ಗುರುಪುರ: ಮಂಗಳೂರು ಬಜ್ಪೆ ರಾಜ್ಯ ಹೆದ್ದಾರಿಯ ಕೆಂಜಾರು ಶ್ರೀ ದೇವಿ ಕಾಲೇಜಿನ ಬಳಿ ಶುಕ್ರವಾರ ಅಪರಾಹ್ನ 3 ಗಂಟೆಗೆ ಟಿಪ್ಪರ್ ಲಾರಿಯೊಂದು ಏಕಾಏಕಿ ರಸ್ತೆ ಬಿಟ್ಟು ಡಿವೈಡರ್ ಏರಿದ ಪರಿಣಾಮ ಅಲ್ಲಿದ್ದ ಬೀದಿ ದೀಪದ ಕಂಬಗಳು ಮುರಿದಿವೆ.
ಘಟನೆ ವೇಳೆ ದ್ವಿಚಕ್ರ ವಾಹನ ಸವಾರರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮಂಗಳೂರು ಕಡೆಯಿಂದ ಬರುತ್ತಿದ್ದ ಟಿಪ್ಪರ್ ಕಾಲೇಜಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಏರಿದೆ. ಈ ವೇಳೆ ಡಿವೈಡರ್ಗೆ ಅಳವಡಿಸಲಾಗಿದ್ದ 2 ಹೊಸ ವಿದ್ಯುತ್ ಕಂಬಗಳು ಮುರಿದಿವೆ.
ಘಟನೆ ವೇಳೆ ವಿರುದ್ಧ ದಿಕ್ಕಿನಿಂದ ಮಂಗಳೂರಿನತ್ತ ಸಾಗುತ್ತಿದ್ದ ದ್ವಿಚಕ್ರ ಸವಾರರು ಬೀಳುತ್ತಿದ್ದ ಕಂಬಗಳಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.