ಎಲ್ಲೆಡೆ ಕಪ್ಪು ಅಂಗಿಯನ್ನೇ ಏಕೆ ಧರಿಸುತ್ತಿದ್ದೀರಿ? 'UI' ಮಾಂತ್ರಿಕನಿಗೆ 'ಬುದ್ಧಿವಂತ' ಫ್ಯಾನ್ಸ್ ಪ್ರಶ್ನೆ

ವಿಜಯವಾಣಿ - 2024-12-06T185204.321
Published on

ಬೆಂಗಳೂರು: ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಯುಐ ಚಿತ್ರದ ವಾರ್ನರ್​ ರಿಲೀಸ್​ ಮಾಡಿದ ನಿರ್ದೇಶಕ ಹಾಗೂ ನಟ ಉಪೇಂದ್ರ, ಯುಐ (UI) ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿದ್ದ ಗೊಂದಲ ಮತ್ತು ಕುತೂಹಲವನ್ನು ಸದ್ಯ ಮತ್ತಷ್ಟು ಹೆಚ್ಚಿಸಿದ್ದಾರೆ. ಟ್ರೇಲರ್​ಗೂ ಮುನ್ನವೇ ಚಿತ್ರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರಶ್ನೆಗಳನ್ನು ಮುಂದಿಟ್ಟಿದ್ದ ಫ್ಯಾನ್ಸ್​ಗೆ ವಾರ್ನರ್​ ಮೂಲಕ ನೀವೇ ಆ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಿ ಎಂದು ತಮ್ಮ ಶೈಲಿಯಲ್ಲೇ ಉಪ್ಪೇಂದ್ರ ಉತ್ತರಿಸಿದ್ದಾರೆ. ಇದು ಕೆಲವರಿಗೆ ಖುಷಿ ನೀಡಿದರೆ, ಇನ್ನೂ ಕೆಲವರಲ್ಲಿ ಗೊಂದಲವನ್ನು ಹೆಚ್ಚು ಮಾಡಿದೆ. ಇದೆಲ್ಲದರ ಮಧ್ಯೆ ಸಿನಿಮಾ ಹೊರತುಪಡಿಸಿ ಹೊಸ ಚರ್ಚೆಯೊಂದು ಅಭಿಮಾನಿಗಳಲ್ಲಿ ಕಾಡಲಾರಂಭಿಸಿದ್ದು, ಇತ್ತೀಚೆಗೆ ನಡೆದಿರುವ ಅಷ್ಟು ಕಾರ್ಯಕ್ರಮಗಳಲ್ಲಿಯೂ ಉಪ್ಪಿ ಏಕೆ ಕಪ್ಪು ಬಣ್ಣದ ಅಂಗಿಯನ್ನೇ ಧರಿಸಿದ್ದಾರೆ? ಇದರ ಹಿಂದಿರುವ ಕಾರಣವೇನು? ಎಂಬ ಕೌತುಕವನ್ನು ಹೊರಹಾಕಿದ್ದಾರೆ.

ಈ ಹಿಂದಿನಿಂದಲೂ ಬುದ್ಧಿವಂತಿಕೆಯ ಸಿನಿಮಾ ಹಾಗೂ ಉತ್ತರಕ್ಕೆ ನಿಸ್ಸೀಮರಾಗಿರುವ ಉಪೇಂದ್ರ ಅವರ ಚಾಣಕ್ಷತನ ಎಲ್ಲರಿಗೂ ಗೊತ್ತಿದೆ. ತಮ್ಮ ಚಿತ್ರದಲ್ಲಿ ಕಥೆ ಹೇಳುವ ವಿಧಾನ ಮತ್ತು ಅದನ್ನು ಪ್ರೇಕ್ಷಕ ಪ್ರಭುಗಳಿಗೆ ಅರ್ಥ ಮಾಡಿಸುವುದರಲ್ಲಿ ಉಪ್ಪಿ ಎತ್ತಿದಕೈ. ಯಾವುದೇ ಕಾರ್ಯಕ್ರಮಗಳಿರಲಿ ಅಥವಾ ಪತ್ರಿಕಾಗೋಷ್ಠಿಯಿರಲಿ, ಅಲ್ಲಿ ಕೇಳಿಬರುವ ಪ್ರಶ್ನೆಗಳಿಗೆ ಉಪೇಂದ್ರ ಕೊಡುವ ಉತ್ತರಗಳು ಕೇಳುಗಳಿರಿಗೆ ಭಾರೀ ಅಚ್ಚರಿ ಹಾಗೂ ತಾವು ಕೇಳಿದ ಪ್ರಶ್ನೆ ಮೇಲೆಯೇ ಒಂದು ನಿಮಿಷ ಅನುಮಾನ ಬರುವಂತೆ ಮಾಡುತ್ತದೆ. ಈ ವಿಷಯಗಳಿಂದಲೇ ಹೆಚ್ಚು ಜನಪ್ರಿಯತೆ ಪಡೆದಿರುವ ಉಪೇಂದ್ರ ಅವರ ಕಟ್ಟಾ ಅಭಿಮಾನಿಗಳ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಉಪ್ಪಿ ಬುದ್ಧಿವಂತರು ಎಂದರೆ ಅವರ ಫ್ಯಾನ್ಸ್​ ಅವರಷ್ಟೇ ಬುದ್ಧಿವಂತರು ಎಂಬುದನ್ನು ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮುನ್ನೆಲೆಗೆ ತರುತ್ತಿರುತ್ತಾರೆ. ಸದ್ಯ ಈ ಪ್ರಶ್ನೆ ಕೂಡ ಅವರದ್ದೇ ಆಗಿದೆ.

ಏಪ್ರಿಲ್​ನಿಂದ ಮತ್ತು ಇತ್ತೀಚೆಗೆ ನಡೆದಿರುವ ಹಲವು ಕಾರ್ಯಕ್ರಮಗಳಲ್ಲಿ ಉಪ್ಪೇಂದ್ರ ಅವರು ಹೆಚ್ಚಾಗಿ ಕಪ್ಪು ಬಣ್ಣದ ಅಂಗಿಯನ್ನೇ ಧರಿಸುತ್ತಿದ್ದಾರೆ. ಇದನ್ನು ಬಹಳ ಸೂಕ್ಷ್ಮವಾಗಿ ಗಮನಿಸಿರುವ ಅವರ ಬುದ್ಧಿವಂತ ಅಭಿಮಾನಿಗಳು, ಕೇವಲ ಕಪ್ಪು ಬಣ್ಣದ ಮೇಲೆಯೇ ಏಕೆ ನಿಮಗೆ ಕಣ್ಣು? ಇದನ್ನೇ ಏಕೆ ಪದೇ ಪದೇ ಹಾಕುತ್ತಿದ್ದೀರಿ? ಇದರ ಹಿಂದಿರುವ ಬಲವಾದ ಕಾರಣವೇನು? ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಪಸ್ತುತ ಯುಐ ಚಿತ್ರದ ಕೆಲಸಗಳಲ್ಲಿ ಸಖತ್​ ಬಿಜಿಯಾಗಿರುವ ರಿಯಲ್ ಸ್ಟಾರ್​ಗೆ ನೆಚ್ಚಿನ ಅಭಿಮಾನಿಗಳು ಕೇಳಿರುವ ಪ್ರಶ್ನೆಗೆ ಯಾವ ಉತ್ತರ ಸಿಗಲಿದೆ ಎಂಬುದು ಸದ್ಯ ಕುತೂಹಲಕಾರಿಯಾಗಿದೆ. ಯುಐ ಮಾಂತ್ರಿಕನಿಗೆ ಫ್ಯಾನ್ಸ್​ ಕೇಳಿರುವ ಈ ಪ್ರಶ್ನೆಗೆ ಉತ್ತರ ಲಭಿಸಲಿದೆಯೇ? ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net