

ಪಡುಬಿದ್ರಿ: ವಿದ್ಯಾರ್ಥಿಗಳು ಸಮಾಜದಿಂದ, ವಿದ್ಯಾಭಿಮಾನಿಗಳಿಂದ ದೊರೆತ ಕೊಡುಗೆ ಸದುಪಯೋಗಪಡಿಸಿಕೊಂಡು ಶಾಲೆ ಹಾಗೂ ಊರಿಗೂ ಕೀರ್ತಿ ತರಬೇಕು. ಶೈಕ್ಷಣಿಕ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ ಮಾಡಬೇಕು ಎಂದು ನಿವೃತ್ತ ಮುಖ್ಯ ಶಿಕ್ಷಕ ಅನಂತ ಪಟ್ಟಾಭಿ ರಾವ್ ಹೇಳಿದರು.
ಸುಬ್ರಾಯ ಭಟ್ ಮೆಮೋರಿಯಲ್ ಟ್ರಸ್ಟ್ ರುಕ್ಮಿಣಿ ವಾಸುದೇವ ಭಟ್ ಮತ್ತು ಮನೆಯವರು ಪಡುಬಿದ್ರಿ ಶ್ರೀ ಬ್ರಹ್ಮವಿದ್ಯಾ ಪ್ರಕಾಶಿನಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪಡುಬಿದ್ರಿ ಗಣಪತಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡಿದ ಶಾಲಾ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರೌಢಶಾಲಾ ಮುಖ್ಯ ಶಿಕ್ಷಕಿ ಅನುರಾಧಾ ಪಿ.ಎಸ್. ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಅಶೋಕ ಕೆ., ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಮಕರಂದ, ರಮಾಕಾಂತ ರಾವ್, ಶರತ್ ಕುಮಾರ್, ಸುಧೀರ್ ಕುಮಾರ್ ವೈ, ಕಸ್ತೂರಿ ರಾಮಚಂದ್ರ ಉಪಸ್ಥಿತರಿದ್ದರು. ಶಿಕ್ಷಕಿ ವಸಂತಿ ಸ್ವಾಗತಿಸಿದರು. ಶ್ರೀಶ ಕಾರ್ಯಕ್ರಮ ನಿರೂಪಿಸಿದರು. ಪ್ರತೀಕ್ಷಾ ವಂದಿಸಿದರು.