ನಾಲಿಗೆ, ಜನನಾಂಗ, ಗುದದ್ವಾರ ಕತ್ತರಿಸಿದ ಸ್ಥಿತಿಯಲ್ಲಿ ಆರು ಹಸುಗಳ ಶವ ಪತ್ತೆ!

Cows
Published on: 

ಅಮೆರಿಕಾ: ಟೆಕ್ಸಾಸ್‌ನ ಹೆದ್ದಾರಿಯೊಂದರಲ್ಲಿ ನಿಗೂಢವಾಗಿ ಆರು ಹಸುಗಳು ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ. 6 ಹಸುಗ ನಾಲಿಗೆ ಕತ್ತರಿಸಿದ ಸ್ಥಿತಿಯಲ್ಲಿ ಕಂಡುಬಂದಿವೆ.

ಪ್ರಾಣಿಗಳ ನಾಲಿಗೆಯನ್ನು ಶಸ್ತ್ರಚಿಕಿತ್ಸೆಯ ಮೂಲಕವಾಗಿ ತೆಗೆದುಹಾಕಲಾಗಿದೆ. "ಯಾವುದೇ ರಕ್ತ ಸೋರಿಕೆ ಇಲ್ಲ" ಎಂದು ತಿಳಿದು ಬಂದಿದೆ. ಎರಡು ಹಸುಗಳ ಗುದದ್ವಾರ ಮತ್ತು ಬಾಹ್ಯ ಜನನಾಂಗವನ್ನು ವೃತ್ತಾಕಾರದಲ್ಲಿ ಕತ್ತರಿಸಿ ತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಐದು ಹಸುಗಳಲ್ಲಿ ಎರಡರಲ್ಲಿ, ಗುದದ್ವಾರ ಮತ್ತು ಬಾಹ್ಯ ಜನನಾಂಗವನ್ನು ತೆಗೆದುಹಾಕಲು ವೃತ್ತಾಕಾರದ ಕಟ್ ಮಾಡಲಾಗಿದೆ. ಒಂದು ಬದಿಯಲ್ಲಿ ಹಸುವಿನ ಬಾಯಿಯ ಸುತ್ತಲಿನ ಚರ್ಮವನ್ನು ತೆಗೆದುಹಾಕಲಾಗಿದೆ. ಯಾವುದೇ ರಕ್ತ ಸೋರಿಕೆಯಾಗಿಲ್ಲ. ಆರು ಹಸುಗಳಲ್ಲಿ ಯಾವುದೇ ಸಾವಿಗೆ ಅಧಿಕೃತ ಕಾರಣ ತಿಳಿದು ಬಂದಿಲ್ಲ. ದನಗಳ ಸಾವು ಮತ್ತು ವಿರೂಪತೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

6 ಹಸುಗಳ ಮೃತ ದೇಹ ಪತ್ತೆಯಾಗಿರುವ ಪ್ರದೇಶದಲ್ಲಿ ಯಾವುದೇ ಹೆಜ್ಜೆಗುರುತುಗಳು ಅಥವಾ ಟೈರ್ ಟ್ರ್ಯಾಕ್‌ಗಳನ್ನು ಗುರುತಿಸಲಾಗಿಲ್ಲ ಎಂದು ಆಧಿಕಾರಿಗಳು ಹೇಳಿದ್ದಾರೆ.