More

    ಏಕಕಾಲದಲ್ಲಿ ಅಬ್ಬರಿಸಿದ 18 ಗುಳಿಗ ದೈವಗಳು; ಹೊಸ ಇತಿಹಾಸಕ್ಕೆ ಸಾಕ್ಷಿಯಾದ ಬೆಳ್ತಂಗಡಿಯ ಬರ್ಕಜೆ ಕ್ಷೇತ್ರ

    ಮಂಗಳೂರು: ಇದು ತುಳುನಾಡಿನ ದೈವಾರಾದನೆಯ ಇತಿಹಾಸದಲ್ಲೇ ಮೊದಲು. ಒಂದೇ ಬಾರಿ 18 ಗುಳಿಗ ದೈವದ ಗಗ್ಗರ ಸೇವೆ ನಡೆದಿದೆ. ಪುಣ್ಯಕ್ಷೇತ್ರ ಬರ್ಕಜೆ ನವ ಗುಳಿಗ ಕ್ಷೇತ್ರದಲ್ಲಿ ಈ ಬಾರಿ ವಿಶೇಷ ಎಂಬಂತೆ 18 ಗುಳಿಗ ದೈವದ ಗಗ್ಗರ ಸೇವೆ ನಡೆದು, ನೆರೆದಿದ್ದ ದೈರಾಧಕರನ್ನು ರೋಮಾಂಚನಗೊಳಿಸಿತು.

    ನೀವು ನೋಡಿರುವ ಹಾಗೆ ಕಾಂತಾರ ಸಿನಿಮಾದ ಕೊನೆಯಲ್ಲಿ ನಟ ರಿಷಭ್ ಶೆಟ್ಟಿ ಅವರಿಗೆ ಗುಳಿಗ ದೈವದ ಆವೇಶ ಆಗಿತ್ತು. ಗುಳಿಗ ದೈವ ತುಳುನಾಡಿನ ದೈವಗಳಲ್ಲಿ ಬಹಳ ಅಬ್ಬರದ ನರ್ತನ ಮಾಡುವ ದೈವ. ಗುಳಿಗನ‌ ಆವೇಶ ನೋಡುವುದೇ ಭಕ್ತಿ ಭಯ ತುಂಬಿದ ರೋಮಾಂಚನ ಸನ್ನಿವೇಶ.

    ಇಂತಹ ದೈವರಾದನೆಯಲ್ಲೇ ವಿಶೇಷ ಆಚರಣೆ ಎಂಬಂತೆ ಒಮ್ಮೆಗೆ 18 ಗುಳಿಗ ದೈವದ ನರ್ತನ ಸೇವೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ಬರ್ಕಜೆ ಎಂಬಲ್ಲಿ ನಡೆದು, ನೆರೆದಿದ್ದ ದೈವಾರದಕನ್ನು ರೋಮಾಂಚನ ಗೊಳಿಸಿತು. 18 ಗುಳಿಗನ ಅಬ್ಬರ ಕಂಡು ದೈವಾರಾಧಕರು ಮೂಕ ವಿಸ್ಮಿತರಾದರು.

    ಏಕಕಾಲದಲ್ಲಿ ಅಬ್ಬರಿಸಿದ 18 ಗುಳಿಗ ದೈವಗಳು; ಹೊಸ ಇತಿಹಾಸಕ್ಕೆ ಸಾಕ್ಷಿಯಾದ ಬೆಳ್ತಂಗಡಿಯ ಬರ್ಕಜೆ ಕ್ಷೇತ್ರ

    ಬರ್ಕಜೆ ದುರ್ಗಾಪರಮೇಶ್ವರಿ ಮತ್ತು ನವ ಗುಳಿಗ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಒಂಬತ್ತು ಗುಳಿಗ ದೈವದ ನರ್ತನ ಸೇವೆ ನಡೆಯುತ್ತಿತ್ತು.‌ ಆದರೆ ಈ ಬಾರಿ ಸಂಪ್ರದಾಯದಂತೆ ಒಂಬತ್ತು ಹಾಗೂ ಸೇವೆಯಾಗಿ 9. ಹೀಗೆ ಒಟ್ಟು 18 ಗುಳಿಗ ದೈವದ ನರ್ತನ ಸೇವೆ ನಡೆದು ತುಳುನಾಡಿನ ದೈವಾರಾದನೆಯ ಇತಿಹಾಸದಲ್ಲೇ ಮೊದಲು ಎಂಬಂತಾಗಿದೆ.

    ಇನ್ನೂ, 18 ಗುಳಿಗ ದೈವದ ವಿಶೇಷ ಗಗ್ಗರ ಸೇವೆಯನ್ನು ಕಣ್ತುಂಬಿಕೊಳ್ಳುವುದಕ್ಕೆ ಮುಂಬೈ ಬೆಂಗಳೂರು ಸೇರಿದಂತೆ ಕರಾವಳಿಯ ಸಾವಿರಾರು ದೈವಾರಾಕರು ಸೇರಿದ್ದರು. ಗುಳಿಗ ದೈವಗಳ ಗಗ್ಗರ ಸೇವೆ ಕಣ್ತುಂಬಿಕೊಂಡರು.

    ಒಟ್ಟಿನಲ್ಲಿ, ದೈವಾರಾದನೆ ಎಂಬುದು ಕರಾವಳಿ ಅಸ್ಮಿತೆ. ಜನರ ನಂಬಿಕೆ. ಇತಿಹಾಸದಲ್ಲೆ ಮೊದಲಾಗಿ ನಡೆದ 18 ಗುಳಿಗ ದೈವದ ನರ್ತನ ಸೇವೆ ಕಂಡು ಭಕ್ತರು ಪುನೀತರಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts