More

    ಪೂನಂ ಪಾಂಡೆ ವಿವಾದಾತ್ಮಕ ಪ್ರಚಾರ.. ಡಿಜಿಟಲ್ ಏಜೆನ್ಸಿ ಕ್ಷಮೆಯಾಚನೆ!

    ನವದೆಹಲಿ: ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಡೆತ್ ಪೋಸ್ಟ್ ಮಾಡಿರುವ ನಟಿ ಪೂನಂ ಪಾಂಡೆಯ ವಿವಾದಾತ್ಮಕ ಅಭಿಯಾನ ತೀವ್ರ ಟೀಕೆಗೆ ಗುರಿಯಾಗಿದ್ದು, ಇದರ ಭಾಗವಾಗಿದ್ದ ಡಿಜಿಟಲ್ ಏಜೆನ್ಸಿ ‘ಶ್ಬಾಂಗ್’ ಕ್ಷಮೆಯಾಚಿಸಿದೆ.

    ಇದನ್ನೂ ಓದಿ: BBK OTT: ಬಿಗ್‌ಬಾಸ್‌ ಕನ್ನಡ ಸೀಸನ್‌ 2 ಒಟಿಟಿ ಆವೃತ್ತಿ ಆರಂಭ?

    ಈ ನಿಟ್ಟಿನಲ್ಲಿ ಇನ್‌ಸ್ಟಾಗ್ರಾಮ್ ಒಂದು ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ‘ ಗರ್ಭಕಂಠದ ಕ್ಯಾನ್ಸರ್ ಜಾಗೃತಿಗಾಗಿ ನಾವು ಪೂನಂ ಪಾಂಡೆ ಅವರ ಅಭಿಯಾನದ ಭಾಗವಾಗಿದ್ದೇವೆ. ಇದಕ್ಕಾಗಿ ನಾವು ಕ್ಷಮೆಯಾಚಿಸಲು ಬಯಸುತ್ತೇವೆ. ತಿಳುವಳಿಕೆಗಾಗಿ ನಾವು ಹಾಗೆ ಮಾಡಿದ್ದೇವೆ. 2022 ರಲ್ಲಿ ಭಾರತದಲ್ಲಿ 1.23,907 ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು ಮತ್ತು 77,348 ಸಾವುಗಳು ದಾಖಲಾಗಿವೆ. ಪೂನಂ ಅವರ ತಾಯಿ ಕೂಡ ಕ್ಯಾನ್ಸರ್‌ನೊಂದಿಗೆ ಹೋರಾಡಿ ಸಾವನ್ನಪ್ಪಿದ್ದಾರೆ ಎಂಬುದು ಅನೇಕರಿಗೆ ತಿಳಿದಿಲ್ಲ. ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಎದುರಿಸಿದ ದುರಂತದ ಕಾರಣದಿಂದಾಗಿ ಕ್ಯಾನ್ಸರ್​ ತಡೆಯುವ ಅಗತ್ಯತೆ ಅರಿತು ಅವರು ಈ ರೀತಿ ಮಾಡಿದ್ದಾರೆ. ಆಕೆಯ ಕ್ರಮದಿಂದಾಗಿಯೇ ಹೆಚ್ಚಿನ ಜನರು ಆನ್‌ಲೈನ್‌ನಲ್ಲಿ ಅದರ ಬಗ್ಗೆ ಹುಡುಕಿದ್ದಾರೆ’ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ವಿವರಿಸಿದೆ.

    ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ ಎಂದು ಸಿಬ್ಬಂದಿ ಆಕೆಯ ವೈಯಕ್ತಿಕ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಉದ್ಯಮವನ್ನು ಬೆಚ್ಚಿ ಬೀಳಿಸಿತ್ತು. ಮರುದಿನ, ನಟಿ ತಾನು ಸಾಯಲು ಸಾಧ್ಯವಿಲ್ಲ ಎಂದು ಹೇಳುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇಂತಹ ಪ್ರಚಾರ ಸರಿಯಲ್ಲ ಎಂದು ಎಚ್ಚರಿಸಿದ್ದರು.

    ಏಕಕಾಲದಲ್ಲಿ ಅಬ್ಬರಿಸಿದ 18 ಗುಳಿಗ ದೈವಗಳು; ಹೊಸ ಇತಿಹಾಸಕ್ಕೆ ಸಾಕ್ಷಿಯಾದ ಬೆಳ್ತಂಗಡಿಯ ಬರ್ಕಜೆ ಕ್ಷೇತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts