

ಗಂಗೊಳ್ಳಿ: ಮುಸ್ಲಿಂಮರ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಈದ್ ಮಿಲಾದ್ ಉನ್ ನಬಿಯನ್ನು ಗಂಗೊಳ್ಳಿಯಲ್ಲಿ ಸೋಮವಾರ ವಿಶೇಷವಾಗಿ ಆಚರಿಸಿದರು.
ಇಸ್ಲಾಂ ಧರ್ಮದ ಸ್ಥಾಪಕ ಪ್ರವಾದಿ ಮುಹಮ್ಮದ್ ಜನ್ಮದಿನಾಚರಣೆಯ ಈದ್ ಮಿಲಾದ್ ಉನ್ ನಬಿ ಹಬ್ಬದ ಪ್ರಯುಕ್ತ ಗಂಗೊಳ್ಳಿಯ ಎಲ್ಲಾ ಮಸೀದಿಗಳಲ್ಲಿ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಗಂಗೊಳ್ಳಿಯ ಜುಮಾ ಮಸೀದಿಯಿಂದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಿ ಈದ್ ಮಿಲಾದ್ ಆಚರಿಸಿದರು.