ಬೈಕ್​-ಪಿಕಪ್​ ಡಿಕ್ಕಿ, ಸವಾರಗೆ ಗಾಯ

accident-15
Published on

ಸುಳ್ಯ: ಸೋಣಂಗೇರಿ&ಗುತ್ತಿಗಾರು ರಸ್ತೆಯ ಮಿತ್ತಮಜಲು ಬಳಿ ಬೈಕ್​&ಪಿಕಪ್​ ಅಪಘಾತ ಸಂಭವಿಸಿ ಬೈಕ್​ ಸವಾರ ಗಂಭೀರ ಗಾಯಗೊಂಡ ಟನೆ ಭಾನುವಾರ ಸಂಭವಿಸಿದೆ.

ಸೋಣಂಗೇರಿ ಕಡೆಯಿಂದ ದುಗಲಡ್ಕ ಕಡೆಗೆ ಹೋಗುವ ಪಿಕಪ್​ಗೆ ದುಗಲಡ್ಕ ಕಡೆಯಿಂದ ಬರುತ್ತಿದ್ದ ಬೈಕ್​ ಡಿಕ್ಕಿ ಹೊಡೆದಿದ್ದು, ಬೈಕ್​ ಸವಾರನ ಕಾಲಿಗೆ ಗಂಭೀರ ಗಾಯವಾಗಿದ್ದು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net