100 ಕೋಟಿ ಬಜೆಟ್​ನ ಸಿನಿಮಾದಲ್ಲಿ ಉಪ್ಪಿ ಪಾತ್ರ ಹೇಗಿರಲಿದೆ?

collage (5)
Published on

ಬೆಂಗಳೂರು: ರಿಯಲ್​ ಸ್ಟಾರ್ ಉಪೇಂದ್ರ 52ನೇ ಜನ್ಮದಿನದ ಪ್ರಯುಕ್ತ ಹೊಸ ಹೊಸ ಸಿನಿಮಾಗಳು ಘೋಷಣೆ ಆಗುತ್ತಿವೆ. ಜತೆಗೆ ಅವರ ಅಭಿಮಾನಿಗಳು ಬಗೆಬಗೆ ಪೋಸ್ಟರ್ ಮೂಲಕ ನೆಚ್ಚಿನ ನಟನಿಗೆ ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ. ಇದೀಗ ಇದೆಲ್ಲದಕ್ಕಿಂತ ವಿಶೇಷ ಏನೆಂದರೆ, ಮಾಸ್ಟರ್ ಪೀಸ್​ ಸಿನಿಮಾ ಖ್ಯಾತಿಯ ನಿರ್ದೇಶಕ ಮಂಜು ಮಾಂಡವ್ಯ, ಹೊಸ ಸಿನಿಮಾ ಘೋಷಣೆ ಮಾಡಿಕೊಂಡಿದ್ದು, ಉಪೇಂದ್ರ ನಾಯಕರಾಗಿ ನಟಿಸಲಿದ್ದಾರೆ.

ಈಗಾಗಲೇ ಚಿತ್ರದ ಪೋಸ್ಟರ್​ವೊಂದನ್ನು ಉಪ್ಪಿ ಜನ್ಮದಿನದ ನಿಮಿತ್ತ ಬಿಡುಗಡೆ ಮಾಡಿಕೊಂಡಿರುವ ಮಂಜು ಮಾಂಡವ್ಯ, ಪ್ಯಾನ್​ ಇಂಡಿಯಾ ಸಿನಿಮಾ ಇದಾಗಿರಲಿದೆ ಎಂಬ ಸುಳಿವನ್ನು ನೀಡಿದ್ದಾರೆ. ಅಷ್ಟೇ ಅಲ್ಲ ಬಜೆಟ್​ ವಿಚಾರವಾಗಿಯೂ ಈ ಸಿನಿಮಾ ಸದ್ಯ ಸುದ್ದಿಯಲ್ಲಿದೆ. ಬರೋಬ್ಬರಿ 100 ಕೋಟಿ ರೂ. ವೆಚ್ಚದಲ್ಲಿ ಈ ಸಿನಿಮಾ ಸಿದ್ಧವಾಗಲಿದೆಯಂತೆ.

ಈ ಹಿಂದೆ ಈ ಹಿಂದೆ ಅಣ್ಣಯ್ಯ, ಕರ್ಪೂರದ ಗೊಂಬೆ, ಏನೋ ಒಂಥರ, ಬಿಂದಾಸ್, ರನ್ನ ದಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ನಿಮಿಷಾಂಭಾ ಪ್ರೊಡಕ್ಷನ್ಸ್ ಈ ಸಿನಿಮಾಕ್ಕೂ ಬಂಡವಾಳ ಹೂಡಲಿದ್ದು, ಅಣ್ಣಯ್ಯ ಚಂದ್ರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 2021ರ ಜನವರಿಯಲ್ಲಿ ಈ ಸಿನಿಮಾ ಆರಂಭವಾಗಲಿದೆ. ಸದ್ಯ ಬಿಡುಯಾದ ಪೋಸ್ಟರ್​ನಲ್ಲಿ ಗ್ಯಾಂಗಸ್ಟರ್ ಅವತಾರದಲ್ಲಿ ಉಪೇಂದ್ರ ಕಾಣಿಸಿದಂತಿದೆ. ಮುಂದಿನ ದಿನಗಳಲ್ಲಿ ಚಿತ್ರದ ಮತ್ತಷ್ಟು ಮಾಹಿತಿಯನ್ನು ನೀಡುತ್ತಾರಂತೆ ನಿರ್ದೇಶಕ ಮಂಜು ಮಾಂಡವ್ಯ.

ಸದ್ಯ ಆರ್​. ಚಂದ್ರು ನಿರ್ದೇಶನದ ಕಬ್ಜ ಚಿತ್ರ ಸಹ ಬಹುಭಾಷೆಗಳಲ್ಲಿ ನಿರ್ಮಾಣವಾಗುತ್ತಿದ್ದು, ನಿನ್ನೆಯಷ್ಟೇ ಉಪ್ಪಿ ಜನ್ಮದಿನದ ನಿಮಿತ್ತ ನಿರ್ದೇಶಕ ಆರ್​ಜಿವಿ ಚಿತ್ರದ ಪೋಸ್ಟರ್​ವೊಂದನ್ನು ಬಿಡುಗಡೆ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net