ಗೋಳಿಯಂಗಡಿ: ಸಾರ್ವಜನಿಕ ಶ್ರೀಗಣೇಶೋತ್ಸವ ಜನರಲ್ಲಿ ಧಾರ್ಮಿಕತೆ, ಧರ್ಮ, ಸಂಸ್ಕೃತಿ, ಶಾಂತಿ ಸಹಬಾಳ್ವೆಗೆ ಸಹಕಾರಿ. ಶಿಕ್ಷಣ ವ್ಯಕ್ತಿಯ ಜೀವನದಲ್ಲಿ ಉತ್ತಮ ವ್ಯಕ್ತಿತ್ವದೊಂದಿಗೆ ಶ್ರೇಷ್ಠ ಭವಿಷ್ಯ ರೂಪಿಸುತ್ತದೆ ಎಂದು ಖ್ಯಾತ ನಟಿ, ರೂಪದರ್ಶಿ ಸಂಗೀತಾ ಹೊಳ್ಳ ಬೆಂಗಳೂರು ಹೇಳಿದರು.
ಹಿಲಿಯಾಣ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ 14ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವದ ಪ್ರಯುಕ್ತ ಇತ್ತೀಚೆಗೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಹಿಲಿಯಾಣ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಎಚ್.ತಾರಾನಾಥ ಶೆಟ್ಟಿ ಹಿಲಿಯಾಣ ಅಧ್ಯಕ್ಷತೆ ವಹಿಸಿದರು. ಗೌರವಾಧ್ಯಕ್ಷ ಚಿತ್ತರಂಜನ್‌ದಾಸ್ ಶೆಟ್ಟಿ, ಕೃಷ್ಣಮೂರ್ತಿ ಶೆಟ್ಟಿ, ಸ್ಥಾಪಾಕಾಧ್ಯಕ್ಷ ಸಂದೀಪ್ ಶೆಟ್ಟಿ ಭಟ್ರಾಡಿ, ಅಧ್ಯಕ್ಷ ಶರಣ್ ಶೆಟ್ಟಿ ಹೆಸ್ಕುಂದ, ಕಾರ್ಯಾಧ್ಯಕ್ಷ ಶರತ್ ಕುಲಾಲ್ ನಂಜಿನಮಕ್ಕಿ, ಕೋಶಾಧಿಕಾರಿ ದಿನಕರ ಶೆಟ್ಟಿ ಎ.ಜಿ., ಯೋಗಿಂದ್ರ ನರಿಕೊಡ್ಲು, ಅಶೋಕ ಆಚಾರ್ಯ ಕಾರಿಕೊಡ್ಲು, ಹಿಲಿಯಾಣ ಆತ್ಮೀಯ ಯುವ ವೇದಿಕೆ ಅಧ್ಯಕ್ಷ ನೀನಾದ್ ಶೆಟ್ಟಿ ಹಿಲಿಯಾಣ, ಕಾರ್ಯಧ್ಯಕ್ಷ ದಿನೇಶ್ ಆಣೆಮಲ್ಲುಮನೆ, ಹಿಲಿಯಾಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ನಾಯ್ಕ ನರಿಕೊಡ್ಲು, ಹಿಲಿಯಾಣ ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀ ಶೆಟ್ಟಿ ಹಿಲಿಯಾಣ ಮತ್ತಿತರರು ಉಪಸ್ಥಿತರಿದ್ದರು. ಸರೋಜ ಎಸ್.ಹಿಲಿಯಾಣ ಸ್ವಾಗತಿಸಿ, ಮಂಜುನಾಥ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿದರು.