ಕೋಟ: ಕಲಾವಿದ ಕೋಟ ಶಿವಾನಂದರವರ ನಾದಾಮೃತ ಸಂಸ್ಥೆಯ ಆಶ್ರಯದಲ್ಲಿ ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕಲಾಕೇಂದ್ರದ ಸಹಕಾರದಲ್ಲಿ ಆಯೋಜಿಸಲಾದ ಯಕ್ಷಗಾನ ತಾಳಮದ್ದಳೆ ಸಪ್ತಾಹಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಯಕ್ಷಗಾನ ಕಲಾಕೇಂದ್ರ ಅಧ್ಯಕ್ಷ ಆನಂದ.ಸಿ.ಕುಂದರ್ ಚಾಲನೆ ನೀಡಿದರು. ಸಾಲಿಗ್ರಾಮ ಗುರುನರಸಿಂಹ ದೇಗುಲ ಆಡಳಿತ ಮಂಡಳಿ ಅಧ್ಯಕ್ಷ ಡಾ. ಕೆ.ಎಸ್. ಕಾರಂತ್ ಹಾಗೂ ನಾದಾಮೃತ ಸಂಸ್ಥೆಯ ಮುಖ್ಯಸ್ಥ ಕೋಟ ಶಿವಾನಂದ ಶುಭಹಾರೈಸಿದರು.
ಕರ್ಣಾಟಕ ಬ್ಯಾಂಕ್ ಕುಂದಾಪುರ ವಿಭಾಗದ ಚೀಫ್ ಮ್ಯಾನೇಜರ್ ವಿಷ್ಣುಮೂರ್ತಿ ಉಪಾಧ್ಯಾಯ, ಕಲ್ಕೂರ ಪ್ರತಿಷ್ಠಾನ ಮುಖ್ಯಸ್ಥ ಪ್ರದೀಪ್ ಕುಮಾರ್ ಕಲ್ಕೂರ, ಸಾಹಿತಿ ಜನಾರ್ದನ ಹಂದೆ, ವೈದ್ಯ ಡಾ.ಆದರ್ಶ ಹೆಬ್ಬಾರ್ ಇದ್ದರು.
ಕಲಾಕೇಂದ್ರ ಕಾರ್ಯದರ್ಶಿ ರಾಜಶೇಖರ್ ಹೆಬ್ಬಾರ್ ಸ್ವಾಗತಿಸಿದರು. ಸೀತಾರಾಮ್ ಸೋಮಯಾಜಿ ವಂದಿಸಿದರು. ನಿವೃತ್ತ ಮುಖ್ಯ ಶಿಕ್ಷಕ ರಾಮಚಂದ್ರ ಐತಾಳ ಕಾರ್ಯಕ್ರಮ ನಿರೂಪಿಸಿದರು.