ಗುರುಪುರ: ಗಂಜಿಮಠ ಪಂಚಾಯಿತಿ ವ್ಯಾಪ್ತಿಯ ಮೊಗರು ಗ್ರಾಮದ ಸದಸ್ಯರಾಗಿದ್ದ ಸಂದೀಪ್ ಶೆಟ್ಟಿ ನಿಧನದ ಬಳಿಕ ತೆರವಾಗಿದ್ದ ಮೊಗರು ವಾರ್ಡ್ 1 ಸ್ಥಾನಕ್ಕೆ ನ.23ರಂದು ಉಪ-ಚುನಾವಣೆ ನಡೆಯಲಿದ್ದು, ಈ ಸ್ಥಾನಕ್ಕಾಗಿ ಒಟ್ಟು 6 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಬೆಂಬಲಿತರಾಗಿ ಸುನೀಲ್ ಗಂಜಿಮಠ, ಮಾಲತಿ, ಬಿಜೆಪಿ ಬೆಂಬಲಿತರಾಗಿ ಜಯಾನಂದ ನಾಯ್ಕ, ಗಣೇಶ್, ಎಸ್‌ಡಿಪಿಐ ಬೆಂಬಲಿತರಾಗಿ ಅಜೀದ್ ಮೊಗರು, ಮೊಹಮ್ಮದ್ ಜುಬೈರ್ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಹಿಂಪಡೆಯಲು ನ.15 ಕೊನೇ ದಿನ. ಕೊನೇ ಕ್ಷಣದಲ್ಲಿ ಮೂರೂ ಪಕ್ಷಗಳ ತಲಾ ಒಬ್ಬರು ಬೆಂಬಲಿತ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿಯುವ ಸಾಧ್ಯತೆ ಇದೆ.