ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಮತ್ತೆ ಜೀವ ಬೆದರಿಕೆ!

Nitin Gadkari
Published on

ನವದೆಹಲಿ: ಇತ್ತೀಚೆಗಷ್ಟೇ ಜೀವ ಬೆದರಿಕೆಗೆ ಒಳಗಾಗಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಇದೀಗ ಇನ್ನೊಮ್ಮೆ ಜೀವ ಬೆದರಿಕೆ ಬಂದಿದೆ. ಈ ಮೂಲಕ ನಾಲ್ಕೇ ತಿಂಗಳಲ್ಲಿ 2 ಸಲ ಜೀವ ಬೆದರಿಕೆ ಬಂದಂತಾಗಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ದೆಹಲಿ ನಿವಾಸಕ್ಕೆ ಸೋಮವಾರ ಸಂಜೆ ಕರೆಯೊಂದು ಬಂದಿದ್ದು, ಆ ಕಡೆಯಿಂದ ಮಾತನಾಡಿದ್ದ ವ್ಯಕ್ತಿ ಜೀವ ಬೆದರಿಕೆ ಒಡ್ಡಿದ್ದ. ಸಚಿವರ ಕಚೇರಿ ಸಿಬ್ಬಂದಿ ಕೂಡಲೇ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣದ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಹಿಂದೆ ಇದೇ ವರ್ಷದ ಜನವರಿಯಲ್ಲಿ ಕೇಂದ್ರ ಸಚಿವರನ್ನುದ್ದೇಶಿಸಿ ಜೀವ ಬೆದರಿಕೆ ಕರೆಗಳು ಬಂದಿದ್ದವು. ಅದರಲ್ಲೂ ಬೆಳಗಾವಿಯ ಹಿಂಡಲಗಾ ಸೆಂಟ್ರಲ್ ಜೈಲಿನ ಕೈದಿಯಿಂದಲೇ ಈ ಜೀವ ಬೆದರಿಕೆ ಕರೆ ಹೋಗಿತ್ತು. ಈ ಸಂಬಂಧ ಶಂಕಿತ ಆರೋಪಿಯನ್ನು ಜಯೇಶ್ ಪೂಜಾರಿ ಅಲಿಯಾಸ್ ಜಯೇಶ್ ಕಾಂತ ಎಂಬಾತನನ್ನು ವಶಕ್ಕೆ ಪಡೆಯಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net