ಬೈಕ್​​ಗೆ ಲಾರಿ ಡಿಕ್ಕಿ; ತಲೆ ಮೇಲೆ ಹರಿದ ಲಾರಿ.. ಬೈಕ್​​ ಸವಾರ ಮೃತ್ಯು!

bng accident
Published on

ಬೆಂಗಳೂರು: ಬೈಕ್​​ಗೆ ಲಾರಿ ಡಿಕ್ಕಿಯಾಗಿ ಅಪಘಾತದಲ್ಲಿ ಸವಾರ ಸಾವನ್ನಪ್ಪಿರುವ ಘಟನೆ ಬ್ಯಾಟರಾಯನಪುರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಫೀಕ್ (24) ಮೃತ ಯುವಕ. ನಾಯಂಡಹಳ್ಳಿ ಜಂಕ್ಷನ್ ಬಳಿ ಬೆಳಗ್ಗೆ 9.45ಕ್ಕೆ ನಡೆದಿರೋ ಅಪಘಾತ ಇದಾಗಿದ್ದು, ರಫೀಕ್ ತಲೆಗೆ ಗಂಭೀರ ಪೆಟ್ಟಾಗಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.

ರಫೀಕ್ ಬೆಳಗ್ಗೆ ಸ್ನೇಹಿತನನ್ನ ಕೂರಿಸಿಕೊಂಡು ಆರ್ ಆರ್ ನಗರ ಕಡೆ ಹೊರಟಿದ್ದನು. ಈ ವೇಳೆ ಹಿಂಬದಿಯಿಂದ‌ ಲಾರಿ ಡಿಕ್ಕಿ ಹೊಡೆದು  ರಫೀಕ್ ತಲೆ ಮೇಲೆ ಲಾರಿ ಹರಿದಿದೆ. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನೆಯಲ್ಲಿ ತಲೆಗೆ ಗಂಭೀರ ಗಾಯವಾಗಿ ರಫೀಕ್ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಭೇಟಿ ಪರಿಶೀಲನೆ ನಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸದ್ಯ ಆರೋಪಿ ಪತ್ತೆಗೆ ಬಲೆ ಬಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net