

ಪಾಟ್ನಾ: ಉತ್ತರ ಭಾರತದಲ್ಲಿ ಭಾರಿ ಮಳೆಯಾಗುತ್ತಿದೆ. ಬಿಹಾರ ಒಂದರಲ್ಲೇ ಸಿಡಿಲು ಬಡಿದು 25 ಮಂದಿ ಸಾವನ್ನಪ್ಪಿದ್ದು, 39 ಮಂದಿ ಗಾಯಗೊಂಡಿದ್ದಾರೆ.
ಗುಡುಗು ಮತ್ತು ಸಿಡಿಲಿನಿಂದ ಕೂಡಿದ ಭಾರಿ ಮಳೆ ಮುಂದುವರಿದಿದ್ದು, ಜನರಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಮನೆಗಳಲ್ಲಿಯೇ ಇರುವಂತೆ ಸಂತ್ರಸ್ತ ಕುಟುಂಬಗಳಿಗೆ ತಲಾ 4 ಲಕ್ಷ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸಿಎಂ ನಿತೀಶ್ ಕುಮಾರ್ ಸೂಚಿಸಿದ್ದಾರೆ.
25 ಸಾವುಗಳಲ್ಲಿ, ಮಧುಬನಿಯಲ್ಲಿ 5, ಔರಂಗಾಬಾದ್‌ನಲ್ಲಿ 4, ಸುಪಾಲ್‌ನಲ್ಲಿ 3, ನಳಂದಾದಲ್ಲಿ 3, ಲಖಿಸಾರೈ, ಪಾಟ್ನಾದಲ್ಲಿ ಇಬ್ಬರು, ಬೇಗುಸರೈ, ಜಮುಯಿ, ಗೋಪಾಲ್‌ಗಂಜ್, ರೋಹ್ತಾಸ್, ಸಮಸ್ತಿಪುರ್ ಮತ್ತು ಪುರ್ನಿಯಾದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಬಿಹಾರ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ ಜುಲೈ ತಿಂಗಳೊಂದರಲ್ಲೇ ಸಿಡಿಲು ಬಡಿದು 50 ಮಂದಿ ಸಾವನ್ನಪ್ಪಿದ್ದಾರೆ.
ಶುಕ್ರವಾರ(ಜು.12) ಪಾಟ್ನಾ ಸೇರಿದಂತೆ ಹಲವೆಡೆ ಗುಡುಗು, ಮಿಂಚು ಸಹಿತ ಸಾಧಾರಣದಿಂದ ಭಾರಿ ಮಳೆಯಾಗಿದೆ. ತರಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 22 ವಿದ್ಯಾರ್ಥಿಗಳಿದ್ದ ಶಾಲಾ ಕೊಠಡಿಗೆ ಸಿಡಿಲು ಬಡಿದಿದೆ. ಈ ಘಟನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅವರನ್ನು ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಿಶನ್‌ಗಂಜ್ ಜಿಲ್ಲೆಯ ಬಹದ್ದೂರ್‌ಗಂಜ್ ಬ್ಲಾಕ್‌ನಲ್ಲಿ ಗುರುವಾರ ಅತಿ ಹೆಚ್ಚು ಅಂದರೆ 112.2 ಮಿಮೀ ಮಳೆ ದಾಖಲಾಗಿದೆ. ಪಾಟ್ನಾದಲ್ಲಿ 52.8 ಮಿಮೀ, ತ್ರಿವೇಣಿ ಬ್ಲಾಕ್‌ನಲ್ಲಿ 102.0 ಮಿಮೀ, ಗೌನಾಹದಲ್ಲಿ 55.4 ಮಿಮೀ, ಪಶ್ಚಿಮ ಚಂಪಾರಣ್ ಜಿಲ್ಲೆಯ ಲೌರಿಯಾದಲ್ಲಿ 42.6 ಮಿಮೀ, ಬೇಗುಸರಾಯ್‌ನ ಸಾಹೇಬ್‌ಪುರ ಕಮಾಲ್‌ನಲ್ಲಿ 76.4 ಮಿಮೀ, ರೋಹ್ತಾಸ್‌ನ ನರ್ಪತ್‌ಗಂಜ್‌ನಲ್ಲಿ 60.2 ಮಿಮೀ, ರೊಹ್ತಾಸ್‌ನಲ್ಲಿ 43.2 ಮಿಮೀ ಮಳೆಯಾಗಿದೆ 42.8 ಮಿ.ಮೀ ಮಳೆ ದಾಖಲಾಗಿದೆ.