ಫತೇಪುರ್ (ಉತ್ತರ ಪ್ರದೇಶ): ಹಾವಿನ ದ್ವೇಷ 12 ವರುಷ ಎಂದು ಹೇಳಲಾಗುತ್ತದೆ. ಹಾಗಾದರೆ ಈ ಮಾತನ್ನು ನಂಬಬೇಕೋ ಬಿಡಬೇಕೋ ಎಂಬುದು ನಿಮಗೆ ಬಿಟ್ಟಿದ್ದು. ಆದರೆ ಹಾವುಗಳು ಸೇಡು ತೀರಿಸಿಕೊಳ್ಳುತ್ತವೆ ಎನ್ನುತ್ತಾರೆ ಜನರು. ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದು ಈ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಉತ್ತರ ಪ್ರದೇಶದ ವಿಕಾಸ್ ದುಬೆ(24) ಇತ್ತೀಚೆಗೆ 35 ದಿನಗಳಲ್ಲಿ 6 ಬಾರಿ ಹಾವು ಕಡಿತಕ್ಕೆ ಒಳಗಾಗಿದ್ದಾನೆ. ಕಳೆದ ಗುರುವಾರ ಮತ್ತೊಮ್ಮೆ ಹಾವು ಕಚ್ಚಿದೆ. ಹಾವು ಎಲ್ಲಿಗೆ ಹೋದರೂ ಅಟ್ಟಿಸಿಕೊಂಡು ಬರುತ್ತಿರುವುದರಿಂದ ಆತನ ಕುಟುಂಬದವರು ತೀವ್ರ ಆತಂಕದಲ್ಲಿದ್ದಾರೆ.
ಇದನ್ನೂ ಓದಿ: ‘ಕಾಲ್ಪನಿಕ ದೃಶ್ಯ ಕಾವ್ಯ’ ಅನಂತ್ ಅಂಬಾನಿ – ರಾಧಿಕಾ ಮದುವೆ: ಭಾವೋದ್ವೇಗಕ್ಕೆ ಒಳಗಾದ ವಧು!
ಹಾವು 9ನೇ ಬಾರಿ ಕಚ್ಚಿದ ನಂತರ ಸಾಯುತ್ತೇನೆ ಎಂದು ಹಾವು ಕನಸಲ್ಲಿ ಹೇಳಿದೆ ಎಂದು ವಿಕಾಸ್ ಹೇಳುವುದು ಚರ್ಚೆಯ ವಿಷಯವಾಗಿದೆ. 7 ಬಾರಿ ಹಾವು ಕಚ್ಚಿ ಗಾಯಗೊಂಡಿರುವ ವಿಕಾಸ್ ಧುಬೆ ಸದ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆ ಕುರಿತು ಮಾತನಾಡಿದ ಮುಖ್ಯ ವೈದ್ಯಾಧಿಕಾರಿ ರಾಜೀವ್ ನಾಯಂಗಿರಿ, ಒಬ್ಬನೇ ವ್ಯಕ್ತಿಗೆ ಹಾವು 7 ಬಾರಿ ಕಚ್ಚಿರುವುದು ಅಚ್ಚರಿ ಮೂಡಿಸಿದೆ. ಘಟನೆಯ ತನಿಖೆಗೆ ಮೂವರು ವೈದ್ಯರ ತಂಡವನ್ನು ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದರು.
ಪ್ರತಿ ಬಾರಿ ಹಾವು ಕಚ್ಚಿದ ದಿನದಲ್ಲಿ ರೋಗಿ ಚೇತರಿಸಿಕೊಳ್ಳುತ್ತಿರುವುದು ಅಚ್ಚರಿ ಮೂಡಿಸಿದೆ. ಆದರೆ ಹಾವುಗಳು ಪ್ರತೀಕಾರ ತೀರಿಸಿಕೊಳ್ಳುತ್ತವೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಅವು ಮನುಷ್ಯರಿಗೆ ಹೆದರುತ್ತವೆ. ಬೇರೆ ಊರಿಗೆ ಹೋದರೂ ಹಾವು ಅಲ್ಲಿಗೂ ಬಂದು ಈತನನ್ನು ಕಚ್ಚಿರುವುದು ಅಚ್ಚರಿ ಮೂಡಿಸಿದೆ. ಹಾವುಗಳು ವಿಕಾಸ್ ದುಬೆಯನ್ನು ಏಕೆ ಗುರಿಯಾಗಿಸಿಕೊಂಡಿವೆ ಎಂಬುದು ಅರ್ಥವಾಗುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಪುರಿ ಜಗನ್ನಾಥ ರತ್ನ ಭಂಡಾರ ರಕ್ಷಣೆಗೆ ಸರ್ಪಗಳು? ಕೊಠಡಿ ತೆರೆಯಲು ಅಧಿಕಾರಿಗಳಿಗೆ ಹಿಂಜರಿಕೆ!