'ಅದರ ಬಗ್ಗೆ ನನಗೆ ಅರಿವಿಲ್ಲ' : ಮಾಜಿ ವೇಗಿ ಡೇಲ್ ಸ್ಟೇಯ್ನ್ ಹೀಗೆಂದಿದ್ದೇಕೆ?

cricket
Published on

ಕೇಪ್ ಟೌನ್: ಮಾಜಿ ವೇಗಿ, ದಕ್ಷಿಣ ಆಫ್ರಿಕಾದ ಡೇಲ್ ಸ್ಟೇಯ್ನ್ ಬೌಲಿಂಗ್ ನಲ್ಲಿ ಬೆಂಕಿಯಂಥ ಎಸೆತಗಳಿಂದ ಪ್ರಸಿದ್ಧಿಪಡೆದವರು. ಬ್ಯಾಟ್ಸ್‌ಮನ್‌ಗಳಿಗೆ ಬೆವರಿಳಿಸುತ್ತಿದ್ದ ಈ ಬೌಲರ್ ಅನ್ನು ಕ್ರಿಕೆಟ್ ಜಗತ್ತು ಸ್ಟೈನ್ ಗನ್ ಎಂದೇ ಕರೆಯುತ್ತಿತ್ತು. ಆದರೆ ಅವರು ಇತ್ತೀಚೆಗೆ ನೀಡಿರುವ ಹೇಳಿಕೆ ಕ್ರಿಕೆಟ್​ ಪ್ರೇಮಿಗಳನ್ನು ಅಚ್ಚರಿಗೆ ದೂಡಿದೆ.

ಭಯಂಕರ ಬೌನ್ಸರ್‌ಗಳು, ಭಯಾನಕ ವೇಗದಿಂದ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಅತ್ಯಂತ ಅಪಾಯಕಾರಿ ಬೌಲರ್ ಎಂದು ಹೆಸರಾಗಿರುವ ಸ್ಟೇಯ್ನ್ ಇತ್ತೀಚೆಗೆ ಪಿಚ್​ ಬಗ್ಗೆ ಊಹಿಸುವುದರಲ್ಲಿ ನಾನು ಅತ್ಯಂತ ಕೆಟ್ಟ ವ್ಯಕ್ತಿ ಎಂದು ಆಘಾತಕಾರಿ ಹೇಳಿಕೆ ನೀಡಿದ್ದಾರೆ.

ಪಿಚ್ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಹೇಗೆ ಊಹಿಸಬೇಕೆಂದು ನನಗೆ ತಿಳಿದಿಲ್ಲ. ಪಿಚ್ ಸ್ಟಡಿ ಮಾಡಲು ನನಗೆ ಗೊತ್ತೇ ಇಲ್ಲ. ಪಿಚ್ ಸ್ವಬಾವ ಊಹಿಸಲು ಬಂದಾಗ ನಾನು ಕೆಟ್ಟ ವ್ಯಕ್ತಿಯಾಗಿದ್ದೇನೆ. ಅದು ಹೇಗೆ ಕಾಣುತ್ತದೆ ಮತ್ತು ಹೇಗೆ ವರ್ತಿಸುತ್ತದೆ ಎನ್ನುವುದಕ್ಕಿಂತ ಹೆಚ್ಚಾಗಿ ಚೆಂಡನ್ನು ಎಲ್ಲಿ ಹೊಡೆಯಬೇಕು ಎಂಬುದರ ಮೇಲೆ ಮಾತ್ರ ಗಮನ ಹರಿಸುತ್ತೇನೆ ಎಂದು ಸ್ಟೇಯ್ನ್ ಬಹಿರಂಗಪಡಿಸಿದರು.

ಅವರ ಈ ಮಾತುಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನಿಜವಾದ ಪಿಚ್‌ನತ್ತ ಗಮನ ಹರಿಸದೆ ನೀವು ಹಾಗೆ ಬೌಲಿಂಗ್ ಮಾಡಿದ್ದೀರಾ? ಎಂದು ನೆಟ್ಟಿಗರು, ಕ್ರಿಕೆಟ್​ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ಪಿಚ್ ಬಗ್ಗೆ ಉತ್ತಮ ತಿಳುವಳಿಕೆ ಇದ್ದಿದ್ದರೆ ಬ್ಯಾಟ್ಸ್ ಮನ್ ಗಳು ಇನ್ನೂ ಚೆನ್ನಾಗಿ ಆಡುತ್ತಿದ್ದರು. ನಿಮಗೆ ಆ ಬಗ್ಗೆ ತಿಳಿವಳಿಕೆ ಕಡಿಮೆ ಇದ್ದಿದ್ದೇ ಒಳ್ಳೇಯದಾಯಿತು ಎಂದು ಇನ್ನೂ ಕೆಲವರು ಕಾಮೆಂಟ್​ ಮಾಡುತ್ತಿದ್ದಾರೆ.

ಪಿಚ್​ ನೋಡದೆ ಸ್ಟೇಯ್ನ್ ಅಂತರಾಷ್ಟ್ರೀಯ ಕ್ರಿಕೆಟ್‌ನ ಅತ್ಯಂತ ಅಪಾಯಕಾರಿ ಬೌಲರ್‌ಗಳಲ್ಲಿ ಒಬ್ಬರಾಗಿದ್ದು ಹೇಗೆ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.

ಸ್ಟೇಯ್ನ್ ತಮ್ಮ ವೃತ್ತಿಜೀವನದಲ್ಲಿ 93 ಟೆಸ್ಟ್‌ಗಳಲ್ಲಿ 439 ವಿಕೆಟ್‌ಗಳು, 125 ಓಡಿಐಗಳಲ್ಲಿ 196 ವಿಕೆಟ್‌ಗಳು ಮತ್ತು 47 ಟಿ20 ಗಳಲ್ಲಿ 64 ವಿಕೆಟ್‌ಗಳನ್ನು ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net