ಧಾರ್ಮಿಕ ಕ್ಷೇತ್ರಗಳಿಂದ ಗ್ರಾಮೋದ್ಧಾರ

Mul_Religious
Published on

ಮೂಲ್ಕಿ: ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಬ್ರಹ್ಮಕಲಶೋತ್ಸವ 2025ರ ಫೆ.12ರಿಂದ 17ರವರೆಗೆ ನಡೆಯಲಿದ್ದು, ಪೂರ್ವಭಾವಿಯಾಗಿ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದ ಮನವಿ ಪತ್ರ ಬಿಡುಗಡೆ ಸಮಾರಂಭ ಕ್ಷೇತ್ರದಲ್ಲಿ ಬುಧವಾರ ನಡೆಯಿತು.

ಕ್ಷೇತ್ರದ ಅರ್ಚಕ ಹಯಗ್ರೀವ ಪಡ್ಡಿಲ್ಲಾಯ, ರಾಜಾರಾಮ ಭಟ್ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಶಾಸಕ ಉಮಾನಾಥ ಕೋಟ್ಯಾನ್ ಮನವಿ ಪತ್ರ ಬಿಡುಗಡೆ ಮಾಡಿ ಮಾತನಾಡಿ, ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯಿಂದ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದರು.

ಕ್ಷೇತ್ರದ ಆಡಳಿತ ಮೊಕ್ತೇಸರ ಎಮ್.ಎಚ್.ಅರವಿಂದ ಪೂಂಜಾ, ಮುಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಸದಸ್ಯರಾದ ಹರ್ಷರಾಜ ಶೆಟ್ಟಿ, ಸುಭಾಷ್ ಶೆಟ್ಟಿ, ಬಪ್ಪನಾಡು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸುನೀಲ್ ಆಳ್ವ, ಮೂಲ್ಕಿ ಶ್ರೀವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಅತುಲ್ ಕುಡ್ವ, ಉದ್ಯಮಿ ಜೀವನ್ ಶೆಟ್ಟಿ, ಪಾಂಡು ಎ.ಕಾರ್ನಾಡ್, ಸುರೇಶ್ ರಾವ್, ರಂಗನಾಥ ಶೆಟ್ಟಿ, ಪ್ರವೀಣ್ ಕೋಟ್ಯಾನ್, ಕೃಷ್ಣ ಶೆಟ್ಟಿ, ಉದಯಕುಮಾರ್ ಶೆಟ್ಟಿ, ರಮೇಶ್ ಅಮೀನ್ ಕೊಕ್ಕರಕಲ್, ಯದೀಶ್ ಅಮೀನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲ್ಕಿ ವಲಯದ ಮೇಲ್ವಿಚಾರಕಿ ನಿಶ್ಮಿತಾ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರವಿಕುಮಾರ್ ಭಟ್, ಶಶೀಂದ್ರ ಸಾಲ್ಯಾನ್, ರಾಘವೇಂದ್ರ ಟಿ., ನೂತನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net