

ಕೋಟ: ತೆಕ್ಕಟ್ಟೆ ರಾ.ಹೆ. 66ರ ಪ್ರಮುಖ ಸರ್ಕಲ್ನಲ್ಲಿ ಗುರುವಾರ ಹೆಮ್ಮಾಡಿ ಮಧ್ಯಾಹ್ನ ಖಾಸಗಿ ಪಿಯು ಕಾಲೇಜಿನ ಶಾಲಾ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಹೈಮಾಸ್ಟ್ ಕಂಬಕ್ಕೆ ಡಿಕ್ಕಿಯಾಗಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಬ್ರಹ್ಮಾವರದಿಂದ ಹೆಮ್ಮಾಡಿ ಕಡೆಗೆ ಚಾಲಕ ಸಹಿತ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಪ್ರಯಾಣಿಸುತ್ತಿದ್ದ ಶಾಲಾ ವಾಹನಕ್ಕೆ ದ್ವಿಚಕ್ರ ವಾಹನ ಏಕಾಏಕಿ ಅಡ್ಡಬಂದ ಪರಿಣಾಮ ಅಪಘಾತ ಸಂಭವಿಸಿದೆ.