ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಉಳ್ಳಾಲ ನಗರಸಭೆಯ ಸಾವಾನ್ಯ ಸಭೆ ಮಂಗಳವಾರ ನಡೆಯಿತು. ನೂತನ ಅಧ್ಯಕ್ಷೆ ಶಶಿಕಲಾ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಸಭೆ ಇದಾಗಿದ್ದು, ಹಲವು ವಿಷಯಗಳ ಬಗ್ಗೆ ಕೋಲಾಹಲಕ್ಕೆ ಕಾರಣವಾಯಿತು.
ಪ್ರಮುಖವಾಗಿ ತಗಡು ಶೀಟು ನಾಪತ್ತೆ, ಒಳಚರಂಡಿ ಕಾಮಗಾರಿಯಲ್ಲಿ ವಿಳಂಬ, ಕುಡಿಯುವ ನೀರಿನ ಸಮಸ್ಯೆ, ಅಸಮರ್ಪಕ ನತ್ಯಾಜ್ಯ ವಿಲೇವಾರಿ, ತೊಕ್ಕೊಟ್ಟು ಚೆಂಬುಗುಡ್ಡೆ ರಸ್ತೆ ಅವ್ಯವಸ್ಥೆಯಿಂದ ನಡೆದ ಅಪಘಾತಗಳ ಬಗ್ಗೆ ಸಭೆಯಲ್ಲಿ ಸದಸ್ಯರು ಪ್ರಸ್ತಾಪಿಸಿದ್ದು, ಭಾರೀ ಗದ್ದಲ, ಕೋಲಾಹಲಕ್ಕೆ ಕಾರಣವಾಯಿತು. ಈ ವಿಚಾರಗಳ ಬಗ್ಗೆ ವಾತನಾಡುವಾಗ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗೈರಿನ ಬಗ್ಗೆಯೂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಐದು ವರ್ಷಗಳಲ್ಲಿ ನಡೆದ ಯಾವ ಸಭೆಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಬಂದಿಲ್ಲ. ಈ ಹಿನ್ನೆಲೆ ಜಿಲ್ಲಾಧಿಕಾರಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಸದಸ್ಯ ಅಬ್ದುಲ್ ಜಬ್ಬಾರ್ ಒತ್ತಾಯಿಸಿದರು.
ಇತ್ತೀಚೆಗೆ ಚೆಂಬುಗುಡ್ಡೆಯಲ್ಲಿ ನಡೆದ ಅಪಘಾತದ ಬಗ್ಗೆ ಪ್ರಸ್ತಾಪಿಸಿದ ದಿನಕರ್ ಉಳ್ಳಾಲ್, ಈ ಪ್ರದೇಶದಲ್ಲಿರುವ ಗುಡ್ಡಬದಿಯ ಮರಗಳು ರಸ್ತೆಗೆ ಬೀಳುವ ಸಾಧ್ಯತೆ ಇದೆ. ಅಲ್ಲದೆ ಮಣ್ಣು ಜರಿದು ವಾಮಂಜೂರಿನ ಕೆತ್ತಿಕಲ್ಲಿನಂತಾಗುವ ಅಪಾಯ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಸುಮಾರು 66 ಕೋಟಿ ರೂ. ವೆಚ್ಚದ ಒಳಚರಂಡಿ ಕಾಮಗಾರಿಗೆ 12 ವರ್ಷ ಕಳೆದಿದೆ. ಆದರೆ ರೂ.44 ಕೋಟಿಯ ಪೈಪ್ ಹಾಕಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು.
ವೆಟ್‌ವೆಲ್ ನಿರ್ವಾಣವಾಗುವ ಜಮೀನಿನ ವ್ಯಾಜ್ಯ ನ್ಯಾಯಾಲಯದಲ್ಲಿ ಇರುವುದರಿಂದ ಕೆಲಸ ಮುಂದುವರಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ನೀಡಿದ ಸಬೂಬಿಗೆ ಅಸವಾಧಾನಗೊಂಡ ದಿನಕರ್, ಹೀಗೇ ಹೇಳಿದರೆ ಇನ್ನೂ 10 ವರ್ಷಗಳಲ್ಲಿ ಒಳಚರಂಡಿ ಕಾಮಗಾರಿ ಮುಗಿಸಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.
ಇತ್ತೀಚೆಗೆ ಕರೆದ ಟೆಂಡರುಗಳಲ್ಲಿ ನಿರ್ವಹಣಾ ಕಾಮಗಾರಿಯ ಟೆಂಡರು ರದ್ದುಗೊಳಿಸಿ ಮುಂದಿನ ವಾರ್ಚ್‌ನಲ್ಲಿ ಮತ್ತೊಮ್ಮೆ ವಾರ್ಷಿಕ ನಿರ್ವಹಣಾ ಟೆಂಡರ್ ಕರೆಯುವ ತೀರ್ವಾನ ಕೈಗೊಳ್ಳಲಾಯಿತು. ಉಳ್ಳಾಲ ನಗರಸಭೆಗೆ ಹೆಚ್ಚುವರಿ ಸಿಬ್ಬಂದಿ, ಸಮರ್ಪಕ ನತ್ಯಾಜ ನಿರ್ವಹಣೆ, ಸಮುದಾಯ ಭವನ ಸ್ವಸಹಾಯ ಗುಂಪಿಗೆ ಹಸ್ತಾಂತರಿಸುವ ಬಗ್ಗೆ, ಚೆಂಬುಗುಡ್ಡೆಯಲ್ಲಿ ಹೊಸ ಸ್ಮಶಾನ ನಿರ್ವಹಣೆ ಬಗ್ಗೆ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ಣಯಿಸಲಾಯಿತು.
ಉಪಾಧ್ಯಕ್ಷೆ ಸ್ವಪ್ನಾ ಹರೀಶ್, ಪ್ರಭಾರ ಪೌರಾಯುಕ್ತ ಮುತ್ತಡಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ತೇಜ ಮೂರ್ತಿ ಉಪಸ್ಥಿತರಿದ್ದರು.
ಕ್ರಿಮಿನಲ್ ಮೊಕದ್ದಮೆಗೆ ಪಟ್ಟು
ಉಳ್ಳಾಲ ನಗರಸಭೆಯ ರಸ್ತೆಬದಿ ಹೊಸತಾಗಿ ನಿರ್ಮಿಸಲಾದ ಸ್ಕೂಟರ್ ಶೆಡ್ಡಿನ ತಗಡು ಶೀಟುಗಳು ರಾತ್ರೋರಾತ್ರಿ ನಾಪತ್ತೆಯಾಗಿರುವ ವಿಚಾರವನ್ನು ಪ್ರತಿಪಕ್ಷ ಸದಸ್ಯರು ಪ್ರಸ್ತಾಪಿಸಿ, ಇವುಗಳನ್ನು ತೆಗೆದುಕೊಂಡು ಹೋಗಿರುವುದರ ಹಿಂದೆ ಅಧಿಕಾರಿಗಳ ನಿರ್ಲಕ್ಷತೆ ಇದೆ. ಈ ಬಗ್ಗೆ ಸಮಗ್ರ ವಿವರಣೆ ನೀಡುವಂತೆ ಆಗ್ರಹಿಸಿ ಅಧ್ಯಕ್ಷರಿಗೆ ಮುತ್ತಿಗೆ ಹಾಕಿದರು. ಇದು ಗಂಭೀರ ಸಮಸ್ಯೆಯಾಗಿದ್ದು, ಇದರ ಬಗ್ಗೆ ಪೊಲೀಸರಿಗೆ ದೂರು ನೀಡಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಪ್ರತಿಪಕ್ಷ ನಾಯಕ ದಿನಕರ ಉಳ್ಳಾಲ್ ಆಗ್ರಹಿಸಿದ್ದು, ಇಲಾಖಾ ತನಿಖೆ ವಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿ ಭರವಸೆ ನೀಡಿದರು.