ಉದಾತ್ತ ಚಿಂತನೆಯ ಮನಸ್ಸು ಅವಶ್ಯ

rajatha
ಬೈಂದೂರು ಸುರಭಿಯ ಬೆಳ್ಳಿಹಬ್ಬದ ರಜತಯಾನ ಸಮಾರಂಭವನ್ನು ಉಡುಪಿ ಜಿಲ್ಲಾ ಕಸಾಪ ಪೂರ್ವಾಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಉದ್ಘಾಟಿಸಿದರು
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಮರೆಯುವ, ಮೆರೆಯುವ ಇಂದಿನ ಕಾಲಘಟ್ಟದಲ್ಲಿ ಉದಾತ್ತವಾಗಿ ಚಿಂತನೆ ಮಾಡುವ ಮನಸ್ಸುಗಳು ಬೇಕಾಗಿವೆ ಎಂದು ಸಾಹಿತಿ ಡಾ.ಜಯಪ್ರಕಾಶ್ ಮಾವಿನಕುಳಿ ಹೇಳಿದರು.

ಶಾರದಾ ವೇದಿಕೆಯಲ್ಲಿ ಸುರಭಿ ಸಂಸ್ಥೆ ಬೆಳ್ಳಿಹಬ್ಬದ ರಜತ ಲಾಂಛನ ಅನಾವರಣಗೊಳಿಸಿ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪೂರ್ವಾಧ್ಯಕ್ಷ ಉಪ್ಪುಂದ ಚಂದ್ರಶೇಖರ್ ಹೊಳ್ಳ ಉದ್ಘಾಟಿಸಿದರು. ಸುರಭಿ ಅಧ್ಯಕ್ಷ ಆನಂದ ಮದ್ದೋಡಿ ಅಧ್ಯಕ್ಷತೆ ವಹಿಸಿದ್ದರು. ಸುರಭಿ ರಜತಯಾನ ಲಾಂಛನ ರಚಿಸಿದ ಕಲಾವಿದ ಸುರೇಶ್ ಹುದಾರ್, ಡಿಜಿಟಲ್ ಆರ್ಟ್ ಮಾಡಿದ ಸಮಷ್ಟಿ ಮೀಡಿಯಾ ಸಂಸ್ಥೆ ಪ್ರತಿನಿಧಿಯನ್ನು ಗೌರವಿಸಲಾಯಿತು. ನೂತನವಾಗಿ ಸದಸ್ಯರು ಸೇರ್ಪಡೆಗೊಂಡರು.

ಉಪನ್ಯಾಸಕ ಕೋಟ ಸುಜಯೀಂದ್ರ ಹಂದೆ, ಕಾರ್ಕಳ ರಂಗ ಸಂಸ್ಕೃತಿ ಅಧ್ಯಕ್ಷ ನಿತ್ಯಾನಂದ ಪೈ, ಸುರಭಿ ವ್ಯವಸ್ಥಾಪಕ ಕೃಷ್ಣಮೂರ್ತಿ ಉಡುಪ, ನಿರ್ದೇಶಕ ಗಣಪತಿ ಹೋಬಳಿದಾರ್ ಇದ್ದರು. ಸುರಭಿ ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಉಪ್ಪುಂದ ಸ್ವಾಗತಿಸಿದರು. ಸಂಸ್ಥೆ ನಿರ್ದೇಶಕ ಸುಧಾಕರ್ ಪಿ. ಪ್ರಸ್ತಾವಿಸಿದರು. ಉಪಾಧ್ಯಕ್ಷ ಅಬ್ದುಲ್ ರವೂಪ್ ನಿರೂಪಿಸಿದರು. ನಿಕಟಪೂರ್ವ ಕಾರ್ಯದರ್ಶಿ ಭಾಸ್ಕರ ಬಾಡ ವಂದಿಸಿದರು. ನಂತರ ಮಂಗಳೂರು ಜರ್ನಿ ಥಿಯೇಟರ್ ಗ್ರೂಪ್ ಪ್ರಸ್ತುತಿಯಲ್ಲಿ ಜಾನಪದ, ರಂಗ ಸಂಗೀತ ಗಾಯನ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net