'ಕಾಲ್ಪನಿಕ ದೃಶ್ಯ ಕಾವ್ಯ' ಅನಂತ್ ಅಂಬಾನಿ - ರಾಧಿಕಾ ಮದುವೆ: ಭಾವೋದ್ವೇಗಕ್ಕೆ ಒಳಗಾದ ವಧು!

radhika merchant
Published on

ಮುಂಬೈ: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಸದ್ಯ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ಚರ್ಚೆಯ ವಿಷಯವಾಗಿದೆ. ಶುಕ್ರವಾರ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅನೇಕ ಸೆಲೆಬ್ರಿಟಿಗಳ ಸಮ್ಮುಖ ಸತಿಪತಿಯಾದರು.

ರಾಧಿಕಾ ಕುಟುಂಬದ ಸದಸ್ಯರು ಮತ್ತು ಬಂಧುಮಿತ್ರರೊಂದಿಗೆ ವೇದಿಕೆಗೆ ಬರುತ್ತಿದ್ದಂತೆ ಎಲ್ಲರ ಮುಖದಲ್ಲಿ ಸಂತಸ ಮನೆ ಮಾಡಿತು. ವರ ಅನಂತ್ ತಂದೆ ಮುಖೇಶ್ ಅಂಬಾನಿ ಮತ್ತು ಚಿಕ್ಕಪ್ಪ ಅನಿಲ್ ಅಂಬಾನಿ ಅವರೊಂದಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು.

ರಾಧಿಕಾ ತನ್ನ ತಂದೆ ವೀರೇನ್ ಮರ್ಚೆಂಟ್ ಜೊತೆ ಹಜಾರದಲ್ಲಿ ನಡೆದಾಡುತ್ತಿರುವ ವೈರಲ್ ವಿಡಿಯೋ ಕೂಡ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ವೈರಲ್ ವೀಡಿಯೊದಲ್ಲಿ, ರಾಧಿಕಾ ಭಾವೋದ್ವೇಗಕ್ಕೆ ಒಳಗಾಗಿದ್ದು, ಆಕೆಯ ಕುಟುಂಬ ಮತ್ತು ಸ್ನೇಹಿತರು ಮಂಟಪಕ್ಕೆ ಪ್ರವೇಶಿಸಿದ ನಂತರ ಮುಖದಲ್ಲಿ ನಗೆ ಬೀರುತ್ತಾರೆ. ರಾಧಿಕಾ ಎಂಟ್ರಿ ಕೊಟ್ಟ ತಕ್ಷಣ ಗಾಯಕಿ ಶ್ರೇಯಾ ಘೋಷಾಲ್ ಹಾಡುಗಳನ್ನು ಹಾಡುತ್ತಾರೆ.

ಇನ್ನು ಅತಿಥಿಗಳನ್ನು ಉದ್ದೇಶಿಸಿ ಮಾತನಾಡಿದ ಮುಖೇಶ್ ಅಂಬಾನಿ, ನವ ದಂಪತಿಗೆ ಎಲ್ಲರ ಹಾರೈಕೆ ಇರಲಿ ಎಂದರು. ಸ್ಟೈಲಿಸ್ಟ್ ರಿಯಾ ಕಪೂರ್ ಅವರು ರಾಧಿಕಾ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಾಕಿದ್ದರು. ಇದರಲ್ಲಿ ವಧು ಪ್ರಸಿದ್ಧ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ವಿನ್ಯಾಸಗೊಳಿಸಿದ ಬೀಜ್ ಲೆಹೆಂಗಾದಲ್ಲಿ ಅದ್ಭುತವಾಗಿ ಕಾಣುತ್ತಿದ್ದರು.

ಪೋಸ್ಟ್‌ನಲ್ಲಿ, "ಒಂದು ಕಾಲ್ಪನಿಕ ಕಥೆ ಜೀವಂತವಾಗಿದೆ ಎಂದು ಬರೆದಿದ್ದಾರೆ. ಕಿಮ್ ಕಾರ್ಡಶಿಯಾನ್, ಮೈಕ್ ಟೈಸನ್, ಜಾನ್ ಸೀನಾ ಮತ್ತಿತರರ ಸೆಲಬ್ರಿಟಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net