

ಬಂಟ್ವಾಳ: ಅಶೋಕ ಶೆಟ್ಟರು ರಂಗದಲ್ಲಿದ್ದರೆ ಅದರ ಸೊಗಸೆ ಬೇರೆ. ಸುದೀರ್ಘ ಕಲಾಸೇವೆಯಿಂದ ಅವರ ಜೀವನ ಇನ್ನಷ್ಟು ಔನ್ನತ್ಯಕ್ಕೇರಲಿ ಎಂದು ಸಂಘಟಕ ಬಿ.ಭುಜಬಲಿ ಧರ್ಮಸ್ಥಳ ಹೇಳಿದರು.
ಸರಪಾಡಿ ಯಕ್ಷಗಾನ ಅಭಿಮಾನಿ ಬಳಗದ ಸಹಕಾರದಲ್ಲಿ, ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಅವರ ಯಕ್ಷಪಯಣದ 50ರ ಸಂಭ್ರಮ ಮತ್ತು ಪುಸ್ತಕ ಬಿಡುಗಡೆ ಸಮಾರಂಭ ಸುವರ್ಣ ಸರಪಾಡಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ದ.ಕ. ಮಾಜಿ ಸಂಸದ ಮಾತನಾಡಿದರು. ಮೋಹನದಾಸ ಶೆಟ್ಟಿ ಮುನ್ನಪಾಯಿಗುತ್ತು ಪುಸ್ತಕ ಬಿಡುಗಡೆ ಮಾಡಿದರು. ಸರಪಾಡಿ ಅಶೋಕ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ದೇಜಪ್ಪ ಬಾಚಕೆರೆ, ತಾರಾನಾಥ ಪಂಬದ ಅವರನ್ನು ಗೌರವಿಸಲಾಯಿತು.
ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣ ಮಾಡಿ, ಸರಪಾಡಿ ಅಶೋಕ ಶೆಟ್ಟರು ಕೇವಲ ಯಕ್ಷಗಾನ ಕಲಾವಿದರಷ್ಟೇ ಅಲ್ಲ. ಹಲವು ಕ್ಷೇತ್ರಗಳಲ್ಲಿ ದುಡಿದು ಗುರುತಿಸಿಕೊಂಡ ಕಾರಣ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವು ಪುರಸ್ಕಾರಗಳು ಅರ್ಹವಾಗಿಯೇ ದೊರಕಿದವು. ಅವರಂತೆ ಪಾತ್ರನಿರ್ವಹಣೆ ಮಾಡುವವರು ವಿರಳ ಎಂದು ಹೇಳಿದರು.
ಸುದರ್ಶನ ಜೈನ್ ಪಂಜಿಕಲ್ಲು, ಸಸಿಹಿತ್ಲು ಮೇಳ ವ್ಯವಸ್ಥಾಪಕ ರಾಜೇಶ್ ಕೆ.ಗುಜರನ್, ಉದ್ಯಮಿ ಚಂದ್ರಹಾಸ ಶೆಟ್ಟಿ, ಸದಾನಂದ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಷನ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ರಂಗಭೂಮಿ ಕಲಾವಿದ ಪ್ರದೀಪ್ ಆಳ್ವ, ಉದ್ಯಮಿ ರಮೇಶ್ ಮಂಜೇಶ್ವರ, ಸಾಹಿತಿ ಲಕ್ಷ್ಮೀನಾರಾಯಣ ರೈ ಹರೇಕಳ, ಪ್ರಮುಖರಾದ ಪುರುಷೋತ್ತಮ ಪೂಜಾರಿ ಮಜಲು, ವಿಲ್ಫ್ರೆಡ್ ಪ್ರಕಾಶ್ ಡಿಸೋಜ, ಅಭಿಷೇಕ್ ಸುವರ್ಣ, ಮೋಹನದಾಸ ಕೊಟ್ಟಾರಿ ಉಪಸ್ಥಿತರಿದ್ದರು.
ಬುಡಾ ಮಾಜಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಸ್ವಾಗತಿಸಿದರು. ಪ್ರಜ್ವಲ್ ಶೆಟ್ಟಿ ಸಿದ್ದಕಟ್ಟೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.