

ಪಂಜಾಬ್ ; ಮಾನ್ಯ ಪ್ರಧಾನಮಂತ್ರಿಗಳ ನಿರ್ದೇಶನದ ಮೇರೆಗೆ ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ವಿ. ಸೋಮಣ್ಣ ಇಂದು (ಅ.07) ಪಂಜಾಬ್ ರಾಜ್ಯದಲ್ಲಿನ ನೇರೆ ಪಿಡಿತ ಪ್ರದೇಶಕ್ಕೆ ಭೇಟಿ ನೀಡಿದ್ದರು.
ವಿ. ಸೋಮಣ್ಣ ಇಂದು ಮತ್ತೆ ನಾಳೆ 2 ದಿವಸಗಳ ಕಾಲ ಈ ಭೇಟಿ ಹಮ್ಮಿಕೊಂಡಿದ್ದು, ಅಮೃತಸರ್ ಜಿಲ್ಲೆಯಲ್ಲಿನ ನೇರ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವ ನಿಮಿತ್ತ ಇಂದು ದೆಹಲಿಯಿಂದ ಪಂಜಾಬಿನ ಅಮೃತಸರ್ ಜಿಲ್ಲೆಗೆ ತೆರಳಿದ್ದಾರೆ. ಇಂದಿನ ಭೇಟಿಯ ಸಂದರ್ಭದಲ್ಲಿ ಪಾಕಿಸ್ತಾನ ಮತ್ತು ಭಾರತದ ಗಡಿಯಾದ ಪಂಜಾಬ್ ರಾಜ್ಯದ ಅಮೃತಸರ್ ಜಿಲ್ಲೆಯಲ್ಲಿನ ಕಕ್ಕಾಡ, ಲೊದಿಗುಜ್ಜಾರ್, ಮಾಂಜ್, ಸೈದಾಪುರ ಹಳ್ಳಿಗಳಿಗೆ ಭೇಟಿ ನೀಡಿ ನೆರೆಯಿಂದ ಉಂಟಾದ ಹಾನಿಯ ಬಗ್ಗೆ ಪರಿಶೀಲಿಸಿದರು. ಇದೇ ವೇಳೆ ಸಂತ್ರಸ್ತ ಪ್ರದೇಶದ ಗ್ರಾಮಸ್ತರೊಂದಿಗೆ ಚರ್ಚಿಸಿ ಅವರ ಕುಂದುಕೊರತೆ ಹಾಗೂ ನಷ್ಟವುಂಟಾದ ಬಗ್ಗೆ ವಿವರ ಪಡೆದಕೊಂಡರು. ನೆರೆ ಪೀಡಿತ ಪ್ರದೇಶಗಳಲ್ಲಿನ ಸಂತ್ರಸ್ತರಿಗೆ ಶೀಘ್ರ ಪರಿಹಾರ ನೀಡುವಂತೆ ಸ್ಥಳದಲ್ಲಿದ್ದ ಹಾಜರಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿ, ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಪಂಜಾಬ್ ರಾಜ್ಯಸರ್ಕಾರವನ್ನು ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ಪಂಜಾಬ್ ರಾಜ್ಯಸರ್ಕಾರಕ್ಕೆ ಎನ್.ಡಿ.ಆರ್.ಏಫ್ನಿಂದ ಸಾಕಷ್ಟು ಹಣವನ್ನು ನೀಡಿದ್ದು, ಈ ಸಂದರ್ಭದಲ್ಲಿ ಸದುಪಯೋಗ ಪಡಿಸಿ ಸಂತ್ರಸ್ತರಿಗೆ ನೇರವಾಗುವಂತೆ ಪಂಜಾಬ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಂತಹ ಸಂದರ್ಭದಲ್ಲಿಯೂ ನೆರೆ ಸಂತ್ರಸ್ತರೊಂದಿಗಿದೆ. ಸಂತ್ರಸ್ತರ ಜೀವನವನ್ನು ಪುನರ್ನಿಮಿಸುವಲ್ಲಿ ಮತ್ತು ಪಂಜಾಬ್ ರಾಜ್ಯದ ಜನತೆಯ ಬೆಂಬಲಕ್ಕೆ ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಸದಾ ಸಿದ್ದವಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅಮೃತಸರ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಗ್ರಾಮಾಂತರದ ಅಧ್ಯಕ್ಷರಾದ ಶ್ರೀ ಅಮರ್ ಪಾಲ್ ಸಿಂಗ್ ಬೋನಿ, ಭಾಜಪದ ಹಿರಿಯ ನಾಯಕರು, ಬಿ.ಜೆ.ಪಿಯ ಕಾರ್ಯಕರ್ತರು, ರೇಲ್ವೆ ಅಧಿಕಾರಿಗಳು, ಪಂಜಾಬ್ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ನಾಳೆಯು ಸಹ ಕೇಂದ್ರ ಸಚಿವ ವಿ. ಸೋಮಣ್ಣನವರು ಅಮೃತಸರ್ ಜಿಲ್ಲೆ ಕರೋಟಾನಾ, ರಾಜಾಸಂಸಿ, ಇತ್ಯಾದಿ ಹಳ್ಳಗಳಲ್ಲಿನ ನೆರೆಪಿಡಿತ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಯ ವಿವರ ಪಡೆದುಕೊಳ್ಳಲಿದ್ದಾರೆ.