

ಭುವನೇಶ್ವರ: ಒಡಿಶಾದ ಪುರಿ ಶ್ರೀ ಕ್ಷೇತ್ರದಲ್ಲಿರುವ ಜಗನ್ನಾಥನ ರತ್ನ ಭಂಡಾರದ ರಹಸ್ಯ ಕೊಠಡಿಯನ್ನು ತೆರೆಯಲು ಅಧಿಕಾರಿಗಳು ಸಿದ್ಧರಾಗಿದ್ದಾರೆ. ಭಾನುವಾರ ಆ ರಹಸ್ಯ ಕೊಠಡಿಯಲ್ಲಿರುವ ನಿಧಿಯನ್ನು ಹೊರ ಜಗತ್ತಿಗೆ ತೋರಿಸಲಾಗುತ್ತದೆ. 46 ವರ್ಷಗಳ ನಂತರ ಕೊಠಡಿ ತೆರೆಯಲು ಮುಂದಾಗಿರುವ ಕಾರಣ ಅದರಲ್ಲಿ ಕಿಂಗ್ ಕೋಬ್ರಾದಂತಹ ವಿಷಕಾರಿ ಹಾವುಗಳು ಇರುವ ಸಾಧ್ಯತೆ ಇದೆ ಎಂದು ಭಾವಿಸಿ ಅಧಿಕಾರಿಗಳು ತೆರೆಯಲು ಹಿಂದೇಟು ಹಾಕುತ್ತಿದ್ದಾರೆ.
ನಾಗಬಂಧದ ಜೊತೆಗೆ ಕೊಠಡಿ ತೆರೆದು ತುಂಬಾವರ್ಷಗಳಾ್ಉರುವುದರಿಂದ ಹಾವುಗಳು ಇರುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿಯೇ ಹಿಡಿಯುವಲ್ಲಿ ಅನುಭವ ಇರುವವರನ್ನು ಕರೆಸಲಾಗುತ್ತಿದೆ. ಒಂದು ವೇಳೆ ಯಾರಿಗಾದರೂ ಹಾವು ಕಚ್ಚಿದರೆ, ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಆದರೆ ಬರ್ಮಾದ ಬೆಟ್ಟದ ಹಾವುಗಳು ಇಲ್ಲಿನ ಸಂಪತ್ತನ್ನು ಕಾಪಾಡುವ ಕಥೆಗಳನ್ನು ಸ್ಥಳೀಯರು ಹೇಳುತ್ತಾರೆ. ಪುರಿಯಲ್ಲಿರುವ ರತ್ನ ಭಂಡಾಗಾರಂನಲ್ಲಿರುವ ಜಗನ್ನಾಥ ಮತ್ತು ಇತರ ದೇವತೆಗಳಿಗೆ ಸೇರಿದ ಅಮೂಲ್ಯವಾದ ಚಿನ್ನದ ಆಭರಣಗಳನ್ನು ಸರ್ಪಗಳು ಕಾಪಾಡುತ್ತವೆ ಎಂದು ಪುರಾಣಗಳು ಹೇಳುತ್ತವೆ.
2018 ರಲ್ಲಿ ಒಡಿಶಾ ಹೈಕೋರ್ಟ್ನ ಆದೇಶದ ಮೇರೆಗೆ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ತಂಡವು ರತ್ನ ಭಂಡಾರವನ್ನು ಪ್ರವೇಶಿಸಲು ಪ್ರಯತ್ನಿಸಿತು. ಆದರೆ ಅವರು ಹಾವುಗಳ ವದಂತಿಯಿಂದ ಹಿಂದೆ ಸರಿದರು. ದೇಗುಲ ಪುರಾತನವಾದ್ದರಿಂದ ಸಣ್ಣ ರಂಧ್ರಗಳ ಮೂಲಕ ಹಾವುಗಳು ರತ್ನ ಭಂಡಾರ ಪ್ರವೇಶಿಸಿರುವ ಸಾಧ್ಯತೆ ಇದೆ ಎನ್ನುತ್ತಾರೆ ಸೇವಕ ಹರೇಕೃಷ್ಣ ಮಹಾಪಾತ್ರ.
ಜಗನ್ನಾಥ ಹೆರಿಟೇಜ್ ಕಾರಿಡಾರ್ ಯೋಜನೆ ಜಾರಿಯಲ್ಲಿದ್ದಾಗ ದೇವಾಲಯದ ಆಸುಪಾಸಿನಲ್ಲಿ ಹಾವುಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ಅಭಿಪ್ರಾಯಗಳು ಬಲಗೊಂಡವು.