More

  ಓಲಾ, ಊಬರ್​ನಂಥ ಟ್ಯಾಕ್ಸಿಗಳಿಗೆ ಏಕರೂಪ ಪ್ರಯಾಣ ದರ ನಿಗಧಿಪಡಿಸಿದ ಸರ್ಕಾರ: ಪರಿಷ್ಕೃತ ಪಟ್ಟಿ ಇಲ್ಲಿದೆ..

  ಬೆಂಗಳೂರು: ಓಲಾ, ಊಬರ್‌, ರಾಪಿಡ್‌ನಂತಹ ಅಗ್ರಿಗೇಟರ್‌ ಕ್ಯಾಬ್‌ ಮತ್ತು ಆಪ್‌ ಆಧರಿತವಲ್ಲದ ಇತರೆ ಟ್ಯಾಕ್ಸಿ ಸೇವೆಗಳಿಗೆ ಕರ್ನಾಟಕ ಸರ್ಕಾರವು ಏಕರೂಪದ ಪ್ರಯಾಣ ದರ ನಿಗದಿಪಡಿಸಿದೆ. ಕ್ಯಾಬ್‌ಗಳಿಂದ ಪ್ರಯಾಣಿಕರಿಗೆ ಆಗುವ ತೊಂದರೆ, ಮೋಸ, ಕಳ್ಳಾಟಗಳಿಗೆ ಬ್ರೇಕ್‌ ಹಾಕುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ.

  ಇದನ್ನೂ ಓದಿ: ಪೂನಂ ಪಾಂಡೆ ವಿವಾದಾತ್ಮಕ ಪ್ರಚಾರ.. ಡಿಜಿಟಲ್ ಏಜೆನ್ಸಿ ಕ್ಷಮೆಯಾಚನೆ!

  ವಾಹನಗಳ ಮೌಲ್ಯಕ್ಕೆ ತಕ್ಕಂತೆ ವರ್ಗೀಕರಣ ಮಾಡಿ ದರ ನಿಗದಿಪಡಿಸಲಾಗಿದೆ. 10 ಲಕ್ಷ ರೂಪಾಯಿ ಮತ್ತು ಅದಕ್ಕಿಂತ ಕಡಿಮೆ ದರದ ವಾಹನಗಳಿಗೆ ನಾಲ್ಕು ಕಿ.ಮೀ. ಪ್ರಯಾಣಕ್ಕೆ 100 ರೂಪಾಯಿ ದರ ನಿಗದಿಪಡಿಸಲಾಗಿದೆ. ಹೆಚ್ಚುವರಿ ಪ್ರತಿ ಕಿಲೋಮೀಟರ್‌ಗೆ 24 ರೂಪಾಯಿ ನಿಗದಿಪಡಿಸಲಾಗಿದೆ.

  10-15 ಲಕ್ಷ ರೂ.ನ ವಾಹನಗಳಿಗೆ ಮೊದಲ ನಾಲ್ಕು ಕಿ.ಮೀ.ಗೆ 115 ರೂಪಾಯಿ ಮತ್ತು ಹೆಚ್ಚುವರಿಯಾಗಿ ಪ್ರತಿ ಕಿ.ಮೀ.ಗೆ 28 ರೂಪಾಯಿ ನಿಗದಿಪಡಿಸಲಾಗಿದೆ. ಹದಿನೈದು ಲಕ್ಷ ಅಥವಾ ಅದಕ್ಕಿಂತ ಹೆಚ್ಚು ದರದ ವಾಹನಗಳಿಗೆ ಮೊದಲ ನಾಲ್ಕು ಕಿ.ಮೀ.ಗೆ 130 ರೂ. ಮತ್ತು ಬಳಿಕ ಪ್ರತಿಕಿ.ಮೀ.ಗೆ 32 ರೂಪಾಯಿ ನಿಗದಿಪಡಿಸಲಾಗಿದೆ.

  ಈ ಹಿಂದೆ ಒಂದೇ ಸ್ಥಳಕ್ಕೆ ಇಬ್ಬರು ಅಕ್ಕಪಕ್ಕ ನಿಂತು ಮೊಬೈಲ್‌ನಲ್ಲಿ ಬುಕ್‌ ಮಾಡಿದರೂ ದರ ವ್ಯತ್ಯಾಸ ಇರುತ್ತಿತ್ತು. ಇಂತಹ ಕಳ್ಳಾಟಗಳಿಗೆ ಬ್ರೇಕ್‌ ಹಾಕಲು ನೂತನ ನಿಯಮ ನೆರವಾಗುವ ನಿರೀಕ್ಷೆಯಿದೆ. ಈ ಹಿಂದೆ 2021ರ ಏಪ್ರಿಲ್‌ ಒಂದರಿಂದ ಅನ್ವಯವಾಗುವಂತೆ ವಾಹನಗಳನ್ನು ಅವುಗಳ ಖರೀದಿ ದರಕ್ಕೆ ಅನುಗುಣವಾಗಿ ಎಬಿಸಿಡಿ ಎಂದು ವರ್ಗೀಕರಣ ಮಾಡಿ ಪ್ರಯಾಣ ದರ ನಿಗದಿಪಡಿಸಲಾಗಿತ್ತು.

  ಲಗೇಜ್‌ ಸಾಗಾಣೆ ದರ ಎಷ್ಟು?: 120 ಕೆ.ಜಿ.ವರೆಗೆ ಲಗೇಜ್‌ ಸಾಗಾಟ ಉಚಿತವಾಗಿದೆ. ನೂರ ಇಪ್ಪತ್ತು ಕೆ.ಜಿ.ಗಿಂತ ಹೆಚ್ಚು ತೂಕವಿದ್ದರೆ ಮೂವತ್ತು ಕೆ.ಜಿ.ಗೆ 7 ರೂಪಾಯಿ ನಿಗದಿಪಡಿಸಲಾಗಿದೆ.

  ವೇಟಿಂಗ್‌ ಚಾರ್ಜ್‌ ಎಷ್ಟು?: ಐದು ನಿಮಿಷ ವೇಟಿಂಗ್‌ ಉಚಿತವಾಗಿದೆ. ಬಳಿಕ ನಿಮಿಷಕ್ಕೆ ಒಂದು ರೂಪಾಯಿ ನೀಡಬೇಕು. ರಾತ್ರಿ 12ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಪ್ರಯಾಣ ದರಕ್ಕಿಂತ ಶೇಕಡ 10ರಷ್ಟು ಹೆಚ್ಚು ದರ ನೀಡಬೇಕು. ಅದೇ ರೀತಿ ಪ್ರಯಾಣಿಕರಿಂದ ಶೇಕಡ 5ರಷ್ಟು ಜಿಎಸ್‌ಟಿ ಮತ್ತು ಟೋಲ್‌ ಚಾರ್ಜ್‌ ಅನ್ನು ಪ್ರಯಾಣಿಕರಿಂದ ಪಡೆಯಲು ಚಾಲಕರಿಗೆ ಅವಕಾಶ ನೀಡಲಾಗಿದೆ. ಸರಕಾರದ ಈ ಆದೇಶ ಉಲ್ಲಂಘಿಸಿ ಪ್ರಯಾಣಿಕರಿಂದ ಹೆಚ್ಚು ದರ ಪಡೆದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಸರಕಾರ ಎಚ್ಚರಿಕೆ ನೀಡಿದೆ

  BBK OTT: ಬಿಗ್‌ಬಾಸ್‌ ಕನ್ನಡ ಸೀಸನ್‌ 2 ಒಟಿಟಿ ಆವೃತ್ತಿ ಆರಂಭ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts