ ನಂತರ ನೇಣು ಹಾಕಿಕೊಂಡಿದ್ದಾಳೆ ಎಂದು ಕೊರಡಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
    ಧೀರಜ್ ಮತ್ತು ಇಬ್ಬರು ಮಕ್ಕಳ ಶವಗಳು ಪತ್ತೆಯಾದ ಕೊಠಡಿಯಿಂದ ಪೊಲೀಸರು ಎರಡು ಸಿರಿಂಜ್ ವಶಪಡಿಸಿಕೊಂಡಿದ್ದಾರೆ ಮತ್ತು ಮನೆಯ ಹಿತ್ತಲಿನಲ್ಲಿ ಮತ್ತೊಂದು ಸಿರಿಂಜ್ ಮತ್ತು ಅರಿವಳಿಕೆ ಖಾಲಿ ಬಾಟಲಿ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಮನೆಯಲ್ಲಿ ಖಾಲಿ ಮದ್ಯದ ಬಾಟಲಿಗಳು ಸಿಕ್ಕಿದ್ದು, ಧೀರಜ್ ಮನೆಯಲ್ಲಿ ಮದ್ಯ ಸೇವಿಸುತ್ತಿದ್ದನೆಂದು ತನಿಖೆಯಿಂದ ತಿಳಿದುಬಂದಿದೆ. ಸ್ಥಳದಲ್ಲಿ ಸಿಕ್ಕ ಆತ್ಮಹತ್ಯೆ ಪತ್ರದಲ್ಲಿ, ಡಾ. ರಾಣೆ ‘ಕೆಲವು ದಿನಗಳಿಂದ ಪತಿ ಸಾಕಷ್ಟು ಖಿನ್ನತೆಗೆ ಒಳಗಾಗಿದ್ದು, ಆತ ಪ್ರತಿದಿನ ಸಾಯುತ್ತಿರುವುದನ್ನು ನೋಡಲಾಗುತ್ತಿಲ್ಲ ‘ ಎಂದು ಆಕೆ ಬರೆದಿದ್ದಾಳೆ.

    ಇದನ್ನೂ ಓದಿ:  ಸಂಗೀತ ಕೇಳಿದರೆ, ಟಿ.ವಿ ನೋಡಿದರೆ ಭಾರಿ ದಂಡ: ಪಶ್ಚಿಮ ಬಂಗಾಳದಲ್ಲಿ ಫತ್ವಾ!

    ಈ ಸಾವಿನ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರು ಅವಂತಿ ಆಸ್ಪತ್ರೆಯ ವೈದ್ಯರು ಮತ್ತು ಧೀರಜ್ ಕೆಲಸ ಮಾಡುತ್ತಿದ್ದ ಜಿ ಹೆಚ್ ರೈಸೋನಿ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಯ ಸಿಬ್ಬಂದಿಯ ಬಳಿಗೂ ವಿಚಾರಣೆ ನಡೆಸಿದ್ದಾರೆ. ಆದರೆ ಆ ದಂಪತಿ ಎದುರಿಸುತ್ತಿದ್ದ ಯಾವುದೇ ಮಾನಸಿಕ ಸಮಸ್ಯೆಗಳ ಬಗ್ಗೆ ತಮಗೆ ತಿಳಿದಿಲ್ಲ ಸಿಬ್ಬಂದಿ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಶವಗಳನ್ನು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಮತ್ತು ವಿಧಿವಿಜ್ಞಾನದ ವಿಶ್ಲೇಷಣೆಗೆ ಒಳಾಂಗಗಳನ್ನು ಕಳುಹಿಸಲಾಗಿದೆ.
    ಪೊಲೀಸರು ಕುಟುಂಬ ಸದಸ್ಯರು ಮತ್ತು ಸ್ನೇಹಿತರನ್ನು ವಿಚಾರಣೆಗೆ ಕರೆದಿದ್ದಾರೆ ಮತ್ತು ಅವರ ಕರೆ ವಿವರ ದಾಖಲೆಗಳನ್ನು ಸಹ ವಿಶ್ಲೇಷಿಸುತ್ತಿದ್ದಾರೆ.

    ಉಗ್ರರು ಹರಿಬಿಟ್ಟ ಬಾರಾಮುಲ್ಲಾ ದಾಳಿಯ ವಿಡಿಯೋದಲ್ಲೇನಿದೆ? ಪೊಲೀಸರ ಪ್ರತ್ಯುತ್ತರವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts