BBK OTT: ಬಿಗ್‌ಬಾಸ್‌ ಕನ್ನಡ ಸೀಸನ್‌ 2 ಒಟಿಟಿ ಆವೃತ್ತಿ ಆರಂಭ?

ಬೆಂಗಳೂರು: ಇತ್ತೀಚೆಗಷ್ಟೇ ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಮುಗಿದಿದ್ದು ತಿಳಿದ ಸಂಗತಿಯೇ. ಬಿಗ್‌ಬಾಸ್‌ಗೆ ಭರ್ಜರಿ ಟಿಆರ್‌ಪಿ ದೊರಕಿರುವುದರಿಂದ ಒಟಿಟಿ ಆವೃತ್ತಿ ಆರಂಭಿಸುವ ಕುರಿತು ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ಗಿರಿಜಾ ಕಲ್ಯಾಣ ಮಹೋತ್ಸವ ಸಂಪನ್ನ: ಗಾಯತ್ರಿ ವಿಪ್ರ ಮಹಿಳಾ ಮಂಡಳಿಯಿಂದ ಆಯೋಜನೆ

ಬಿಗ್‌ಬಾಸ್‌ ಕನ್ನಡ ಒಟಿಟಿ ಆವೃತ್ತಿಯು ಮುಂದಿನ ದಿನಗಳಲ್ಲಿ ಆರಂಭವಾಗಲಿದ್ದು, ಇದಕ್ಕಾಗಿಯೇ ಬಿಗ್‌ಬಾಸ್‌ ಮನೆಗೆ ಮತ್ತೆ ಸುಣ್ಣಬಣ್ಣ ಬಳಿಯಲಾಗುತ್ತಿದೆ ಎನ್ನಲಾಗುತ್ತಿದೆ. ಆದರೆ, ಕಿಚ್ಚ ಸುದೀಪ್‌ ಅವರು ಮ್ಯಾಕ್ಸ್‌ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು, ಕೆಸಿಸಿ 10 ಕ್ರಿಕೆಟ್‌ ಪಂದ್ಯಾವಳಿಯೂ ಇರುವುದರಿಂದ ಸದ್ಯಕ್ಕೆ ಬಿಗ್‌ಬಾಸ್‌ ವೀಕೆಂಡ್‌ ಪಂಚಾಯಿತಿಗೆ ಲಭ್ಯ ಇರುವ ಸಾಧ್ಯತೆ ಇಲ್ಲ ಎಂದೂ ಹೇಳಲಾಗುತ್ತಿದೆ.

2022ರಲ್ಲಿ ಕನ್ನಡದ ಮೊದಲ ಬಿಗ್‌ಬಾಸ್‌ ಒಟಿಟಿ ಆವೃತ್ತಿಯು ವೂಟ್‌ ಸೆಲೆಕ್ಟ್‌ನಲ್ಲಿ ಪ್ರಸಾರವಾಗಿತ್ತು. ಬಿಗ್‌ಬಾಸ್‌ ಮಿನಿ ಆವೃತ್ತಿಯಲ್ಲಿ ಹದಿನಾರು ಸ್ಪರ್ಧಿಗಳು ಭಾಗವಹಿಸಿದ್ದರು. ಇವರಲ್ಲಿ ಟಾಪ್‌ 4 ಸ್ಥಾನ ಪಡೆದವರು ನೇರವಾಗಿ ಬಿಗ್‌ಬಾಸ್‌ ಕನ್ನಡ ಸೀಸನ್‌9ಕ್ಕೆ ಎಂಟ್ರಿ ಪಡೆದಿದ್ದರು. ಬಿಗ್‌ಬಾಸ್‌ ಕನ್ನಡ ಒಟಿಟಿ ಸೀಸನ್‌ನಲ್ಲಿ ರೂಪೇಶ್‌ ಶೆಟ್ಟಿ ಗೆಲುವು ಪಡೆದಿದ್ದರು. ಬಿಗ್‌ಬಾಸ್‌ ಕನ್ನಡ ಸೀಸನ್‌ 9 ಟೀವಿ ರಿಯಾಲಿಟಿ ಶೋನಲ್ಲೂ ರೂಪೇಶ್‌ ಶೆಟ್ಟಿ ಗೆಲುವು ಪಡೆದಿದ್ದರು.

ಈ ವರ್ಷ ಬಿಗ್‌ಬಾಸ್‌ ಕನ್ನಡ ಸೀಸನ್‌ 10 ರಿಯಾಲಿಟಿ ಶೋ ಕಲರ್ಸ್‌ ಕನ್ನಡ ಟೀವಿಯಲ್ಲಿ ಮಾತ್ರವಲ್ಲದೆ ಜಿಯೋ ಸಿನಿಮಾ ಒಟಿಟಿಯಲ್ಲೂ ಪ್ರಸಾರವಾಗಿತ್ತು. ದಿನಪೂರ್ತಿ ಅನ್‌ಸೀನ್‌ ಫೂಟೇಜ್‌ಗಳನ್ನು ನೋಡುವ ಅವಕಾಶ ಜಿಯೋ ಸಿನಿಮಾದಲ್ಲಿ ದೊರಕಿತ್ತು. ಈ ಹಿಂದೆ ವೂಟ್‌ ಒಟಿಟಿಯಲ್ಲಿ ಬಿಗ್‌ಬಾಸ್‌ ಕನ್ನಡ ಒಟಿಟಿ ಆವೃತ್ತಿ ಪ್ರಸಾರವಾಗಿತ್ತು.

ನೇಹಾ ಲಕ್ಷ್ಮಿ ಬ್ಯಾಚುಲರ್ ಪಾರ್ಟಿಯಲ್ಲಿ ಸುರಭಿ ಚಂದನಾ; ವೈರಲ್ ಆಯ್ತು ನಟಿಯ ಬೋಲ್ಡ್ ಲುಕ್

ಬಿಗ್‌ಬಾಸ್‌ ಕನ್ನಡ ಒಟಿಟಿ ಆವೃತ್ತಿ ಆರಂಭವಾಗುವ ಕುರಿತು ಜಿಯೋ ಸಿನಿಮಾ ಕಡೆಯಿಂದ ಯಾವುದೇ ಅಪ್‌ಡೇಟ್‌ ಬಂದಿಲ್ಲ. ಜಿಯೋ ಸಿನಿಮಾ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲೂ ಯಾವುದೇ ಸಣ್ಣ ಕ್ಲೂ ದೊರಕಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಸ್ಪಷ್ಟತೆ ದೊರಕಲಿದೆ. ಬಿಗ್‌ಬಾಸ್‌ ಕನ್ನಡ ಸೀಸನ್‌ 10ರಲ್ಲಿ ಕಾರ್ತಿಕ್‌ ಗೌಡ ಅವರು ಗೆಲುವು ಪಡೆದಿದ್ದರು. ಮೊದಲ ರನ್ನರ್‌ ಅಪ್‌ ಆಗಿ ಡ್ರೋನ್‌ ಪ್ರತಾಪ್‌, ಎರಡನೇ ರನ್ನರ್‌ ಅಪ್‌ ಆಗಿ ಸಂಗೀತಾ ಗೌಡ ಮತ್ತು ಮೂರನೇ ರನ್ನರ್‌ ಅಪ್‌ ಆಗಿ ವಿನಯ್‌ ಗೌಡ ಹೊರಹೊಮ್ಮಿದ್ದರು. ಕಳೆದ ಬಿಬಿಕೆ ಒಟಿಟಿ ಆವೃತ್ತಿಯಲ್ಲಿ ಸೋನು ಗೌಡ, ರಾಕೇಶ್‌ ಅಡಿಗ, ರೂಪೇಶ್‌ ಶೆಟ್ಟಿ, ಸಾನ್ಯ ಅಯ್ಯರ್‌, ಆಯುವರ್ಧನ್‌ ಗುರೂಜಿ ಮುಂತಾದವರು ಸ್ಪರ್ಧಿಗಳಾಗಿ ಭಾಗವಹಿಸಿದ್ದರು. ಬಳಿಕ ಬಿಗ್‌ಬಾಸ್‌ ಟಿವಿ ಆವೃತ್ತಿ ಆರಂಭವಾಗಿತ್ತು. ಈಗಾಗಲೇ ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಟಿವಿ ಆವೃತ್ತಿ ಮುಗಿದಿರುವುದರಿಂದ ಒಟಿಟಿ ಆವೃತ್ತಿ ಸ್ವರೂಪ ಭಿನ್ನವಾಗಿರುವ ಸಾಧ್ಯತೆಯಿದೆ.

Share This Article

ತೂಕ ಕಳೆದುಕೊಂಡಿದ್ದೀರಾ? ಲಘುವಾಗಿ ಪರಿಗಣಿಸಬೇಡಿ, ನಿಮಗೆ ಈ ಆರೋಗ್ಯ ಸಮಸ್ಯೆಗಳಿರಬಹುದು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…

ಒಂದು ತಿಂಗಳು ಬೇಳೆಕಾಳುಗಳನ್ನು ತಿನ್ನೋದು ಬಿಟ್ಟರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…

ಪೋಷಕರೇ ಹುಷಾರ್‌! ಅಪ್ಪಿತಪ್ಪಿಯೂ ಮಕ್ಕಳ ಮುಂದೆ ಪೋಷಕರು ಈ ಕೆಲಸಗಳನ್ನು ಮಾಡಬೇಡಿ

 ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…