ಸೀಮಂತಕ್ಕೆ 90 ಸಾವಿರ ರೂ. ಬೆಲೆಯ ಬಟ್ಟೆ ಧರಿಸಿದ ರಾಮ್ ಚರಣ್ ಪತ್ನಿ ಉಪಾಸನಾ!

upasana
Published on

ಹೈದರಾಬಾದ್​​: ನಟ ರಾಮ್ ಚರಣ್ ಪತ್ನಿ ಉಪಾಸನಾ ಕೋನಿಡೆಲಾ ಸೀಮಂತ ಕಾರ್ಯಕ್ರಮ ಇತ್ತೀಚೆಗಷ್ಟೆ ನಡೆದಿದ್ದು, ಅನೇಕ ಸ್ಟಾರ್​​ ನಟ, ನಟಿಗಯರು ಈ ಕಾರ್ಯಾಕ್ರಮದಲ್ಲಿ ಭಾಗಿಯಾಗಿದ್ದರು. ಅದ್ಧೂರಿಯಾಗಿ ನಡೆದ ಈ ಕಾರ್ಯಾಕ್ರಮದಲ್ಲಿ ಮುಖ್ಯವಾಗಿ ಆಕರ್ಷಕಗೊಂಡಿದ್ದು ಉಪಾಸನಾ ತೊಟ್ಟ ಬಟ್ಟೆಯಾಗಿದೆ.

ಬೇಬಿ ಶವರ್​ ಕಾರ್ಯಕ್ರಮದಲ್ಲಿ ಉಪಾಸನಾ ಧರಿಸಿದ್ದ ಉಡುಗೆ ಎಲ್ಲರ ಗಮನ ಸಳೆದಿದೆ. ಗುಲಾಬಿ ಬಣ್ಣದ ಉದ್ದನೆಯ ಫ್ರಾಕ್ ಮಾದರಿಯ ಉಡುಗೆಯನ್ನು ಉಪಾಸನಾ ಧರಿಸಿದ್ದರು. ಬಟ್ಟೆಯ ಮೇಲೆ ಗುಲಾಬಿ ಬಣ್ಣದಿಂದಲೇ ಡಿಸೈನ್​ಗಳನ್ನು ಮಾಡಲಾಗಿತ್ತು. ವಿ ನೆಕ್​ ನ ಈ ಬಟ್ಟೆ ನೋಡಲು ಸರಳವಾಗಿ ಕಂಡರು ದುಬಾರಿ ಬೆಲೆ ಬಾಳುವ ಉಡುಪಾಗಿದೆ.

ಲಂಡನ್ ಮೂಲದ ನೀಡಲ್ ಆಂಡ್ ಥ್ರೆಡ್ ಸಂಸ್ಥೆಯು ಡಿಸೈನ್ ಮಾಡಿ ಮಾರಾಟ ಮಾಡಿರುವ ಈ ಉಡುಗೆಯ ಬೆಲೆ ಭಾರತದಲ್ಲಿ 90 ಸಾವಿರ ರೂಪಾಯಿಗಳೂ ಹೆಚ್ಚು. ಈ ಉಡುಗೆಯ ಬಹುತೇಕ ಡಿಸೈನರ್ ಕೈಯಿಂದಲೇ ಮಾಡಿರುವುದು ವಿಶೇಷ. ಅಲ್ಲದೆ ಬಹಳ ಕಂಪರ್ಟ್ ಫೀಲ್ ಕೊಡುವ ಜೊತೆಗೆ ಧರಿಸಿದವರಿಗೆ ರಿಚ್​ನೆಸ್ ಫೀಲ್ ಕೊಡುವ ಉಡುಗೆ ಇದಾಗಿದೆ. ಹಾಗಾಗಿ ಈ ಉಡುಪಿನ ಬೆಲೆ ಹೆಚ್ಚು.

ಮದುವೆಯಾದ ಹತ್ತು ವರ್ಷಗಳ ಬಳಿಕ ಮಗುವನ್ನು ಸ್ವಾಗತಿಸಲು ಈ ದಂಪತಿ ಸಜ್ಜಾಗಿದ್ದಾರೆ. ಉಪಾಸನಾ ಸೀಮಂತ ಕಾರ್ಯಕ್ರಮವನ್ನು ಬಹು ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಮೆಗಾ ಕುಟುಂಬ ಸದಸ್ಯರೆಲ್ಲರೂ, ಅಲ್ಲು ಅರ್ಜುನ್, ಸಾನಿಯಾ ಮಿರ್ಜಾ ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net