ಮೊಮ್ಮಗಳನ್ನು ಅಪಹರಿಸಿ ಮಗಳ ಬಳಿ 60 ಲಕ್ಷ ರೂ ಹಣಕ್ಕೆ ಬೇಡಿಕೆ ಇಟ್ಟ ವೃದ್ಧ!; ಮುಂದೆನಾಯ್ತು..?

Money
Published on

ಚೀನಾ: ಅಜ್ಜ ತನ್ನ ಸ್ವಂತ ಮೊಮ್ಮಗಳನ್ನು ಅಪಹರಿಸಿ ತನ್ನ ಮಗಳ ಬಳಿಯೇ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ.

ಚೀನಾದ ಅತಿದೊಡ್ಡ ನಗರವಾದ ಶಾಂಘೈನಲ್ಲಿನ ನಿವಾಸಿ 65 ವರ್ಷ ವಯಸ್ಸಿನ ಯುವಾನ್ ಎನ್ನುವ ವೃದ್ಧ ತನ್ನ ನಾಲ್ಕು ವರ್ಷದ ಮೊಮ್ಮಗಳನ್ನು ಶಾಲೆಯಿಂದ ಅಪಹರಿಸಿದ್ದಾರೆ. ನಂತರ ಅಪಹರಣಕಾರನಂತೆ ವರ್ತಿಸುತ್ತಾ, ತಮ್ಮ ಸ್ವಂತ ಮಗಳ ಬಳಿಯೇ ಹಣಕ್ಕೆ ಬೇಡಿಕೆ ಇಡುತ್ತಾ ಬ್ಲ್ಯಾಕ್​​ಮೇಲ್​​ ಮಾಡಿದ್ದಾರೆ. "ನೀವು ನನಗೆ ಇನ್ನು ಮೂರು ದಿನಗಳಲ್ಲಿ  60 ಲಕ್ಷ ರೂಪಾಯಿ ನೀಡದೆ ಹೋದರೆ ನಿಮ್ಮ ಮಗಳನ್ನು ನೀವು ಮತ್ತೆ ನೋಡುವುದಿಲ್ಲ." ಎಂದು ಬೆದರಿಕೆ ಹಾಕಿದ್ದಾರೆ. ಬಳಿಕ ಪೊಲೀಸರು ವೃದ್ಧನನ್ನು ಪತ್ತೆ ಮಾಡಿ ಜೈಲಿಗಟ್ಟಿದ್ದಾರೆ.

ವ್ಯಕ್ತಿ ಜೂಜಾಡಿ ಲಕ್ಷಾಂತರ ರೂ ಕಳೆದುಕೊಂಡಿದ್ದ, ಸಾಲದ ಸುಳಿಯಲ್ಲಿ ಸಿಲುಕಿದ್ದ ಅವರಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮೊಮ್ಮಗಳನ್ನು ಅಪಹರಿಸಿದ್ದರು ಎಂದು ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ.

ನಾನು ಈ ಸ್ಥಿತಿಗೆ ಬರಲು ಮಗಳೇ ಕಾರಣ, ಆಕೆಗೆ ನಾನು ಚೆನ್ನಾಗಿ ಬದುಕುವುದು ಇಷ್ಟವಿಲ್ಲ, ನನ್ನ ಸಾವನ್ನೇ ಬಯಸುತ್ತಿದ್ದಾಳೆ ಎಂದು ವೃದ್ಧ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net